
ತುಮಕೂರು ಜಿಲ್ಲೆ , ಪಾವಗಡ ತಾಲ್ಲೂಕಿನ ಗ್ರೇಡ್ – 3 ಗುತ್ತಿಗೆದಾರರು ಕೊರಟಗೆರೆ ಪಟ್ಟಣ ಪಂಚಾಯ್ತಿಯಿಂದ ಕರೆಯಲಾದ ಇ – ಪ್ರೊಕ್ಯೂರ್‌ಮೆಂಟ್ ಮೂಲಕ ಕೋಟೆ ಬೀದಿಯ ಸಮುದಾಯ ಭವನ ನಿರ್ಮಾಣ ಮಾಡಲು ಗುತ್ತಿಗೆಯನ್ನು ಪಡೆದುಕೊಂಡಿರುತ್ತಾರೆ . ಸದರಿ ಕಾಮಗಾರಿಯ ಮೊದಲನೇ ಕಂತಿನ ಹಣವನ್ನು ಬಿಡುಗಡೆ ಮಾಡಲು ಶ್ರೀ . ಜನಾರ್ಧನ ಎಂ . ಕೆ , ಜಿ . ಐ . ಎಸ್ ನೋಡಲ್ ಇಂಜಿನಿಯರ್ , ಪಟ್ಟಣ ಪಂಚಾಯ್ತಿ , ಕೊರಟಗೆರೆ ರವರು ರೂ . 10 , 000 / – ಲಂಚದ ಹಣಕ್ಕಾಗಿ ಬೇಡಿಕೆ ಇಟ್ಟಿರುತ್ತಾರೆ . ದಿನಾಂಕ : 01 / 04 / 2019 ರಂದು ಶ್ರೀ . ಜನಾರ್ಧನ ಎಂ . ಕೆ ರವರ ಸೂಚನೆಯ ಮೇರೆಗೆ ಡಿ ಗ್ರೂಪ್ ನೌಕರರಾದ ಶ್ರೀ . ಸುರೇಶ್ ಎ . ಡಿ ರವರು ದೂರುದಾರರಿಂದ ರೂ . 10 , 000 / ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ವೇಳೆಯಲ್ಲಿ ತುಮಕೂರು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುತ್ತಾರೆ . ಇಬ್ಬರೂ ಆರೋಪಿತರನ್ನು ದಸ್ತಗಿರಿ ಮಾಡಿ , ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ , ತನಿಖೆ ಮುಂದುವರೆದಿದೆ .
City Today News
(citytoday.media)
9341997936
