
ದಿನಾಂಕ 05 / 04 / 2019 , ದೊಡ್ಡಬಳ್ಳಾಪುರ ತಾಲ್ಲೂಕು , ಬೀಡಿಗೆರೆ ಗ್ರಾಮದ ಸಿವಿಲ್ ಕಂಟ್ರಾಕ್ಟರ್ ರವರು ಕೊಡಿಗೆಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾದಗೊಂಡನಹಳ್ಳಿ ಗ್ರಾಮಕ್ಕೆ ನೀರುಗಾವಲು ಕಾಮಗಾರಿ ನಡೆಸಿ , ಕಾಮಗಾರಿಯನ್ನು ಮುಕ್ತಾಯ ಮಾಡಿದ್ದು , ಕಾಮಗಾರಿಯ ನಾಮಿನಲ್ ಮಸ್ಟರ್ ರೋಲ್‌ನ ( ಎನ್ . ಎಂ . ಆರ್ ) ಮೊತ್ತ ಮಂಜೂರು ಮಾಡಲು ಶ್ರೀ . ಕೃಷ್ಣಯ್ಯ , ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ , ಕೊಡಿಗೆಹಳ್ಳಿ ಗ್ರಾಮ ಪಂಚಾಯತಿ ರವರು ರೂ . 48 , 000 / – ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ . ದಿನಾಂಕ : 05 / 04 / 2019 ರಂದು ದೂರುದಾರರಿಂದ ಶ್ರೀ . ಕೃಷ್ಣಯ್ಯ ರವರು ರೂ . 33 , 000 / – ಲಂಚದ ಹಣವನ್ನು ಪಡೆಯುವಾಗ ಬೆಂಗಳೂರು ಗ್ರಾಮಾಂತರ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುತ್ತಾರೆ . ಆರೋಪಿಯನ್ನು ದಸ್ತಗಿರಿ ಮಾಡಿ , ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ . ತನಿಖೆ ಮುಂದುವರೆದಿದೆ .
City Today News
(citytoday.media)
9341997936
