
ಶ್ರೀ ರಾಮ ಆದರ್ಶ ಪುರುಷ , ಅವನ ರಾಜ್ಯದಲ್ಲಿ ಸುಭೀಕ್ಷ , ಸಮೃದ್ಧಿ , ಸಂರಕ್ಷಣೆಗಳ ನೆಮ್ಮದಿ ಇತ್ತು . ಪ್ರಜೆಗಳ ಆನಂದಕ್ಕಾಗಿ ಸ್ವಂತ ಸುಖವನ್ನು ತ್ಯಾಗ ಮಾಡಿದ ಶ್ರೀ ರಾಮ ಒಂದು ಆದರ್ಶ ಪೂರ್ಣ ರಾಷ್ಟ್ರದ ಕಲ್ಪನೆಗೆ ಅಡಿಪಾಯ ಹಾಕಿದ . ತನ್ನ ಕ್ಷಾತ್ರ ಧರ್ಮದ ಮೂಲಕ , ರಾಮ ರಾಜ್ಯ ಸ್ಥಾಪನೆ ಮಾಡಿದೆ . ಪ್ರಜಾಪ್ರಭುತ್ವಕ್ಕೆ ನಾಂದಿ ಹಾಡಿದ ಮೂಲ ಪುರುಷ ರಾಮ . ಇದು ಪುರಾಣದ ಕಥೆ ಆದರೆ , ಸ್ವತಂತ್ರ್ಯ ಪೂರ್ವದಲ್ಲಿ ಭಾರತ ದೇಶವನ್ನು ಆಳಿದ ರಾಜರುಗಳು , ಸಾಂಸ್ಕೃತಿಕವಾಗಿ , ಸಾಮಾಜಿಕವಾಗಿ , ರಕ್ಷಕರಾಗಿ ಆಡಳಿತ ನಡೆಸುವಲ್ಲಿ ಹೆಸರಾದರು . ಕರ್ನಾಟಕದ ಮಟ್ಟಿಗಂತೂ , ರಾಜ ವಂಶಗಳು ನಿರ್ವಹಿಸಿದ ಪಾತ್ರ ನೀಡಿದ ಸಾಮಾಜಿಕ ಕೊಡುಗೆ ಬಹುದೊಡ್ಡದಿದೆ . ಹಿಂದೂ ಧರ್ಮದ ಮೌಲ್ಯಗಳನ್ನು ಎತ್ತಿ ಹಿಡಿದ ವಿಜಯನಗರ ಸಾಮ್ರಾಜ್ಯ , ಸಕಲ ಧರ್ಮೀಯರನ್ನು ಪ್ರೀತಿಯಿಂದ ನಡೆಸಿಕೊಂಡಿದ್ದರ ಬಗ್ಗೆ , ಆಗ ಭೇಟಿ ಕೊಟ್ಟ ವಿದೇಶಿ ಪ್ರವಾಸಿಗರ ಹೇಳಿಕೆ ಇನ್ನು ದಾಖಲಾಗಿದೆ . 500ಕ್ಕಿಂತಲೂ ಹೆಚ್ಚು ವರ್ಷಗಳ ಕಾಲ ಆಡಳಿತ ನಡೆಸಿದ ಮೈಸೂರು ಅರಸರು ಕರ್ನಾಟಕ ಚರಿತ್ರೆಗೆ ಸಿಂಹಪಾಲು ಕೊಡುಗೆ ನೀಡಿದ್ದಾರೆ . ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದರ್ಶಿತ್ವ , ದೇಶ ವಿದೇಶಗಳಲ್ಲೂ ಗೌರವ ತರುವಂತದ್ದು . ಇಂತಹ ಚರಿತ್ರೆ ಇರುವ ಕ್ಷತ್ರಿಯ ಸಮುದಾಯ ಪ್ರಜಾಪ್ರಭುತ್ವದಲ್ಲಿ ಆಳುವ ಸರ್ಕಾರಗಳು ಬಂದ ನಂತರ ಸೂಕ್ತ ಸ್ಥಾನಮಾನ ಪಡೆಯುವಲ್ಲಿ ವಿಫಲವಾಗಿದೆ . ತನ್ನ ಸ್ವಂತ ಶಕ್ತಿಯ ಮೇಲೆ ನೆಲೆ ನಿಲ್ಲಲು ಶ್ರಮಿಸುತ್ತಿರುವ ಕ್ಷತ್ರಿಯ ಸಮುದಾಯ ಕರ್ನಾಟಕ ರಾಜ್ಯದಲ್ಲಿ ಸರಾಸರಿ 1 ಕೋಟಿಗಿಂತ ಹೆಚ್ಚು ಇರುವ ಜನಸಂಖ್ಯೆ ಇದೆ . ನೂರಾರು ಒಳ ಉಪ ಪಂಗಡಗಳಿಂದ ಒಗ್ಗೂಡದೆ ನಿರ್ಲಕ್ಷ ಕ್ಕೆ ಒಳಗಾಗಿದೆ . ತಮಗೆ ಸಿಗಬೇಕಾದ ಪ್ರಾಮಾಣಿಕವಾದ ಅಂತ ಪಾಲು ಪಡೆಯಲು , ಇಂದು ಆಳುವ ಸರ್ಕಾರಗಳ ಬಳಿ ಅಂಗಲಾಚ ಬೇಕಾದಂತಹ ಶೋಚನೀಯ ಪರಿಸ್ಥಿತಿ ಇದೆ . ರಕ್ಷಣೆಗೆ ಹೆಸರಾದ ಕ್ಷತ್ರಿಯರು . ರಕ್ಷಣೆಂದಿಲ್ಲದೆ ಶೋಷಣೆಗೊಳ ಪಡುತ್ತಿದ್ದಾರೆ . ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ , ಯಾವ ಪಕ್ಷಗಳು ಕ್ಷತ್ರಿಯ ನಾಯಕರಿಗೆ ಆದ್ಯತೆ ನೀಡಲಿಲ್ಲ . ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕ್ಷತ್ರಿಯ ಸಮುದಾಯದ ನಾಯಕರು , ಪಕ್ಷಗಳಲ್ಲಿ ದುಡಿಯುತ್ತಿದ್ದಾರೆ ಹೊರತು , ಅಭ್ಯರ್ಥಿಗಳು ಆಗಲು ಸಾಧ್ಯವಾಗಿಲ್ಲ . ಎಲ್ಲ ಪಕ್ಷಗಳು ಈ ನಿಟ್ಟಿನಲ್ಲಿ ಕ್ಷತ್ರಿಯ ಸಮಾಜವನ್ನು ಅಪಮಾನ ಮಾಡಿದೆ . ನಾವುಗಳು ಕ್ಷತ್ರಿಯರಾಗಿದ್ದರು , ಛಲ , ಬಲ , ಹೊಂದಾಣಿಕೆಯಿಂದ ಬದುಕನ್ನು ನಡೆಸುತ್ತಾ ಬಂದಿದ್ದೇವೆ . ಸಂಘಟನೆಯ ಕೊರತೆಯಿಂದಾಗಿ , ರಾಜಕೀಯ ಸ್ಥಾನಮಾನ , ಪಡೆಯಲು ಸಾಧ್ಯವಾಗುತ್ತಿಲ್ಲ . ಸರ್ಕಾರದ ಗಮನ ಸೆಳೆಯುವಲ್ಲಿಯೂ ಕೂಡ ನಾವು ಹಿಂದುಳಿದಿದ್ದೇವೆ . ಕ್ಷತ್ರಿಯ ಸಮಾಜದ ಬಗ್ಗೆ ಯಾರೊಬ್ಬರೂ ಚಿಂತಿಸಿಲ್ಲ , ಧ್ವನಿ ಎತ್ತಿರುವದಿಲ್ಲ . ನಮ್ಮನ್ನು ಆಳುತ್ತಿರುವ ಈ ಸರ್ಕಾರಗಳ ಧೋರಣೆ , ಪಕ್ಷಪಾತಕ್ಕೆ ಸೂಕ್ತ ರೀತಿಯ ಮಾರ್ಗೋಪಾಯ ಕಂಡುಕೊಳ್ಳುವ ನಿಟ್ಟಿನಲ್ಲಿ , ಕ್ಷತ್ರಿಯರು ಮುಂದಿನ ದಿನಗಳಲ್ಲಿ ಎಚ್ಚರಿಕೆ ವಹಿಸಬೇಕಾಗುತ್ತದೆ . ಹೋರಾಟಕ್ಕೆ ಸಜ್ಜಾಗಬೇಕಾಗುತ್ತದೆ .ಇಂತಹ ಅನ್ಯಾಯವನ್ನು ಸಂಬಂಧಪಟ್ಟವರು ಹಾಗೂ ಸರಕಾರಗಳ ಗಮನಕ್ಕೆ ತಂದು ಸೂಕ್ತ ರೀತಿಯ ನ್ಯಾಯ ದೊರಕಿಸಲು ನೆರವಾಗಬೇಕೆಂದು ಅಖಿಲ ಭಾರತ ಕ್ಷತ್ರಿಯ ಮಹಾಸಭಾ ಅಧ್ಯಕ್ಷರಾದ ಶ್ರೀಧರ್ ರಾಜ್ ಅರಸ್ ಪತ್ರಿಕಾ ಗೋಷ್ಠಿಯ ಮುಖೆನ ಆಗ್ರಹಿಸಿದರು.
City Today News
(citytoday.media)
9341997936
