ಭ್ರಷ್ಟಾಚಾರ ನಿಗ್ರಹ ದಳ ಬೆಂಗಳೂರು ನಗರ ಠಾಣೆಯ ವಿವಿಧ ತಂಡಗಳಿಂದ ಆರೋಪಿತ ಅಧಿಕಾರಿ ಮತ್ತು ಖಾಸಗಿ ವ್ಯಕ್ತಿಗಳಿಗೆ ಸಂಬಂಧಿಸಿದ 06 ಸ್ಥಳಗಳ ಮೇಲೆ ಇಂದು ದಾಳಿ

ದಿನಾಂಕ : 26 . 04 . 2019 ರಂದು ಭ್ರಷ್ಟಾಚಾರ ನಿಗ್ರಹ ದಳದ ಬೆಂಗಳೂರು ನಗರ ಠಾಣೆಯ ವಿವಿಧ ತಂಡಗಳಿಂದ ಶ್ರೀ . ಕೃಷ್ಣ ಲಾಲ್ , ಸಹಾಯಕ ಅಭಿಯಂತರರು , ಹಾಲ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು , ಎರವಲು ಸೇವೆಯ ಮೇಲೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಕರ್ತವ್ಯ ( ಬಿ . ಡಿ . ಎ ) ರವರ ವಿರುದ್ದ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ ಬಿಬಿಎಂಪಿ ರಸ್ತೆ ಅಗಲೀಕರಣಕ್ಕೇ ವಶಪಡಿಸಿಕೊಳ್ಳಲಾದ ಸೈಟುಗಳು ಮತ್ತು ಬಿಲ್ಡಿಂಗ್‌ಗಳ ಜಾಗಕ್ಕಿಂತ ಹೆಚ್ಚು ಜಾಗಕ್ಕೆ ಬೆಲೆ ನಿಗಧೀಕರಣ ಮಾಡಿಸಿಕೊಳ್ಳುವ ಮೂಲಕ ಹಾಗೂ ಸಿಎಂಸಿ ಮತ್ತು ಬಿಬಿಎಂಪಿ ಅಭಿವೃದ್ಧಿ ಪಡಿಸಿದ ಅಡ್ಡರಸ್ತೆಗಳನ್ನು ಸಹ ಖಾಸಗಿ ವ್ಯಕ್ತಿಗಳ ಆಸ್ತಿಯಂದು ಬಿಂಬಿಸಿ ಆ ಮೂಲಕ ಖಾಸಗಿ ವ್ಯಕ್ತಿಗಳಗೆ ಅಪಾರ ಪ್ರಮಾಣದ ಅಕ್ರಮ ಲಾಭ ಮಾಡಿಕೊಟ್ಟು ಬಿಬಿಎಂಪಿಗೆ ಮತ್ತು ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವುಂಟು ಮಾಡಿರುವ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳ ಬೆಂಗಳೂರು ನಗರ ಠಾಣೆಯಲ್ಲಿ ದಾಖಲಾದ ಪ್ರಕರಣದ ಕುರಿತು ತನಿಖೆ ಕೈಗೊಳ್ಳಲಾಗಿದೆ . ಭ್ರಷ್ಟಾಚಾರ ನಿಗ್ರಹ ದಳ ಬೆಂಗಳೂರು ನಗರ ಠಾಣೆಯ ವಿವಿಧ ತಂಡಗಳಿಂದ ಆರೋಪಿತ ಅಧಿಕಾರಿ ಮತ್ತು ಖಾಸಗಿ ವ್ಯಕ್ತಿಗಳಿಗೆ ಸಂಬಂಧಿಸಿದ 06 ಸ್ಥಳಗಳ ಮೇಲೆ ಇಂದು ದಾಳಿ ನಡೆಸಲಾಗಿರುತ್ತದೆ . ಶೋಧನಾ ಕಾರ್ಯ ಮುಂದುವರೆದಿದ್ದು ಈವರೆಗೆ ಶೋಧನೆ ನಡೆಸಲಾದ ಸ್ಥಳಗಳ ಮಾಹಿತಿ ಈ ಕೆಳಕಂಡಂತಿರುತ್ತವೆ .

1 . ಶ್ರೀ . ಕೃಷ್ಣಲಾಲ್ , ಸಹಾಯಕ ಅಭಿಯಂತರರು ರವರ ಸಂಜಯನಗರ , ಬೆಂಗಳೂರು ನಲ್ಲಿನ ವಾಸದ ಮನೆ .

2 . ಶ್ರೀ . ಕೃಷ್ಣಲಾಲ್ , ಸಹಾಯಕ ಅಭಿಯಂತರರು ಈ ಹಿಂದೆ ಕರ್ತವ್ಯ ನಿರ್ವಹಿದ್ದ ಸಹಾಯಕ ಅಭಿಯಂತರರ ಕಛೇರಿ , ಮಹದೇವಪುರ ವಲಯ , ಬಿಬಿಎಂಪಿ , ಬೆಂಗಳೂರು .

3 . ಶ್ರೀ . ಕೃಷ್ಣಲಾಲ್ , ಸಹಾಯಕ ಅಭಿಯಂತರರು ಹಾಅ ಕರ್ತವ್ಯ ನಿರ್ವಹಿಸುತ್ತಿರುವ ಬಿಡಿಎ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಛೇರಿ ,

4 ಶ್ರೀ . ದೀಪಕ್‌ಕುಮಾರ್ ರವರ ಟೆಲಿಕಾಂ ಲೇಔಟ್ , ಭುವನೇಶ್ವರಿನಗರ ಬೆಂಗಳೂರು ನಗರದಲ್ಲಿನ ವಾಸದ ಮನೆ .

5 . ಶ್ರೀ . ಅಮಿತ್ ರಿಕವ್ಚಂದ್ರ ಜೈನ್ ರವರ ಗಾಂಧಿನಗರ , ಬೆಂಗಳೂರು ನಲ್ಲಿನ ವಾಸದ ಮನೆ ಮತ್ತು

6 . ಶ್ರೀ . ಅಮಿತ್ ರಿಕವ್‌ಚಂದ್ ಜೈನ್ ರವರ ಚಿಕ್ಕಪೇಟೆ , ಬೆಂಗಳೂರು ನಗರನಲ್ಲನ ಕಛೇರಿ ,

ಭ್ರಷ್ಟಾಚಾರ ನಿಗ್ರಹ ದಳ ಬೆಂಗಳೂರು ನಗರ ಮತ್ತು ಇತರೆ ಪೋಲೀಸ್ ಠಾಣೆಯ ವಿವಿಧ ತಂಡಗಳಿಂದ ಮೇಲ್ಕಂಡ ಸ್ಥಳಗಳಲ್ಲಿ ಶೋಧನಾ ಕಾರ್ಯ ಮುಂದುವರೆದಿದೆ .

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.