
ದಿನಾಂಕ : 17 . 5 . 2019 ರಿಂದ ಹಾಪ್‌ಕಾಮ್ಸ್ , ಬೆಂಗಳೂರು ಸಂಸ್ಥೆ ವತಿಯಿಂದ ಮಾವು ಮೇಳ ಮತ್ತು ಹಲಸು ಮೇಳ ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಿರುವ ಬಗ್ಗೆ . ಹಾಪ್‌ಕಾಮ್ಸ್ ಸಂಸ್ಥೆಯು ಅಂದಿನ ತೋಟಗಾರಿಕೆ ನಿರ್ದೇಶಕರಾದ ದಿವಂಗತ ಡಾ : ಎಂ . ಎಚ್ . ಮರೀಗೌಡರ ದೂರದೃಷ್ಟಿಫಲವಾಗಿ ರಾಜ್ಯದ ರೈತರ ಹಾಗೂ ಗ್ರಾಹಕರ ಹಿತರಕ್ಷಣೆಗಾಗಿ ರೂಪಿತಗೊಂಡು ತೋಟಗಾರಿಕೆ ಇಲಾಖೆಯ ಅಧೀನದಲ್ಲಿ ಸುಮಾರು 50 ವರ್ಷಗಳಿಂದ ಹಾಲಿ ಬೆಂಗಳೂರು ನಗರ , ಬೆಂಗಳೂರು ಗ್ರಾಮಾಂತರ , ಚಿಕ್ಕಬಳ್ಳಾಪುರ , ರಾಮನಗರ ಮತ್ತು ಕೋಲಾರ ಜಿಲ್ಲೆ ವ್ಯಾಪ್ತಿಯಲ್ಲಿ ತನ್ನ ಕಾರ್ಯ ನಿರ್ವಹಿಸುತ್ತಾ ಬಂದಿರುತ್ತದೆ . ಸಂಸ್ಥೆಯು ಸುಮಾರು 8000 ದಷ್ಟು ಸದಸ್ಯರನ್ನು ಹೊಂದಿದ್ದು ರೈತರಿಂದ ಬರುವ ಎಲ್ಲಾ ತೋಟೋತ್ಪನ್ನಗಳನ್ನು ನ್ಯಾಯಯುತ ಬೆಲೆ ನೀಡಿ ಖರೀದಿಸಿ ಸಂಗ್ರಹಣೆ ಮಾಡುವ ಮೂಲಕ ತನ್ನ ಕಾರ್ಯ ವ್ಯಾಪ್ತಿಯಲ್ಲಿ ತೆರೆದಿರುವ ಸುಮಾರು 325 ಮಾರ ಲ್ಲಿ ತೆರೆದಿರುವ ಸುಮಾರು 325 ಮಾರಾಟ ಮಳಿಗೆಗಳಲ್ಲಿ ಗ್ರಾಹಕರಿಗೆ ತಾಜಾ ಹಣ್ಣು ತರಕಾರಿಗಳನ್ನು ನಿಖರವಾದ ತೂಕ ಹಾಗೂ ನ್ಯಾಯ ಸಮ್ಮತ ದರದಲ್ಲಿ ಮಾರಾಟ ಮಾಡಲಾಗುತ್ತದೆ . ಅಲ್ಲದೆ , ಎಲ್ಲಾ ಬೃಹತ್ ಕಾರ್ಖಾನೆಗಳು , ಸಂಘ ಸಂಸ್ಥೆಗಳು , ಸರ್ಕಾರಿ ಆಸತ್ರೆಗಳು , ಹೋಟೇಲ್ , ಕ್ಲಬ್‌ಗಳು ಹಾಗೂ ಮದುವೆ ಮುಂತಾದ ಸಮಾರಂಭಗಳವರು ಸಲ್ಲಿಸುವ ಬೇಡಿಕೆಗನುಗುಣವಾಗಿ ಉಚಿತ ಸಾಗಾಣಿಕೆಯೊಂದಿಗೆ ಹಣ್ಣು ತರಕಾರಿಗಳನ್ನು ಸರಬರಾಜು ಮಾಡಲಾಗುತ್ತಿದೆ . ಸಂಸ್ಥೆಯ ವಾರ್ಷಿಕ ರೂ . 100 . 00 ಕೋಟಿಗಳಿಗೂ ಮೀರಿ ವಹಿವಾಟು ನಡೆಸುತ್ತಿದ್ದು , ಲಾಭದಾಯಕವಾಗಿ ಕಾರ್ಯನಿರ್ವಹಿಸುವ ಮೂಲಕ ರೈತರ ಹಾಗೂ ಗ್ರಾಹಕರ ಅಭಿವೃದ್ಧಿ ಮತ್ತು ಏಳಿಗೆಗೆ ಸತತವಾಗಿ ಪ್ರಯತ್ನಿಸಿದೆ . ರೈತರು ಬೆಳೆದಂತಹ ಮಾವು ಮತ್ತು ಹಲಸುಗೆ ಸೂಕ್ತ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಮಾವು ಮತ್ತು ಹಲಸು ಮೇಳ ಆಯೋಜಿಸಲಾಗಿದೆ .

ಈ ಮೇಳದಲ್ಲಿ ವಿವಿಧ ಬಗೆಯ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆ ಮಾಡಿದ್ದು ಶೇ 10 % ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು . ಹಾಪ್ ಕಾಮ್ ನಲ್ಲಿ ಮಾರಾಟವಾಗುವ ಮಾವಿನ ಹಣ್ಣುಗಳನ್ನು ನೈಸರ್ಗಿಕವಾಗಿ ಮಾಗಿಸಿ ಹಣ್ಣು ಮಾಡಲಾಗುತ್ತದೆ . ಈ – ಮುಕ ಹಣುಗಳಾಗಿರುತ್ತವೆ . ಈ ಮೇಳದಲ್ಲಿ ರೈತರು ಬೆಳೆದ ನಾನಾ ತಳಿಯ ಮಾವಿನ ಹಣ್ಣುಗಳಾದ ಮಿ . ರಸಪುರಿ , ಸೇಂದ್ರ , ಅಮ್ರಪಾಲಿ , ಬೈಗಾನ್ ಪಲ್ಲಿ , ತೋತಾಪುರಿ , ಕೇಸರ್ , ಮಲ್ಲಿಕಾ , ಮಲಗೋವಾ ಸಕರೆ ಗು ಕಾಲಾಪಾಡು , ದಶೇರಿ , ರುಮೇನಿಯಾ , ನೀಲಂ ಋತುಮಾನದ ಹಣ್ಣು ಹಲಸಿನ ಹಣ್ಣುಗಳನ್ನು ಮೇಳದಲ್ಲಿ ಮಾರಾಟ ಮಾಡಲಾಗುವುದು ಹಾಗೂ ಹಾಪ್ ಕಾಮ್ಸ್ನ ಎಲ್ಲಾ ಆಯ್ಕೆ ಮಾರಾಟ ಮಳಿಗೆಗಳಲ್ಲಿ ಮಾರಾಟ ಮೂರು ಪಸುತ ಸಾಲಿನಲ್ಲಿ 1000 ಮೆ . ಟನ್‌ಗಳ ಮಾವು ಮತ್ತು 200 ಮೆ . ಟನ್‌ಗಳ ಹಲಸು ವಹಿವಾಟು ನಡೆಸುವ ಗುರಿಯನ್ನು ಹೊಂದಿದೆ . ಈ ಕಾರ್ಯಕ್ರಮವನ್ನು ಹಚ್ಚನ್ ವೃತ್ತದಲ್ಲಿರುವ ಹಾಪ್‌ಕಾಮ್ಸ್ ಮಾರಾಟ ಮಳಿಗೆಗಳಲ್ಲಿ ಮೇಳ ಮಾರಾಟ ಇದನ್ನು ಹಿರಿಯ ಸ್ವಾತಂತ್ರ ಹೋರಾಟಗಾರರಾದ ಶ್ರೀ ಹೆಚ್ . ಎಸ್ . ದೊರೆಸ್ವಾಮಿ ಇವರು ದಿನಾಂಕ : 17 . 5 . 2019 ರಂದು ಬೆಳಿಗ್ಗೆ 10 . 30 ಗಂಟೆಗೆ ಉದ್ಘಾಟನೆ ಮಾಡಿದರು.
“ ಬನ್ನಿ , ವಿವಿಧ ತಳಿಗಳ ರುಚಿಕರ ಮಾವು ಮತ್ತು ಹಲಸು ಸೇವಿಸಿ , ಆನಂದಿಸಿ ಆರೋಗ್ಯ ವೃದ್ಧಿಸಿಕೊಳ್ಳಿ “
– ಎ . ಎಸ್ . ಚಂದ್ರೇಗೌಡ
ಅಧ್ಯಕ್ಷರು
