
ದಿನಾಂಕ : 23 / 03 / 2019 , ಕೋಲಾರ ಜಿಲ್ಲೆ , ವೇಮಗಲ್ ಹೋಬಳಿ , ಧನಮಟ್ಟಹಳ್ಳಿ ಗ್ರಾಮದ ನಿವಾಸಿಯೊಬ್ಬರು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ( ಎ ) ಪಕ್ಷದಿಂದ ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮತದಾರರ ಪಟ್ಟಿಯಲ್ಲಿ ಭಾವಚಿತ್ರವಿರುವ ಗುರುತಿನ ಚೀಟಿಗಳ ನಕಲು ಪ್ರತಿಗಳನ್ನು ದೃಢೀಕರಿಸಿ ನೀಡಲು ತಹಸೀಲ್ದಾರ್ , ಕೋಲಾರ ರವರ ಕಛೇರಿಗೆ ಅರ್ಜಿಯನ್ನು ಸಲ್ಲಿಸಿರುತ್ತಾರೆ . ಶ್ರೀ . ವೈ . ಶಂಕರ ರೆಡ್ಡಿ , ಪ್ರಥಮ ದರ್ಜೆ ಸಹಾಯಕ , ಚುನಾವಣಾ ಶಾಖೆ , ಕೋಲಾರ ತಾಲ್ಲೂಕು ರವರು ರೂ . 3 , 000 / – ಲಂಚದ ಹಣಕ್ಕಾಗಿ ಬೇಡಿಕೆ ಇಟ್ಟಿರುತ್ತಾರೆ . ದಿನಾಂಕ : 23 / 03 / 2019 ರಂದು ಶ್ರೀ . ವೈ . ಶಂಕರ ರೆಡ್ಡಿ ರವರು ದೂರುದಾರರಿಂದ ರೂ . 3 , 000 / – ಲಂಚದ ಹಣವನ್ನು ಸ್ವೀಕರಿಸುತ್ತಿದ ಸಂದರ್ಭದಲ್ಲಿ ಕೋಲಾರ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುತ್ತಾರೆ . ಆರೋಪಿಯನ್ನು ದಸ್ತಗಿರಿ ಮಾಡಿ , ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ , ತನಿಖೆ ಮುಂದುವರೆದಿದೆ .
City Today News
(citytoday.media)
9341997936
