
21 / 09 / 2019 , ಮಂಗಳೂರು ತಾಲೂಕು ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರರೊಬ್ಬರು ಇವರು ವಹಿಸಿಕೊಂಡ ಹೆಚ್ಚುವರಿ ವಿದ್ಯುತ್ ಸಂಪರ್ಕ ಮತ್ತು ಹೊಸ ವಿದ್ಯುತ್ ಸಂಪರ್ಕ ಕೋರಿ ಅರ್ಜಿಯನ್ನು ಸಲ್ಲಿಸಿರುತ್ತಾರೆ . ಶ್ರೀ . ರಾಘವ . ಡಿ , ಕಿರಿಯ ಇಂಜಿನಿಯರ್ ( ವಿ ) , ಶಾಖಾಧಿಕಾರಿಗಳು , ಮೆಸ್ಕಾಂ , ಬೈಕಂಪಾಡಿ ಶಾಖಾ ಕಛೇರಿ , ಮಂಗಳೂರು ರವರು ಸದರಿ ಕಡತಗಳಿಗೆ ಅನುಮತಿ ನೀಡಲು ರೂ . 5 , 000 / – ಲಂಚದ ಹಣ ಕೊಡುವಂತೆ ಬೇಡಿಕೆ ಇಟ್ಟಿರುತ್ತಾರೆ . ದಿನಾಂಕ : 20 / 03 / 2019 ರಂದು ರಾಘವ . ಡಿ , ಕಿರಿಯ ಇಂಜಿನಿಯರ್ ( ವಿ ) , ಶಾಖಾಧಿಕಾರಿಗಳು , ಮೆಸ್ಕಾಂ , ಬೈಕಂಪಾಡಿ ಶಾಖಾ ಕಛೇರಿ , ಮಂಗಳೂರು ರವರು ದೂರುದಾರರಿಂದ ರೂ . 5 , 000 / ಲಂಚದ ಹಣವನ್ನು ಪಡೆಯುತ್ತಿದ್ದಾಗ ದಕ್ಷಿಣ ಕನ್ನಡ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುತ್ತಾರೆ . ಆರೋಪಿತರನ್ನು ದಸ್ತಗಿರಿ ಮಾಡಿ , ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ . ತನಿಖೆ ಮುಂದುವರೆದಿದೆ .
City Today News
(citytoday.media)
9341997936
