
ಸಮಾಜ ಸೇವೆಗಾಗಿ ನೂತನ 6 ಕಟ್ಟಡ ಲೋಕಾರ್ಪಣೆ
ಬೆಂಗಳೂರು: ಆಚಾರ್ಯಶ್ರೀ ತುಳಸಿ ಮಹಾಪ್ರಜ್ಞಾ ಸೇವಾ ಕೇಂದ್ರ ಚಾರಿಟಬಲ್ ಟ್ರಸ್ಟ್ ಆಧ್ಯಾತ್ಮಿಕ ಅನುಷ್ಠಾನಕ್ಕಾಗಿ ನಿರ್ಮಿಸಿರುವ ನೂತನ ಕಟ್ಟಡಗಳ ಲೋಕಾರ್ಪಣೆ ಜೂನ್ 16 ರಂದು ಜರುಗಲಿದೆ.
ಕುಂಬಳಗೋಡಿನ ಆಚಾರ್ಯಶ್ರೀ ಮಹಾಪ್ರಜ್ಞಾ ಸೇವಾ ಕೇಂದ್ರ ಆಧ್ಯಾತ್ಮಿಕ ಅನುಷ್ಠಾನ ಉದ್ದೇಶದಿಂದ ನೂತನ ಕಟ್ಟಡಗಳನ್ನು ನಿರ್ಮಿಸಲಾಗಿದೆ. ತೇರಾಪಂಥ್ ದರ್ಮ ಮಹಾಗುರುಗಳಾದ ಆಚಾರ್ಯಶ್ರೀ ಮಹಾಶ್ರಮಣರು ಅಹಿಂಸಾ ಯಾತ್ರೆ ಮೂಲಕ ಕಾಲ್ನಡಿಗೆಯಲ್ಲಿ ಬೆಂಗಳೂರಿಗೆ ಆಗಮಿಸಿ, ಟ್ರಸ್ಟ್‌ನ ನೂತನ ಕಟ್ಟಡಗಳ ಲೋಕಾರ್ಪಣೆ ಗೊಳಿಸಿದ್ದಾರೆ ಎಂದು ಟ್ರಸ್ಟ್‌ನ ಮುಖ್ಯಸ್ಥ ರಾಜೇಶ್ ಚಾವತ್ ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು.

ಉಳಿದಂತೆ ಆಚಾರ್ಯಶ್ರೀಗಳ ಸಹಸ್ರಾರು ಶಿಷ್ಯರು ಸಹ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಕಳೆದ 50 ವರ್ಷಗಳ ಹಿಂದೆ ಮಹಾ ಗುರುಗಳಾಗಿದ್ದ ಆಚಾರ್ಯಶ್ರೀ ತುಳಸಿ ನಂತರ ಆಚಾರ್ಯಶ್ರೀ ಮಹಾ ಶ್ರಮಣರು ಬೆಂಗಳೂರಿಗೆ ಆಗಮಿಸುತ್ತ್ತಿದ್ದಾರೆ. ಕಾರ್ಯಕ್ರಮದಲ್ಲಿ ಸಮುದಾಯ ಸಮಸ್ತರು ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
City Today News
(citytoday.media)
9341997936
