
ದಿನಾಂಕ18 / 03 / 2019 ಉಡುಪಿ ಜಿಲ್ಲಾ ಕಾರ್ಕಳ ತಾಲೂಕಿನ ವಿಸ್ಟ್ರೇಶ್ ಎಂಬುವವರು ಬೆಂಗಳೂರಿನಲ್ಲಿ ನಡೆದ ಏರ್ ಶೋ ಸಮಯದಲ್ಲಿ ಘಟಿಸಿದ ಅಗ್ನಿ ಅನಾಹುತದಲ್ಲಿ ತನ್ನ ಕಾರು ಅಗ್ನಿಗಾಹುತಿಯಾಗಿದ್ದು ಸದರಿ ಕಾರಿಗೆ ಈಗಾಗಲೇ ಪಾವತಿಸಿರುವ ರಸ್ತೆ ತೆರಿಗೆ ಮೊತ್ತ ಸುಮಾರು ರೂಪಾಯಿ 65 , 000 / – ಹಣವನ್ನು ವಾಪಾಸ್ಸು ಪಡೆಯಲು ಪ್ರಾದೇಶಿಕ ಸಾರಿಗೆ ಉಪ ಆಯುಕ್ತರಾದ ಶ್ರೀ ಆರ್ ಎಂ ವರ್ಣೇಕರ್‌ರವರಿಗೆ ಅರ್ಜಿ ನೀಡಿದ್ದು ಸದರಿ ಪ್ರಾದೇಶಿಕ ಸಾರಿಗೆ ಉಪ ಆಯುಕ್ತರು 6 , 500 / – ರೂ ಹಣಕ್ಕೆ ಬೇಡಿಕೆ ಇಟ್ಟಿದ್ದು , ಪಿಯ್ಯಾದಿದಾರರು ಸಾಧ್ಯವಿಲ್ಲವೆಂದಾಗ ರೂ . 5000 / – ನೀಡುವಂತೆ ಆಗ್ರಹಿಸಿದ್ದು ಮತ್ತು ಅವರ ಕಛೇರಿಯಲ್ಲಿ ಕೆಲಸ ಮಾಡುವ ಮುನಾಫ್ ಎಂಬುವವರ ಹತ್ತಿರ ವ್ಯವಹರಿಸುವಂತೆ ತಿಳಿಸಿರುತ್ತಾರೆ . ದಿನಾಂಕ 16 / 03 / 2019 ರಂದು ಮಧ್ಯಾಹ್ನ ಸುಮಾರು 02 : 20 ಗಂಟೆ ವೇಳೆಗೆ ಪ್ರಾದೇಶಿಕ ಸಾರಿಗೆ ಉಪ ಆಯುಕ್ತರಾದ ಶ್ರೀ . ಆರ್ . ಎಂ . ವರ್ಣೇಕರ್‌ರವರು ಫಿಲ್ಯಾದಿದಾರರಿಂದ ರೂ . 4000 / – ಲಂಚದ ಹಣವನ್ನು ಪಡೆಯುತ್ತಿದ್ದಾಗ ಉಡುಪಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಪ್ರಾದೇಶಿಕ ಸಾರಿಗೆ ಉಪ ಆಯುಕ್ತರು ಹಾಗೂ ಮುನಾಫ್ ಎಂಬ ಕಛೇರಿಯಲ್ಲಿ ಕೆಲಸ ಮಾಡುವ ವ್ಯಕ್ತಿಯನ್ನು ದಸ್ತಗಿರಿ ಮಾಡಿ ಲಂಚದ ಹಣವನ್ನು ಕಚೇರಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ ರೂ . 30 , 670 / – ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ . ಆಪಾದಿತರಿಬ್ಬರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆಪಾದಿತರಿಬ್ಬರಿಗೆ ದಿನಾಂಕ 18 / 03 / 2019 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ .

ತನಿಖೆ ಮುಂದುವರೆಸಿ ಆಪಾದಿತರು ವಾಸವಾಗಿರುವ ಮಂಗಳೂರಿನಲ್ಲಿರುವ ವಾಸ್ತವ್ಯದ ಮನೆಯಲ್ಲಿ ಅಕ್ರಮವಾಗಿ ಸಂಪಾದಿಸಿರುವ ನಗದನ್ನು ಇರಿಸಿರುವ ಮಾಹಿತಿ ಲಭ್ಯವಾದ ಮೇರೆಗೆ ದಿನಾಂಕ 16 / 03 / 2019 ರಂದು ತೆರಳಿ ಶೋದನೆ ನಡೆಸಿದಾಗ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ರೂ . 70 , 18 , 237 / – ನಗದು ( ಎಪ್ಪತ್ತು ಲಕ್ಷದ ಹದಿನೆಂಟು ಸಾವಿರದ ಇನ್ನೂರು ಮೊವತ್ತೇಳು ರೂಪಾಯಿ ) ಹಾಗೂ ಮನೆ , ಪ್ಲಾಟ್ , ಜಮೀನು , ಇತರ ಉಳಿತಾಯ ಬ್ಯಾಂಕ್ ಖಾತೆ , ಮತ್ತು ಹಲವಾರು ಮೌಲ್ಯಯುತವಾದ ದಾಖಲೆ ಪತ್ರಗಳು , ವಾಹನಗಳು , ಸೇರಿ ಒಟ್ಟು ಕೋಟ್ಯಾಂತರ ಮೌಲ್ಯದ ದಾಖಲೆಗಳು ಮತ್ತು ಬ್ಯಾಂಕ್ ಲಾಕರ್‌ನ 2 ಕೀಗಳು ದೊರಕಿದ್ದು ಅವುಗಳನ್ನು ವಶಕ್ಕೆ ಪಡೆಯಲಾಗಿದೆ . ತನಿಖೆ ಮುಂದುವರಿದಿದೆ .
City Today News
(citytoday.media)
9341998936
