
ಆರ್ . ಟಿ . ನಗರ ಪೊಲೀಸ್ ಠಾಣೆಯ ಕುಖ್ಯಾತ ರೌಡಿ ಆಸಾಮಿಯಾದ ಫೈರೋಜ್ ಖಾನ್ @ ಬಲ್ಲು ಎಂಬುವನನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧನ . ಆರ್ . ಟಿ . ನಗರ ಪೊಲೀಸ್ ಠಾಣೆಯ ಕುಖ್ಯಾತ ರೌಡಿ ಆಸಾಮಿಯಾದ ಫೈರೋಜ್ ಖಾನ್ @ ಬಲ್ಲು , 36 ವರ್ಷ , ಚಾಮುಂಡಿನಗರ , ಆರ್ . ಟಿ . ನಗರ , ಬೆಂಗಳೂರು ಈತನನ್ನು ಗೂಂಡಾಕಾಯ್ದೆಯಲ್ಲಿ ಬಂಧಿಸಲಾಗಿದೆ . ಈತನು ಬೆಂಗಳೂರು ನಗರದ ಆರ್ . ಟಿ . ನಗರ , ಹೆಬ್ಬಾಳ ಪೊಲೀಸ್ ಠಾಣಾ ಸರಹದ್ದುಗಳಲ್ಲಿ ಸಕ್ರಿಯವಾಗಿ ರೌಡಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದು , ಈತನ ವಿರುದ್ಧ ಕೊಲೆ ಪ್ರಯತ್ನ ಕೊಲೆ ಬೆದರಿಕೆ , ದೊಂಬಿ , ಗಲಭೆ , ಹಲ್ಲೆ ಹಾಗೂ ಇತರೆ ಹಲವು ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ . ಈತನು 2007 ನೇ ಸಾಲಿನಿಂದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾನೆ . 2018 ನೇ ಸಾಲಿನಲ್ಲಿ ಹೆಬ್ಬಾಳ ಪೊಲೀಸ್ ಠಾಣಾ ಸರಹದ್ದಿನಲ್ಲಿ ಈತನು ಮತ್ತು ಈತನ ಸಹಚರರು ಸೇರಿಕೊಂಡು ಶ್ರೀ ಇಮ್ರಾನ್ ಎಂಬುವರಿಗೆ ಕೊಲೆ ಯತ್ನ ಮಾಡಿದ ಪ್ರಕರಣದಲ್ಲಿ ದಸ್ತಗಿರಿ ಮಾಡಿರುತ್ತಾರೆ . ಈತನು ರೌಡಿ ಚಟುವಟಿಕೆ ಮತ್ತು ಅಪರಾಧ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಬಂದು ಸಾರ್ವಜನಿಕರಲ್ಲಿ ಭಯ ಭೀತಿಯನ್ನುಂಟು ಮಾಡುತ್ತಿರುವುದರಿಂದ ಈತನನ್ನು ಗೂಂಡಾಕಾಯ್ದೆಯಡಿಯಲ್ಲಿ ಬಂಧನ ಮಾಡಲಾಗಿದೆ .

ಈತನನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಲು ಶ್ರೀ ಎಂ . ಶಿವಶಂಕರ್ ಎಸಿಪಿ , ಜೆ . ಸಿ . ನಗರ ಉಪ ವಿಭಾಗರವರ ಮಾರ್ಗದರ್ಶನದಲ್ಲಿ ಶ್ರೀ ಅಜಯ್ ಸಾರಥಿ , ಪೊಲೀಸ್ ಇನ್ಸ್ಪೆಕ್ಟರ್ , ಆರ್ . ಟಿ . ನಗರ ಪೊಲೀಸ್ ಠಾಣೆ ರವರು ವರದಿಯನ್ನು ಸಲ್ಲಿಸಿದ್ದು , ಸದರಿ ವರದಿಯನ್ನು ಪರಿಶೀಲಿಸಿದ ಪೊಲೀಸ್ ಆಯುಕ್ತರು , ಬೆಂಗಳೂರು ನಗರ ರವರು ಈತನನ್ನು ಗೂಂಡಾಕಾಯ್ದೆಯಡಿಯಲ್ಲಿ ಬಂಧಿಸಲು ಆದೇಶ ಮಾಡಿರುತ್ತಾರೆ .
City Today News
(citytoday.media)
9341997936
