
ಸಿಸಿಬಿ ಕಾರ್ಯಾಚರಣೆ
ಬೆಂಗಳೂರು ನಗರ ಮತ್ತು ಹೊರ ಜಿಲ್ಲೆಯಿಂದ ಹುಡುಗಿಯರನ್ನು ಮಾನವ ಸಾಗಾಣಿಕೆ ಮಾಡಿಕೊಂಡು ಬಂದು ಮಸಾಜ್ ಪಾರ್ಲರ್ ( ಸ್ಫಾ ) ತೆರೆದು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ಆರೋಪಿತೆಯ ಬಂಧನ ಬೆಂಗಳೂರು ನಗರ , ಕೋರಮಂಗಲ ಪೊಲೀಸ್ ಠಾಣಾ ಸರಹದ್ದಿನ ಕೋರಮಂಗಲ 5ನೇ ಬ್ಲಾಕ್ , ಕೆಹೆಚ್‌ಬಿ ಕಾಲೋನಿ , 7ನೇ ‘ ಸಿ ‘ ಮುಖ್ಯರಸ್ತೆ , 2ನೇ ಕ್ರಾಸ್ , ನಂ . 407 ರಲ್ಲಿ Suki Spa And Saloon unisex ಎಂಬ ಹೆಸರಿನಲ್ಲಿ ಮಸಾಜ್ ಪಾರ್ಲರ್ ತೆರೆದು ಸ್ಫಾ ದಲ್ಲಿ “ ಬಾಡಿ ಟೂ ಬಾಡಿ ಮಸಾಜ್ ” , ” ಹ್ಯಾಪಿ ಎಂಡಿಂಗ್ ” , ” ಸ್ಯಾಂಡ್‌ವಿಚ್ ” ಹಾಗೂ ಇತರೇ ಲೈಂಗಿಕ ಚಟುವಟಿಕೆ ಮಾಡುತ್ತಾ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಿದ ಕೇಂದ್ರ ಅಪರಾಧ ವಿಭಾಗ ( ಸಿ . ಸಿ . ಬಿ ) ದ ಪೊಲೀಸರು ದಿನಾಂಕ 10 . 05 . 2019 ರಂದು ಕ್ಷಿಪ್ರ ಕಾರ್ಯಾಚರಣೆ ನಡೆಸಿ , ಮಸಾಜ್ ಪಾರ್ಲರ್ (ಸ್ಫಾ) ಹೆಸರಿನಲ್ಲಿ ಗಿರಾಕಿಗಳಗೆ ಬಾಡಿ ಟು ಬಾಡಿ ಮಸಾಜ್ ಮತ್ತು ಹ್ಯಾಪಿ ಎಂಡಿಂಗ್ ಹಾಗೂ ಇತರೇ ಲೈಂಗಿಕ ವೇಶ್ಯಾವಾಟಿಕೆ ದಂಧೆಯನ್ನು ನಡೆಸಿ ಅಕ್ರಮವಾಗಿ ಹಣ ಸಂಪಾದನೆಯಲ್ಲಿ ತೊಡಗಿದ್ದ ಈ ಕೆಳಕಂಡ ಆರೋಪಿತೆಯಾದ ಶ್ರೀಮತಿ . ಮಾಧುರಿ ಎ . ಆರ್ ಕೋಂ ಅನೀಶ್ ಪಣೇಕರ್ ಎಂಬುವವರನ್ನು ದಸ್ತಗಿರಿ ಮಾಡಿ , ಬಾಡಿ ಟು ಬಾಡಿ ಮಸಾಜ್ ಮತ್ತು ಹ್ಯಾಪಿ ಎಂಡಿಂಗ್ ಹಾಗೂ ಇತರೇ ಹೆಸರಿನಲ್ಲಿ ಲೈಂಗಿಕವಾಗಿ ದಂಧೆಯಲ್ಲಿ ತೊಡಗಿಸಲು ಬೆಂಗಳೂರು ನಗರ ಮತ್ತು ಬೇರೆ ಜಿಲ್ಲೆಗಳಿಂದ ಕರೆತಂದಿದ್ದ ನೊಂದ ಹುಡುಗಿಯರನ್ನು ವೇಶ್ಯಾವಾಟಿಕೆಯಿಂದ ಸಂರಕ್ಷಣೆ ಮಾಡಲಾಗಿರುತ್ತದೆ .

ಆರೋಪಿತೆಯಿಂದ ರೂ . 3000 / – ನಗದು , 1 ಮೊಬೈಲ್ ಫೋನು , 3 ಕಾಂಡೋಮು , ಒಂದು ಕೈಪಿಂಗ್ ಮೆಷಿನ್ ಅನ್ನು ವಶಕ್ಕೆ ಪಡೆದಿರುತ್ತದೆ . ಆರೋಪಿತೆಯು ಬೆಂಗಳೂರು ನಗರ ಮತ್ತು ಹೊರ ಜಿಲ್ಲೆಯಿಂದ ಹುಡುಗಿಯರನ್ನು ಮಾನವ ಸಾಗಾಣಿಕೆ ಮಾಡಿಕೊಂಡು ಬಂದು , ಹೆಚ್ಚು ಹಣ ನೀಡುವ ಆಮಿಷ ತೋರಿಸಿ ಗಿರಾಕಿಗಳನ್ನು ಮಸಾಜ್ ಪಾರ್ಲರ್ ( ಸ್ಫಾ ) ಗೆ ಬರಮಾಡಿಕೊಂಡು ವೇಶ್ಯಾವಾಟಿಕೆ ಧಂಧೆ ನಡೆಸಿ ಅಕ್ರಮವಾಗಿ ಹಣ ಸಂಪಾದನೆ ಮಾಡಿ ಜೀವನ ಸಾಗಿಸುತ್ತಿರುವುದು ಕಂಡುಬಂದಿರುತ್ತದೆ . ಈ ಸಂಬಂಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ . ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರದ ಉಪ ಪೊಲೀಸ್ ಆಯುಕ್ತರಾದ ಶ್ರೀ . ಎಸ್ . ಗಿರೀಶ್ , ಐಪಿಎಸ್ ರವರ ಮಾರ್ಗದರ್ಶನದಲ್ಲಿ ಸಿಸಿಬಿ ಮಹಿಳೆ ಮತ್ತು ಮಾದಕ ದ್ರವ್ಯ ದಳದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀಮತಿ . ಶೋಭಾ ಎಸ್ ಖಟಾವರ್ ರವರ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ . ಕೆ . ನಾರಾಯಣಗೌಡ , ಪಿಎಸ್‌ಐ ಶ್ರೀ . ಲಕ್ಷ್ಮೀನರಸಿಂಹಯ್ಯ , ಎಎಸ್‌ಐ ಶ್ರೀಮತಿ . ಕೆ . ಶಾಂತಶೆಟ್ಟಿ ಹಾಗೂ ಸಿಬ್ಬಂದಿಯವರಾದ ಶ್ರೀ . ವಿನಯ್ , ಶ್ರೀ . ಶ್ರೀನಿವಾಸ ಮತ್ತು ಶ್ರೀ . ಶಶಿಧರ್ ರವರ ತಂಡ ಯಶಸ್ವಿಯಾಗಿ ನಿರ್ವಹಿಸಿರುತ್ತಾರೆ .
City Today News
(citytoday.media)
9341997936
