
ದಿನಾಂಕ 13 – 04 – 2019 ರಂದು ಪಿರಾದುದಾರರಾದ ಶ್ರೀ ಸುಂದ್ರೇಶ್ ಎಂಬುವವರು ರಾಜಗೋಪಾಲನಗರ ಪೊಲೀಸ್ ಠಾಣಾ ಸರಹದ್ದಿನ ಲವಕುಶನಗರದಲ್ಲಿ ಮೋಹನ್ ಎಂಬುವವರ ಮನೆಯಲ್ಲಿ ತನ್ನ ತಮ್ಮ ಮಧು ಎಂಬುವನನ್ನು ರಾತ್ರಿ ಸುಮಾರು 8 – 30 ಗಂಟೆಯಲ್ಲಿ ಯಾರೋ ಕೊಲೆ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿರುತ್ತದೆ .

ಈ ಪ್ರಕರಣದ ಆರೋಪಿಗಳಾದ 1 ) ಮೋಹನ , 29 ವರ್ಷ , 2 ) ರಮ್ಯಾ , 25 ವರ್ಷ . ಲವಕುಶನಗರ , ಲಗ್ಗೆರೆ , ಬೆಂಗಳೂರು . ಇವರುಗಳ ಸ್ವಂತ ವಿಳಾಸ ಗೋಪನಹಳ್ಳಿ ಹೊಳೇನರಸಿಂಹಪುರ ತಾಲ್ಲೂಕ , ಹಾಸನ ಜಿಲ್ಲೆ ಎಂಬುವರುಗಳನ್ನು ದಸ್ತಗಿರಿ ಮಾಡುವಲ್ಲಿ ರಾಜಗೋಪಾಲನಗರ ಪೊಲೀಸರು ಯಶಸ್ವಿಯಾಗಿರುತ್ತಾರೆ . ಈ ಪ್ರಕರಣದಲ್ಲಿ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಮೃತ ಮಧು ಸ್ವಂತ ವಾಹನವನ್ನು ತೆಗೆದುಕೊಂಡು ಕಂಪನಿಗೆ ಆಟ್ಯಾಚ್ ಮಾಡಿಕೊಂಡು ಚಾಲಕನಾಗಿ ಕೆಲಸ ಮಾಡಿಕೊಂಡಿರುತ್ತಾನೆ . ಈತನು ಮತ್ತು ಆರೋಪಿ ಮೋಹನ್ ಸ್ನೇಹಿರಾಗಿದ್ದು , ಒಂದೇ ಊರಿನವರಾಗಿರುತ್ತಾರೆ . ಆ ಸಲುಗೆಯಿಂದ ಮೃತ ಮಧು ಆರೋಪಿ ಮೋಹನ್ ಮನೆಗೆ ಬಂದು ಹೋಗುತ್ತಿದ್ದನು . ಈಗ್ಗೆ 2 – 3 ತಿಂಗಳಿಂದ ಆರೋಪಿತ ಮೋಹನ್ ಹೆಂಡತಿ ರಮ್ಯಾಳನ್ನು ಮೃತ ಮಧು ನಿನ್ನ ಕಂಡರೆ ನನಗೆ ಇಷ್ಟ . ನಾನು ಕರೆದ ಕಡೆಯಲ್ಲೆಲ್ಲಾ ನೀನು ಬರಬೇಕು ಇಲ್ಲವಾದರೆ ನಿನ್ನ ಗಂಡನಿಗೆ ನಿನ್ನ ಬಗ್ಗೆ ಕೆಟ್ಟದಾಗಿ ಹೇಳಿ , ನಿನ್ನ ಮಾನ ಮರ್ಯಾದೆ ತೆಗೆಯುತ್ತೇನೆಂದು ಬೆದರಿಸುತ್ತಿದ್ದನು . ಈ ವಿಷಯವನ್ನು ರಮ್ಯಾ ತನ್ನ ಗಂಡನಿಗೆ ತಿಳಿಸಿದ್ದು ಇಬ್ಬರು ಕೂಡಿ ಹಲವಾರು ಬಾರಿ ಮೃತ ಮಧುಗೆ ಬುದ್ದಿವಾದವನ್ನು ಹೇಳಿದರು ಆತನು ಕೇಳದೆ ತನ್ನ ಹಳೆ ಚಾಳಿಯನ್ನು ಮುಂದುವರೆಸಿದ್ದನು . ಈತನಿಗೆ ಗತಿ ಕಾಣಿಸಬೇಕೆಂದು ತೀರ್ಮಾನಿಸಿ , ಮೋಹನ್ ಮತ್ತು ಆತನ ಹೆಂಡತಿ ರಮ್ಯಾ ಇಬ್ಬರು ಸೇರಿಸಿಕೊಂಡು ಕಬ್ಬಿಣದ ರಾಡ್‌ನಿಂದ ಬಲವಾಗಿ ತಲೆಗೆ ಹೊಡೆದು ಕೊಲೆ ಮಾಡಿರುವುದಾಗಿ ತಿಳಿಸಿರುತ್ತಾನೆ . ಈ ಪ್ರಕರಣದಲ್ಲಿ ಶ್ರೀ ವಿ . ಧನಂಜಯ , ಎಸಿಪಿ , ಮಲ್ಲೇಶ್ವರಂ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಶ್ರೀ ದಿನೇಶ್ ಪಾಟೀಲ್ , ಪೊಲೀಸ್ ಇನ್ಸ್ಪೆಕ್ಟರ್ , ರಾಜಗೋಪಾಲನಗರ ಪೊಲೀಸ್ ಠಾಣೆ , ಶ್ರೀ ಸಿ . ರವಿಕುಮಾರ್ , ಪಿಎಸ್‌ಐ ಮತ್ತು ಸಿಬ್ಬಂದಿಯವರುಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ .
City Today News
(citytoday.media)
9341997936
