17 ರಂದು ಮಹಾವೀರ ಜಯಂತಿ – ವಿಶ್ವಶಾಂತಿಗಾಗಿ ಜಾಥಾ

ಬೆಂಗಳೂರು – ಭಗವಾನ್ ಮಹಾವೀರರ 2618ನೇ ಜನ್ಮಕಲ್ಯಾಣ ಮಹೋತ್ಸವ ಅಂಗವಾಗಿ ಏ.17 ರಂದು ಶಾಂತಿ ಜಾಥವನ್ನು ಜೈನ್ ಯುವ ಸಂಘಟನೆ ಆಯೋಜಿಸಿದ್ದು, ಅಹಿಂಸೆ ಮತ್ತು ವಿಶ್ವಶಾಂತಿ ದಿವಸವಾಗಿ ಅಂದು ಬೆಳಿಗ್ಗೆ 8 ಗಂಟೆಗೆ ಟೌನ್‌ಹಾಲ್‌ನಿಂದ ಶಾಂತಿ ಜಾಥ ಏರ್ಪಡಿಸಲಾಗಿದೆ.

ಜಾಥಾದ ಮೂಲಕ ಭಗವಾನ್ ಮಹಾವೀರರ ಸಂದೇಶಗಳನ್ನು ಬೋಧನೆಗಳ ಮೂಲಕ ಜನತೆಗೆ ತಿಳಿಯಪಡಿಸುವುದು ಮತ್ತು ಅದರ ಅಂಶಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುವ ಹೊಂದಲಾಗಿದೆ ಎಂದು ಜೈನ್ ಯುವ ಸಂಘಟನೆ ಅಧ್ಯಕ್ಷ ಜೈನ್ ಭರತರಾಂಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶ್ರೀಶಾಂತಿ ಜಾಥಾ ಫ್ರೀಡಂ ಪಾರ್ಕ್‌ನಿಂದ ಆರಂಭಗೊಂಡು ನಗರ್ತ ಪೇಟೆ, ಚಿಕ್ಕಪೇಟೆ ಆದನಾಥ ಜೈನ್ ದೇವಸ್ಥಾನ, ಕಾಳಿದಾಸ ಮಾರ್ಗವಾಗಿ ಫ್ರೀಡಂ ಪಾರ್ಕ್‌ನ ಕುಂಡಲಿಪುರ ನಗರಿಗೆ ಬಂದು ಸೇರಲಿದೆ ಎಂದರು.

ಶ್ರೀ ಚಂದ್ರಯಶಸೂರೀಶ್ವರ ಜೀ ಮಹಾರಾಜ್, ಶ್ರೀ ಮುಕ್ತಿಸಾಗರ್ ಸೂರ್‌ಜಿ ಮಹಾರಾಜ್, ಶಾಸನ ಶ್ರೀ ಕಂಚನ್ ಪ್ರಭಾಜೀ, ಮಧುಸ್ಮಿತಾಜೀ, ಶ್ರೀನಿಧಿಜೀ ಭಾಗವಹಿಸಲಿದ್ದಾರೆ ಎಂದರು. ಕಾರ್ಯಕ್ರಮದ ಅಂಗವಾಗಿಮಧ್ಯಾಹ್ನ 2.20ಕ್ಕೆ ಮಹಾಮಂಗಳೀಕ ನಡೆಯಲಿದೆ.

ಭಗವಾನ್ ಮಹಾವೀರರ ಪ್ರಾಮುಖ್ಯತೆಯನ್ನು ಗುರ್ತಿಸಿ ಕರ್ನಾಟಕ ಸರ್ಕಾರ ವಾರ್ಷಿಕ ಆಯವ್ಯಯ ಮಂಡನೆಯಲ್ಲಿ ಭಗವಾನ್ ಮಹಾವೀರರ ಜನ್ಮ ಕಲ್ಯಾಣ ಮಹೋತ್ಸವವನ್ನು ರಾಷ್ಟ್ರೀಯ ಹಬ್ಬವನ್ನಾಗಿ ಪ್ರಕಟಿಸಿರುತ್ತಾರೆ

ಅಹಿಂಸಾ ತತ್ವವೇ ಗಾಂಧೀಜಿಯವರ ಸ್ವಾತಂತ್ರ ಹೋರಾಟವನ್ನು ಶಾಂತಿಯುತವಾಗಿ ಮಾಡಲು ಮತ್ತು ಸಾಮಾಜಿಕ ಸಮನ್ವಯಕ್ಕೆ ಪ್ರೇರೇಪಣೆ. ಅವರ ಜೀವನ ಶೈಲಿಯ ಚಿಂತನೆಗೆ ಮೂಲ ಕಾರಣ ಮಾನವತ ಮತ್ತು ಈ ಅದ್ಭುತಗಳನ್ನೊಳಗೊಂಡ ಪ್ರಕೃತಿಯ ಮುಂದೆ ಮಾನವತ್ವವೇ ಪ್ರಮುಖಪಾತ್ರ ವಹಿಸುತ್ತದೆ ಎಂದರು.

ಮಹಾವೀರ ಜಯಂತಿ ಶಾಂತಿಗಾಗಿ ಜಾಥ ಜೈನ ಸಮುದಾಯದ ಪ್ರಕಾಶ್‌ಚಂದಜೀ ರಾಥೋಡ್,ಮಹಾವೀರಚಂದಜಿ ದೋಕ,ಮಲಚಂದಜೀ ನಾಹರ ಇನ್ನಿತರಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.