
ಲೋಕಸಭಾ ಚುನಾವಣೆ – 2019 ರೌಡಿಗಳ ವಿರುದ್ಧ ಮುಂಜಾಗ್ರತ ಕ್ರಮ

ದಿನಾಂಕ : 10 . 03 . 2019 ರಿಂದ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು , ಈ ಸಂಬಂಧವಾಗಿ , ದಿನಾಂಕ : 23 . 03 . 2019 ರಂದು ಈಶಾನ್ಯ ವಿಭಾಗದ 11 ಪೋಲೀಸ್ ಠಾಣೆಗಳ ವ್ಯಾಪ್ತಿಯಲ್ಲಿರುವ ರೌಡಿ ಆಸಾಮಿಗಳ ಸಾಮೂಹಿಕ ಪೆರೇಡ್ ನಡೆಸಿರುವುದಲ್ಲದೇ ,


ದಿನಾಂಕ : 11 . 03 . 2019 ರಿಂದ 23 . 03 . 2019ರ ಅಂತ್ಯದವರೆಗೆ ಮುನ್ನೆಚ್ಚರಿಕೆಯ ಕ್ರಮವಾಗಿ ಒಟ್ಟು 439 ರೌಡಿ ಆಸಾಮಿಗಳನ್ನು ಭದ್ರತಾ ಕಾಯಿದೆ ಅಡಿಯಲ್ಲಿ ಕ್ರಮ ತೆಗೆದುಕೊಂಡು , ಈ ಎಲ್ಲಾ ರೌಡಿ ಆಸಾಮಿಗಳಿಗೆ ಚುನಾವಣಾ ಸಮಯದಲ್ಲಿ ಯಾವುದೇ ರೀತಿಯ ಕಾನೂನು ಬಾಹೀರ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಸೂಕ್ತ ಎಚ್ಚರಿಕೆ ನೀಡಿ , ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ .
City Today News
(citytoday.media)
9341997936
