
ಬೆಂಗಳೂರು , ಏಪ್ರಿಲ್ 13 , 2019 : – ಭಾರತದಲ್ಲಿ ಟೈರ್ ಉತ್ಪಾದನಾ ಕ್ಷೇತ್ರದಲ್ಲಿ ಅತ್ಯಂತ ದೊಡ್ಡ ಸಂಸ್ಥೆಯಾದ ಎಂಆರ್ ಎಫ್ ಈಗ ಮೋಟಾರ್ ಸೈಕಲ್ ಟೈರ್‌ಗಳ ಶ್ರೇಣಿಯಾದ ‘ ಎಂಆರ್‌ಎಫ್ ನೈಲೊಗ್ರಿಪ್ ಈಜೀರೈಡ್ ‘ ಅನ್ನು ಬಿಡುಗಡೆ ಮಾಡಿದೆ .

ಈ ಸಂದರ್ಭದಲ್ಲಿ ಎಂಆರ್‌ಎಫ್ ಲಿಮಿಟೆಡ್‌ನ ಮಾರುಕಟ್ಟೆ ವಿಭಾಗ ಕಾರನಿರ್ವಾಹಕ ಉಪಾಧ್ಯಕ್ಷ ಕೋಶಿ ವರ್ಗಿಸ್ ಅವರು ಮಾತನಾಡಿ , “ ನೈಲೊಗ್ರಿಮ್ , ಜ್ಞಾಪರ್ ಮತ್ತು ಮೊಗ್ರಿಪ್‌ಗಳಂತಹ ದಂತಕಥೆಯಾಗಿರುವ ಬ್ರಾಂಡ್‌ಗಳ ಜೊತೆಗೆ ವಿಸ್ತಾರವಾದ ಶ್ರೇಣಿಯ ಮೋಟಾರ್ ಸೈಕಲ್ ಟೈರ್‌ಗಳನ್ನು ಎಂಆರ್‌ಎಫ್ ಗ್ರಾಹಕರಿಗೆ ಪೂರೈಸುತ್ತಿದೆ . ಎಂಆರ್‌ಎಫ್ ನೈಲೋಗ್ರಿಪ್ ಇಜೀರೈಡ್ ಪ್ರಮುಖ ಉತ್ಪನ್ನವಾಗಿದ್ದು , ತಮ್ಮ ಟೈಗಳಿಂದ ಹೆಚ್ಚು ಉತ್ತಮವಾದ ಸವಾರಿಯ ಅನುಭವ ಪಡೆಯಲಿಚ್ಚಿಸುವ ಗುಣಗ್ರಾಹಿ ಗ್ರಾಹಕರಿಗಾಗಿ ವಿನ್ಯಾಸಗೊಳಿಸಲಾಗಿದೆ .

ಎಂಆರ್ ಎಫ್ ನೈಲೋಪ್ ಈಭೀರತ್‌ನ್ನು ಎಂಆರ್ ಎಫ್ ಟೈರ್‌ಗಳಲ್ಲಿ ಸಾಮಾನ್ಯವಾಗಿರುವ ರಸ್ತೆ ಮೇಲಿನ ಹಿಡಿತ ಮತ್ತು ದೀರ್ಘ ಬಾಳಿಕೆಗಳಲ್ಲಿ ಯಾವುದೇ ರಾಜೀ ಇಲ್ಲದೆ , ಅನುಕೂಲದ ಅಂಶವನ್ನು ಸೇರಿಸಿ ವಿನ್ಯಾಸಗೊಳಿಸಲಾಗಿದೆ . ಇದು ನಿಜಕ್ಕೂ ಬೈಕ್ ಸವಾರರ ಆನಂದವಾಗಿದೆ ” ಎಂದರು . ಎಂಆರ್ ಎಫ್ ನೈಲೋಗ್ರಿಪ್ ಈಜ್ಜರೈಡ್ ಮೋಟಾರ್‌ಸೈಕಲ್ ಟೈರ್‌ಗಳು ಟ್ಯೂಬ್ ಮತ್ತು ಟ್ಯೂಬ್‌ಲೆಸ್ ಆವೃತ್ತಿಗಳಲ್ಲಿ ಮುಂಭಾಗ ಮತ್ತು ಹಿಂಭಾಗದ ಒಟ್ಟು 10 ಗಾತ್ರಗಳಲ್ಲಿ ಸಾದರಪಡಿಸಲಾಗುತ್ತಿದೆ . ಎಲ್ಲಾ ಜನಪ್ರಿಯ ಬೈಕ್‌ಗಳಿಗೆ ಇದು ಸೂಕ್ತವಾಗಿ ಹೊಂದಿಕೊಳ್ಳುತ್ತವಲ್ಲದೆ , ಎನ್ ಫೀಲ್ಡ್ ಮತ್ತು ಹಾರ್ಲೆ ಡೇವಿಡ್ಸನ್ ಮೋಟಾರ್ ಬೈಕ್‌ಗಳಿಗೂ ಸೂಕ್ತವಾಗಿರುತ್ತವೆ . ಎನ್‌ಹ್ಯಾನ್ಸ್ ಮತ್ತು ಯುನಿಕ ಬ್ರೆಡ್ ವಿನ್ಯಾಸಗಳಿಂದ ಈ ಟೈರ್ ಪ್ರತ್ಯೇಕತೆ ಹೊಂದಿದೆ . • ಹೆಚ್ಚು ಉತ್ತಮವಾದ ಸವಾರಿ ಅನುಕೂಲ • ಅಂಕುಡೊಂಕಿನ ರಸ್ತೆಗಳಲ್ಲಿನ ಚಲನೆಯನ್ನು ನಿಭಾಯಿಸಲು ಎಸ್ತತೆ ಸ್ಥಿರತೆ ನೀರಿನಿಂದ ತೇವಗೊಂಡಿರುವ ರಸ್ತೆಗಳಲ್ಲಿ ಪರಿಣಾಮಕಾರಿಯಾಗಿ ನೀರನ್ನು ಹೊರತಳ್ಳಿ ಉತ್ತಮ ರೀತಿಯಲ್ಲಿ ರಸ್ತೆಯ ಮೇಲಿನ ಹಿಡಿತ ಕಂಡುಕೊಳ್ಳಲು ಕಾರಕ್ಷಮತೆಯ ವಾಟರ್ ಚಾನಲಿಂಗ್ ತನ್ನ ಹೆಸರಿಗೆ ತಕ್ಕಂತೆ ಎಂಆರ್‌ಎಫ್ ನೈಲೋಗ್ರಿಪ್ ಈಜೀರೈಡ್ ಪ್ರತಿಯೊಂದು ಸವಾರಿಯನ್ನು ಈಜೀ ರೈಡ್ ಆಗಿ ಪರಿವರ್ತಿಸುತ್ತದೆ .

ಎಂಆರ್‌ಎಫ್ ನೈಲೋಗ್ರಿಪ್ ಈಜೀರೈಡ್ ಟೈರ್‌ಗಳು ಪ್ರಮುಖ ಎಂಆರ್‌ಎಫ್ ಟೈರ್ ಟಾಕ್ , ಎಂಆರ್‌ಎಫ್ ಟೆಆಂಡ್ ಎಸ್ ಮಳಿಗೆಗಳು ಮತ್ತು ಎಂಆರ್ ಎಫ್‌ನ ಪ್ರತ್ಯೇಕ ಡೀಲರ್‌ಗಳಲ್ಲಿ ದೇಶದ ಎಲ್ಲೆಡೆ ಲಭ್ಯವಿರುತ್ತವೆ .
City Today News
(citytoday.media)
9341997936
