
ಉತ್ತರ ವಿಭಾಗ ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸಿದ ಆರೋಪಿಯ ಮೇಲೆ ಆತ್ಮರಕ್ಷಣೆಗಾಗಿ ಪೋಲೀಸರಿಂದ ಗುಂಡಿನ ದಾಳಿ ಆರೋಪಿ ಮುನಿರಾಜನಿಂದ ಹಲ್ಲೆಗೊಳಗಾದ ಗಾಯಗೊಂಡ ಆಸಾಮಿಗಳು ಪೊಲೀಸರು ಸಂತೋಷ್ ಸುದೀಪ್ ಮುನಿರಾಜ ( @ ಮುನ್ನ | ಬಸವರಾಜ್ ಬಿ . ಎನ್ . ಲೋಹಿತ್ ಪೊಲೀಸ್ ಇನ್ಸ್ಪೆಕ್ಟರ್ ಪಿರಾದುದಾರರಾದ ಸಂತೋಷ ಮತ್ತು ಆತನ ಸ್ನೇಹಿತರು

ದಿನಾಂಕ 26 – 03 – 2019 ರಂದು ರಾತ್ರಿ 7 – 30 . ಗಂಟೆ ಸಮಯದಲ್ಲಿ ನಂದಿನಿಲೇಔಟ್ ಪೊಲೀಸ್ ಠಾಣಾ ಸರಹದ್ದಿನ ಸರ್ಕಾರಿ ಆಟದ ಮೈದಾನ , ಮುನೇಶ್ವರ ಬ್ಲಾಕ್ , ಲಗ್ಗೆರೆ ಬೆಂಗಳೂರು ರಲ್ಲಿ ಆಟವಾಡಿ ಕುಳಿತ್ತಿರುವಾಗ 4 ಜನ ಆಸಾಮಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ಸಂತೋಷ್ ಮತ್ತು ಸುದೀಪ್ ಮೇಲೆ ಹಲ್ಲೆ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ನಂದಿನಲೇಔಟ್ ಪೊಲೀಸ್ ಠಾಣೆಯಲ್ಲಿ ಹಲ್ಲೆ , ಕೊಲೆ ಯತ್ನ ಪ್ರಕರಣ ದಾಖಲಾಗಿರುತ್ತದೆ . ಈ ಪ್ರಕರಣದಲ್ಲಿ ತನಿಖೆ ಕೈಗೊಂಡು ಆರೋಪಿಗಳ ಪತ್ತೆ ಕಾರ್ಯದಲ್ಲಿದಾಗ ಈ ಪ್ರಕರಣದಲ್ಲಿ ಮುನಿರಾಜ @ ಮುನ್ನ ಮತ್ತು ಆತನ ಸಹಚರರು ಭಾಗಿಯಾಗಿರುವುದಾಗಿ ತಿಳಿದು ಬಂದಿರುತ್ತದೆ . ಈ ಮಾಹಿತಿ ಮೇರೆಗೆ ಶ್ರೀ ಜಿ . ಎನ್ . ಲೋಹಿತ , ಪೊಲೀಸ್ ಇನ್ಸ್ ಪೆಕ್ಟರ್ ಮತ್ತು ಶ್ರೀ ಕುಮಾರ್ ಎಂ . ಪಿಎಸ್‌ಐ ಮತ್ತು ಅವರ ಸಿಬ್ಬಂದಿಯವರುಗಳು ಆರೋಪಿಯು ಕೂಲಿನಗರದ ಪಕ್ಕದಲ್ಲಿರುವ ಬುದ್ದನಗರದಲ್ಲಿ ಇರುವುದಾಗಿ ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ದಿನಾಂಕ 28 – 03 – 2019 ರಂದು ಬೆಳಗಿನ ಜಾವ ಸುಮಾರು 6 – 00 ಗಂಟೆ ಸಮಯದಲ್ಲಿ ಬಂಧಿಸಲು ಹೋದಾಗ ಆರೋಪಿ ಮುನಿರಾಜ ( @ ಮುನ್ನ ಎಂಬುವನು ಶ್ರೀ ಬಸವರಾಜ್ ಪಿಸಿ ರವರ ಮೇಲೆ ಚಾಕಿನಿಂದ ಏಕಾಏಕಿ ಹಲ್ಲೆ ಮಾಡಿರುತ್ತಾನೆ . ತಕ್ಷಣ ಪೊಲೀಸ್ ಇನ್ಸ್‌ಪೆಕ್ಟರ್ , ಲೋಹಿತ್ ರವರು ಗಾಳಿಯಲ್ಲಿ 1 ಸುತ್ತು ಗುಂಡು ಹಾರಿ ಆರೋಪಿಯನ್ನು ಶರಣಾಗುವಂತೆ ಸೂಚಿಸಿದ್ದರೂ ಕೂಡ ಆರೋಪಿಯು ಪೊಲೀಸರ ಮೇಲೆ ಹಲ್ಲೆ ಮುಂದುವರಿಸಲು ಪ್ರಯತ್ನಿಸಿದಾಗ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿಯವರ ಆತ್ಮರಕ್ಷಣೆಗಾಗಿ ಆರೋಪಿ ಮುನಿರಾಜ ( @ ಮುನ್ನ ಎಂಬುವನ ಎಡಗಾಲಿಗೆ 1 ಸುತ್ತು ಗುಂಡಿನ ದಾಳಿ ನಡೆಸಿರುತ್ತಾರೆ . ತಕ್ಷಣ ಆರೋಪಿ ಮುನಿರಾಜ @ ಮುನ್ನ ಮತ್ತು ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿಯವರನ್ನು ಚಿಕಿತ್ಸೆಗಾಗಿ ಕಣ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ .

ಈ ಪ್ರಕರಣದಲ್ಲಿ ಆರೋಪಿಯಾದ ಮುನಿರಾಜ ( @ ಮುನ್ನ ಮತ್ತು ಆತನ ಸಹಚರರು ಲಗ್ಗೆರೆ ಸ್ಲಂ ಪ್ರದೇಶದಲ್ಲಿ ತನ್ನದೇ ಅಧಿಪತ್ಯ ಹೊಂದಲು ಈ ರೀತಿಯ ಕೃತ್ಯಗಳನ್ನು ಮಾಡುತ್ತಿರುವುದಾಗಿ ತಿಳಿದು ಬಂದಿರುತ್ತದೆ . ಈ ಆರೋಪಿಯ ವಿರುದ್ದ ನಂದಿನಿಲೇಔಟ್ , ರಾಜಗೋಪಾಲನಗರ , ಮಹಾಲಕ್ಷ್ಮಿಲೇಔಟ್ , ಸುಬ್ರಮಣ್ಯನಗರ ಪೊಲೀಸ್ ಠಾಣೆಯ ಕಾವೇರಿ ಗಲಾಟೆಯಲ್ಲಿನ ದೊಂಬಿ ಪ್ರಕರಣ , ಹಲ್ಲೆ , ಕೊಲೆಯತ್ನ , ವಾಹನಗಳಿಗೆ ಬೆಂಕಿ ಹಚ್ಚುವ ಒಟ್ಟು 9 ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ . ಆರೋಪಿ ಮತ್ತು ಆತನ ಸಹಚರರು ಇನ್ನು ಹೆಚ್ಚಿನ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ .
City Today News
(citytoday.media)
9341997936
