
ಹಾಸನದಲ್ಲಿ ಮಾಜಿ ಸಚಿವರಾಗಿದದ ಎ . ಮಂಜು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು . ಶ್ರೀ ಸಿದ್ದರಾಮಯ್ಯ ಕ್ಯಾಬಿನೆಟ್ನಲಿದರು . 1999 ರಲ್ಲಿ ಬಿಜೆಪಿ ಶಾಸಕರಾಗಿ ಚುನಾಯಿತರಾಗಿದ್ದವರು . 2003 ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸನ್ಮಾನ್ಯ ಶ್ರೀ ಎಸ್ . ಎಂ . ಕೃಷ್ಣರವರು ಮುಖ್ಯಮಂತ್ರಿಗಳಾಗಿದ್ದಾಗ ಕಾಂಗ್ರೆಸ್ ಪಕ್ಷ ಸೇರಿದ್ದರು . ಪುನಃ ಕಾಂಗ್ರೆಸ್ ಪಕ್ಷ ತೊರೆದು ದಿನಾಂಕ 17 . 3 . 2019 ರಲ್ಲಿ ಬಿಜೆಪಿ ಪಕ್ಷವನ್ನು ಸೇರಿರುವ ಬಗ್ಗೆ .
1 ) ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಎ . ಮಂಜುರವರ ಅಕ್ಕನ ಪತಿ ಮಾಜಿ ಸಚಿವ ಹಾಗೂ ಮಾಜಿ ಲೋಕಸಭಾ ಸದಸ್ಯರಾದ ದಿವಂಗತ ಮಾನ್ಯಶ್ರೀ ಹೆಚ್ . ಎನ್ . ನಂಜೇಗೌಡರವರು ಮಾಜಿ ಪ್ರಧಾನಮಂತ್ರಿ ದಿವಂಗತ ಸನ್ಯ ಶ್ರೀ ರಾಜೀವಗಾಂಧಿಯವರ ವಿರುದ್ದ ಬೋಫೋರ್ಸ್ ಹಗರಣವನ್ನು ಆರೋಪ ಮಾಡಿ ಈ ಇಬ್ಬರೂ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದರು .
2 ) ಎ . ಮಂಜುರವರು ಅವಕಾಶವಾದಿಯಗಿದ್ದಾರೆ . ಬಿಜೆಪಿ ಪಕ್ಷದಲ್ಲಿ ಶಾಸಕರಾಗಿ ಹಣ ಮಾಡುವ ಉದ್ದೇಶದಿಂದ ಶ್ರೀ ಮಲ್ಯರವರು ರಾಜ್ಯಸಭೆಗೆ ನಿಂತಾಗ ಅವರಿಗೆ ಶಾಸಕರ ಮತ ಹಾಕಿಸಲು ಬೇಲೂರು ಕ್ಷೇತ್ರದ ಶಾಸಕರಾದ ಶ್ರೀ ಪುಟ್ಟರಂಗನಾಥ ಹಾಗೂ ಶ್ರೀ ಕೆ . ಹೆಚ್ . ಹನುಮೇಗೌಡರು ಇನ್ನು ಹಲವಾರು ಶಾಸಕರಿಂದ ಮತ ಹಾಕಿಸಲು ಹಣ ನೀಡುವ ಮುಂಚೂಣಿ ಪಾತ್ರವಹಿಸಿ ಅಲ್ಲಿಯೂ ಸಹ ಹಣ ಲಪಟಾಯಿಸಿದ್ದರು .
3 ) ಶ್ರೀ ರಾಜು ಚಂದ್ರಶೇಖರ ರವರು ರಾಜ್ಯಸಭೆಗೆ ಸ್ಪರ್ಧಿಸಿದ್ದಾಗ ಅಲ್ಲಿಯೂ ಸಹ ಹಣ ಪಡೆದು ಬಿಜೆಪಿ ಪಕ್ಷದ ಕೆಂಗಣ್ಣಿಗೆ ಗುರಿಯಾಗಿ ಪಕ್ಷದಿಂದ ಉಚ್ಚಾಟನೆಗೊಂಡರು .
4 ) ವಕ್ಕಲಿಗರ ಸಂಘದ ಕಾರ್ಯದರ್ಶಿಯಾಗಿದ್ದಾಗ ಅಲ್ಲಿಯೂ ಕೋಟ್ಯಾಂತರ ರೂಪಾಯಿ ಲಪಟಾಯಿಸಿ ಕ್ರಿಮಿನಲ್ ಕೇಸು ದಾಖಲಾಗಿತ್ತು . ಕೆಲವು ದಿನಗಳು ತಲೆಮರೆಸಿಕೊಂಡಿದ್ದುದನ್ನು ಕಾಣಬಹುದು .
5 ) ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿ ಎ . ಮಂಜುರವರ ಅವಧಿಯಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಹೀನಾಯವಾಗಿ ಸೋತಿದ್ದನ್ನು ಕಾಣಬಹುದಾಗಿದೆ . ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರನ್ನು ಕರೆತಂದು ಅವರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ಜಿಲ್ಲಾ ಪಂಚಾಯಿತಿ ಟಿಕೆಟನ್ನು ಕೊಟ್ಟಿದ್ದರಿಂದ 40 ಜಿಲ್ಲಾ ಪಂಚಾಯಿತಿ ಸ್ಥಾನದಲ್ಲಿ ಕೇವಲ 16 ಸ್ಥಾನ ಗೆಲುವು ಪಡೆದಿರುವುದನ್ನು ಕಾಣಬಹುದು . ತಾಲ್ಲೂಕು ಪಂಚಾಯಿತಿಯಲ್ಲಿ ಜಿಲ್ಲೆಯಲ್ಲಿ 8 ತಾಲ್ಲೂಕಿನಲ್ಲಿ ಒಂದು ತಾಲ್ಲೂಕುನಲ್ಲಿ ಸಹಾ ಅಧಿಕಾರಕ್ಕೆ ಬರಲಿಲ್ಲ . ಜಿಲ್ಲಾ ಪಂಚಾಯಿತಿಯಲ್ಲಿ ಕೇವಲ 16 ಸ್ಟಾನ ತಾಲ್ಲೂಕು ಪಂಚಾಯಿತಿಯಲ್ಲಿ ಜಿಲ್ಲೆಯ 7 ತಾಲ್ಲೂಕಿನಲ್ಲಿ ಒಂದು ತಾಲ್ಲೂಕಿನಲ್ಲಿ ಅಧಿಕಾರ ಇಲ್ಲದಂತೆ ಜಿಲ್ಲಾ ಉಸ್ತುವಾರಿ ಸಚಿವ ಎ . ಮಂಜು ನಾಯಕತ್ವ ಸಂಪೂರ್ಣ ವಿಫಲರಾಗಿದ್ದಾರೆ ಎಂಬುದಾಗಿ ಹಾಸನ ಜಿಲ್ಲಾ ಮುಖಂಡರು ಸುಮಾರು 30 ಜಿಲ್ಲಾ ಕಾಂಗ್ರೆಸ್ ಮುಖಂಡರು ಮಾನ್ಯಶ್ರೀ ಸಿದ್ದರಾಮಯ್ಯನವರು ಅಂದಿನ ಮುಖ್ಯಮಂತ್ರಿಗಳನ್ನು ಬೇಟಿ ಮಾಡಿ ಜಿಲ್ಲೆಯ ಅಧಿಕಾರಿಗಳಿಂದ ಹಾಗೂ ಉಪವಿಭಾಗಾಧಿಕಾರಿಗಳು , ತಹಶೀಲ್ದಾರರು , ಎಲ್ಲೆಯ ಉನ್ನತಾಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಾ ಕಾಂಗ್ರೆಸ್ ಕಾರ್ಯಕರ್ತರನ್ನು ಸಂಪೂರ್ಣ ನಿರ್ಲಕ್ಷಿಸುತ್ತಾರೆ . ಕೂಡಲೇ ಸಚಿವ ಸ್ಥಾನ ಬದಲಾಯಿಸಿ ದಿವಂಗತ ಶ್ರೀ ರುದ್ರೇಶ ಗೌಡರಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿ ಎಂದು ಮನವಿ ಮಾಡಿದ್ದೇವು . ಆ ಸಂದರ್ಭದಲ್ಲಿ ಜಿಲ್ಲೆಯ ಮಾಜಿ ಶಾಸಕರು ಹಾಗೂ ಮಾಜಿ ರಾಜ್ಯಸಭಾ ಸದಸ್ಯರು ನಿಗಮ ಮಂಡಳಿಯ ಅಧ್ಯಕ್ಷರು ಕೆಪಿಸಿಸಿ ಕಾರ್ಯದರ್ಶಿಗಳು , ಪಿಸಿಸಿ ಸದಸ್ಯರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಇನ್ನೂ ಮುಂತಾದ ನಾಯಕರು ಮನವಿ ಮಾಡಿದ್ದೆವು . ಈ ಸಂಬಂಧವಾಗಿ ನಾವು ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ : ಜಿ . ಪರಮೇಶ್ವರ್ , ಸಚಿವರಾದ ಡಿ . ಕೆ . ಶಿವಕುಮಾರ್ ರವರನ್ನು ಸಹಾ ಬೇಟಿ ಮಾಡಿದ್ದೆವು .
6 ) ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ನೇಮಕ ಮಾಡಲು ಒಂದು ಕೋಟಿ ರೂ ಪಡೆದು ನಗರಾಭಿವೃದಿ ಅಧ್ಯಕ್ಷರನ್ನು ಕೃಷ್ಣಸ್ವಾಮಿಯವರನ್ನು ಮಾಡಿದ್ದಾರೆ ಎಂದು ಜಿಲ್ಲಾ ದಲಿತ ಸಂಘಟನೆಯ ಕಾಂಗ್ರೆಸ್ ಕಾರ್ಯಕರ್ತ ಮುಖಂಡರು ಸುಮಾರು 15 ದಿನಗಳ ಕಾಲ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಧರಣಿ ಸತ್ಯಾಗ್ರಹ ಮಾಡಿ ಎ . ಮಂಜು ಪ್ರತಿಕೃತಿಯನ್ನು ಹಾಸನ ನಗರದಲ್ಲಿ ಪ್ರತಿಭಟನೆ ಮಾಡಿ ಪ್ರತಿಕೃತಿಯನ್ನು ದಹಿಸಿದ್ದನ್ನು ರಾಜ್ಯದ ಜನತೆ ನೋಡಿದ್ದಾರೆ .
7 ) ವಿಧಾನಸಭಾ ಚುನಾವಣೆಯಲ್ಲಿ ಹಾಸನ ಜಿಲ್ಲೆಯಲ್ಲಿ 7 ವಿಧಾನಸಭಾ ಸ್ಥಾನಗಳಿದ್ದು ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅಲ್ಲದ ವ್ಯಕ್ತಿಗಳನ್ನು ವಿಧಾನಸಭೆಯ ಅಭ್ಯರ್ಥಿಗಳನ್ನಾಗಿ ಮಾಡಿದಂತ ಮಂಜುರವರು ತಾನು ಸೋಲುವುದರ ಮೂಲಕ 7 ಸ್ಥಾನದಲ್ಲಿ ವಿಧಾನಸಭೆ ಅಭ್ಯರ್ಥಿಗಳು ಪರಾಜಿತ ಗೊಂಡಿದ್ದನ್ನು ಕಾಣಬಹುದು . 7 ) 2005ರಲ್ಲಿ ಅರಕಲಗೂಡು ಕ್ಷೇತ್ರದಿಂದ ಹೀನಾಯವಾಗಿ ಸೋತ ಎ . ಮಂಜು ಪುನಹ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದರು . ನಂತರ ನಡೆದ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆ ನಡೆದು ಕೇವಲ 8 ಜಿಲ್ಲಾ ಪಂಚಾಯಿತಿ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು .
8 ) ಹಾಸನ ಜಿಲ್ಲಾಧಿಕಾರಿಗಳ ಜೊತೆ ಅಸಭ್ಯವಾಗಿ ನಡೆದುಕೊಂಡು ಶ್ರವಣಬೆಳಗೊಳ ಮಹಾಭಿಷೇಕ ಕಾರ್ಯಕ್ರಮದ ಅಭಿವೃದ್ಧಿ ನಿರ್ವಹಣೆ ಕಾಮಗಾರಿ ಮಾಡಲು ಸುಮಾರು 500 ಕೋಟಿಗೂ ಹೆಚ್ಚು ಹಣ ಬಿಡುಗಡೆ ಮಾಡಲಾಗಿದ್ದು ಆ ಕಾಮಗಾರಿಯನ್ನು ಎ . ಮಂಜುರವರ ಬೆಂಬಲಿಗರಿಗೆ ನೀಡಬೇಕೆಂದು ಜಿಲ್ಲಾಧಿಕಾರಿ ಸಿಂಧಾರಿಯವರ ಜೊತೆ ವಾಗ್ವಾದಕ್ಕೆ ಇಳಿದರು . ಆ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಒಪ್ಪದ ಕಾರಣ ಜಿಲ್ಲಾಧಿಕಾರಿಡಿ ಶ್ರೀಮತಿ ಸಿಂಧಾರಿಯವರನ್ನು ವರ್ಗಾವಣೆ ಮಾಡಿಸಿದರು . ಕೋರ್ಟಿನ ಮೊರೆ ಹೋಗಿದ್ದರಿಂದ ಪುನಹ ಹಾಸನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು .
9 ) ಸಾರ್ವಜನಿಕರು ಎ . ಮಂಜು ವಿರುದ್ದ ಪ್ರತಿಭಟನೆಗಳನ್ನು ನಡೆಸಿದರು . ಎ . ಮಂಜು ದುರಾಡಳಿತ ದುರಹಂಕಾರ ಹಣ ಮಾಡುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷದ ವಿಧಾನಸಭೆಯ 7 ಜನ ಅಭ್ಯರ್ಥಿಗಳ ಪರಾಜಿತರಾಗಿ ಪಕ್ಷಕ್ಕೆ ಹಿನ್ನಡೆಯಾಗಿಯಾಗಿತ್ತು . ಹಾಸನ ಲೋಕಸಭಾ ಕ್ಷೇತ್ರದ ಮತದಾರ ಬಂಧುಗಳಲ್ಲಿ ಕಳಕಳಿಯ ಮನವಿ . ಎ . ಮಂಜು ಪಕ್ಷಾಂತರಿ ಹಾಗೂ ಭ್ರಷ್ಟಾಚಾರಿ ಹಾಗೂ ಸಮಯಸಾಧಕ , ಲಂಚಕೋರ ಕುಟುಂಬ ರಾಜಕಾರಣಿಯಾಗಿರುವುದರಿಂದ ನಮ್ಮ ಎಲ್ಲಾ ಮತದಾರರಲ್ಲಿ ಮನವಿ ಯಾವುದೇ ಕಾರಣಕ್ಕೂ ಮತವನ್ನು ಕೊಟ್ಟು ಭ್ರಷ್ಟಾಚಾರಕ್ಕೆ ಅನುಕೂಲ ಮಾಡಿಕೊಡಬೇಡಿ , ಹಾಸನ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಯಾರೂ ಎ . ಮಂಜುವಿನ ಜೊತೆ ಹೋಗುವುದಲ್ಲ ಹಾಗೂ ಬೆರಳೆಣಿಕೆಯಷ್ಟು ಅವನ ಹಿಂಬಾಲಕರು ಅವನ ಹಿಂದೆ ಹೋಗಬಹುದು . ಕಾಂಗ್ರೆಸ್ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿರುವ ನಮ್ಮ ರಾಷ್ಟ್ರನಾಯಕರೂ ಎಐಸಿಸಿ ಅಧ್ಯಕ್ಷರಾದ ಶ್ರೀ ರಾಹುಲ್‌ಗಾಂಧಿಯವರ ಮೈತ್ರಿ ಅಭ್ಯರ್ಥಿಯಾದ ಶ್ರೀ ಪ್ರಜ್ವಲ್ ರೇವಣ್ಣರವರನ್ನು ಬೆಂಬಲಿಸಬೇಕಾಗಿ ಕಾಂಗ್ರೆಸ್ ಕಾರ್ಯಕರ್ತರಿಗೆ ಹಾಗೂ ಹಾಸನ ಲೋಕಸಭಾ ಮತದಾರರಲ್ಲಿ ವಿನಂತಿಸಿದರು.
City Today News
(citytoday.media)
9341997936
