ಉಮ್ರ ಡೆವಲಪರ್ ಮಾಲೀಕನ ಮನೆ & ಕಛೇರಿಯ ಶೋಧನೆ – ಆರೋಪಿಯ ಬಂಧನ ಕೋಟ್ಯಾಂತರ ರೂ ಬೆಲೆ ಬಾಳುವ ಸರ್ಕಾರಿ ಸ್ವತ್ತುಗಳಿಗೆ ಸಂಬಂಧಪಟ್ಟ ದಾಖಲಾತಿಗಳ ವಶ

2011ನೇ ಸಾಲಿನಲ್ಲಿ ಇಂದ್ರಪ್ರಸ್ಥ ಶೆಲ್ಟರ್ ಪೈ ಅ , ಪ್ರೆಸ್ಟೀಜ್ ಕಾನ್ ರಿಚ್ , ನಂ 62 / 1 , 4 ನೇ ಮಹಡಿ , ರಿಚ್ಮಂಡ್ ರಸ್ತೆ , ಬೆಂಗಳೂರು ನಗರ ಈ ಕಂಪನಿಯ ಮಾಅಕರಾದ ಶ್ರೀ ಪ್ರಜ್ವಲ್ ಶೆನೆವಾ ಎಂಬುವರಿಗೆ ಉಮ್ರ ಡೆವಲಪರ್‌ನ ಮಾಲೀಕರಾದ ಯೂಸೂಫ್ ಷರೀಫ್ @ ಡಿ . ಬಾಬು ರವರು ಇಂದ್ರಪ್ರಸ್ಥ ಶೆಲ್ಟರ್ ಪೈ ಅ , ಕಂಪನಿಗೆ ಬಂದು ಸರ್ಕಾರಿ ಜಮೀನುಗಳನ್ನು ಹರಾಜಿನಲ್ಲಿ ಖರೀಧಿ ಮಾಡಿರುವುದಾಗಿ ತಿಳಿಸಿ ಈ ಪೈಕಿ ಬೆಂಗಳೂರು , ಬಿದರಹಳ್ಳಿ ಹೋಬಳಿಯ ಕಿತ್ತಗನೂರು ಗ್ರಾಮದ ಸರ್ವೆ ನಂ 80 ರ 6 ಎಕರೆ ಜಾಗವನ್ನು ಸಹ ಹರಾಜಿನಲ್ಲಿ ತೆಗೆದುಕೊಂಡಿದ್ದು , ಈ ಪೈಕಿ 25 % ಹಣವನ್ನು ಸರ್ಕಾರಕ್ಕೆ ಪಾವತಿ ಮಾಡಿರುವುದಾಗಿ ಉಳಿದ 75 % ಹಣವನ್ನು ಪಾವತಿ ಮಾಡಬೇಕಾಗಿರುತ್ತದೆ . ಈ ಜಾಗವನ್ನು ಅಭಿವೃದ್ಧಿ ಪಡಿಸಲು ನೀಡುವುದಾಗಿ ಇಂದ್ರಪ್ರಸ್ಥ ಶೆಲ್ಟರ್ ಪೈ ಅ , ಕಂಪನಿಯವರಿಗೆ ನಂಬಿಸಿದ್ದು ಈತನ ಮಾತನ್ನು ನಂಬಿದ ಇಂದ್ರಪ್ರಸ್ಥ ಶೆಲ್ಟರ್ ಪೈ ಅ , ಕಂಪನಿಯವರು ಸದರಿ ಜಾಗವನ್ನು ಅಭಿವೃದ್ಧಿ ಪಡಿಸಿ ನೀಡಲು ಪರಸ್ಪರ ಮಾತುಕತೆ ಮಾಡಿಕೊಂಡು ಚೆಕ್‌ಗಳ ಮೂಲಕ ಒಟ್ಟು 7 ಕೋಟಿ ಹಣವನ್ನು ಉಮ್ರ ಡೆವಲಪ‌ನ ಮಾಲೀಕರಾದ ಯೂಸೂಫ್ ಷರೀಫ್ @ ಸ್ಟಾಪ್ ಬಾಬು ರವರಿಗೆ ನೀಡಿ ಎಂ . ಓ . ಯು . ಮಾಡಿಕೊಂಡಿರುತ್ತಾರೆ . ನಂತರ ಉಮ್ರ ಡೆವಲಪ‌ನ ಮಾಲೀಕರಾದ ಯೂಸೂಫ್ ಷರೀಫ್ @ ಸ್ಟಾಪ್ ಎಂ . ಓ . ಯು . ಮಾಡಿಕೊಟ್ಟಿರುವ ವಿಷಯವನ್ನು ಮರೆಮಾಚಿ ಈ ಜಾಗವನ್ನು ನಾಗರಾಜ್ ಎಂಬುವವರಿಗೆ ಮಾರ್ಟಿಗೇಜ್ ಮಾಡಿ 3 ಕೋಟಿ ಹಣವನ್ನು ಸಾಲವಾಗಿ ಪಡೆದುಕೊಂಡು ಸತ್ತಿನ ಅಸಲು ದಾಖಲೆಗಳನ್ನು ನಾಗರಾಜ್ ಎಂಬುವವರಿಗೆ ನೀಡಿ ಈ ಬಗ್ಗೆ ದಿ : 04 – 01 – 2018 ರಂದು ಮಹದೇವಪುರ ಉಪ ನೋಂದಣಾಧಿಕಾರಿಗಳ ಕಛೇರಿಯಲ್ಲಿ ಮಾರ್ಟ್‌ಗೇಜ್ ಡೀಡ್ ಮಾಡಿಕೊಟ್ಟಿರುತ್ತಾರೆ . ಹೀಗೆ , ಉಮ್ರ ಡೆವಲಪರ್‌ನ ಮಾಲೀಕರಾದ ಯೂಸೂಫ್ ಷರೀಫ್ @ ಸ್ಟಾಪ್ ರವರು ಮೋಸ ಮಾಡುವ ಮತ್ತು ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಪಿರಾಧಿಯಿಂದ 7 ಕೋಟಿ ಹಣ ಪಡೆದು ಅವರಿಗೆ ಜೆ . ಡಿ ಮಾಡಿಕೊಡದೇ ಆ ಜಾಗವನ್ನು ಅಬ್ಬರಿಗೆ ಮಾರ್ಬ್‌ಗೇಜ್ ಮಾಡಿ ಮೋಸ ಮಾಡಿರುವುದಾಗಿ ಬೆಂಗಳೂರು ನಗರದ ಅಶೋಕನಗರ ಪೊಲೀಸ್ ಠಾಣೆಗೆ ದೂರನ್ನು ನೀಡಿರುತ್ತಾರೆ . ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಒಂದು ವಂಚನೆ ಪ್ರಕರಣ ದಾಖಲಾಗಿರುತ್ತದೆ . ಪ್ರಕರಣದ ಗಂಭೀರತೆ ತಿಳದ ಮಾನ್ಯ ಪೊಲೀಸ್ ಆಯುಕ್ತರು ಈ ಪ್ರಕರಣವನ್ನು ಮುಂದಿನ ತನಿಖೆಗಾಗಿ ಸಿಸಿಬಿ ಘಟಕದ ವಿಶೇಷ ವಿಚಾರಣಾ ದಳಕ್ಕೆ ವರ್ಗಾಯಿಸಿರುತ್ತಾರೆ . ಅದರಂತೆ ತನಿಖೆ ಮುಂದುವರೆಸಿದ ಸಿಸಿಬಿ ಘಟಕದ ವಿಶೇಷ ವಿಚಾರಣಾ ದಳದ ಸಹಾಯಕ ಪೊಲೀಸ್ ಆಯುಕ್ತರು ತನಿಖಾ ಕಾಲದಲ್ಲಿ ಅಂದರೆ

ದಿನಾಂಕ : 22 – 04 – 19 ರಂದು ಆರೋಪಿ ಯೂಸೂಫ್ ಷರೀಫ್ @ ಸ್ಟಾಪ್ ಬಾಬು ಈತನ ಮನೆ ಹಾಗೂ ಈತನ ಒಡೆತನದ ಉಮಾ ಡೆವಲಪರ್ ಕಛೇರಿಯ ಮೇಲೆ ಮಾ ನ್ಯಾಯಾಲಯದ ಅನುಮತಿ ಪಡೆದು ಏಕಕಾಲದಲ್ಲಿ ಶೋಧನೆ ನಡೆಸಿರುತ್ತಾರೆ . ಈ ಸಮಯದಲ್ಲಿ ಇದೇ ಆರೋಪಿಯು ಇದೇ ರೀತಿ ಬೇರೆ ಬೇರೆ ಕಂಪನಿಗಳಿಗೂ ವಂಚಿಸಿರುವ ಅಂಶ ಬೆಳಕಿಗೆ ಬಂದಿದ್ದ ಪೂರಕವೆಂಬಂತೆ ಕೋಟ್ಯಾಂತರ ರೂ ಬೆಲೆ ಬಾಳುವ ಸರ್ಕಾರಿ ಜಮೀನುಗಳ ದಾಖಲಾತಿಗಳು ದೊರಕಿರುತ್ತದೆ . ಈ ಎಲ್ಲಾ ದಾಖಲಾತಿಗಳನ್ನು ವಶಪಡಿಸಿಕೊಂಡ ತನಿಖಾಧಿಕಾರಿಯು ಆರೋಪಿಯನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆಗೆ ಘನ ನ್ಯಾಯಾಲಯವು ಈತನನ್ನು ಪೊಲೀಸ್ ವಶಕ್ಕೆ ನೀಡಿರುತ್ತದೆ . ಈ ಪ್ರಕರಣವಲ್ಲದೇ , ಯೂಸೂಫ್ ಷರೀಫ್ @ ಸ್ಟಾಪ್ ಬಾಬು ಈತನ ವಿರುದ್ದ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಇನ್ನೂ ಹಲವು ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿರುತ್ತದೆ . ಈ ಕಾರ್ಯಚರಣೆಯನ್ನು ಬೆಂಗಳೂರು ನಗರದ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಶ್ರೀ ಅಶೋಕ್ ಕುಮಾರ್ , ಐಪಿಎಸ್ & ಉಪ ಪೊಲೀಸ್ ಆಯುಕ್ತರಾದ ಶ್ರೀ ಗಿರೀಶ್ . ಎಸ್ , ಐಪಿಎಸ್ ರವರ ನೇರ ಮಾರ್ಗದರ್ಶನದಲ್ಲಿ , ಸಿಸಿಬಿ , ವಿಶೇಷ ವಿಚಾರಣಾ ದಳದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಆರ್ ರಾಮಚಂದ್ರಪ್ಪ ರವರ ನೇತೃತ್ವದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಶ್ರೀ ನಾರಾಯಣಸ್ವಾಮಿ , ಶ್ರೀ ಶರಣ್ಣಪ್ಪ ಐ . ಹದ್ದಿ . ಶ್ರೀ ಎ . ಪಿ . ಕುಮಾರ್ ಮತ್ತು ಸಿಬ್ಬಂಧಿಯವರು ಕೈಗೊಂಡಿರುತ್ತಾರೆ .

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.