ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣ ಕಡಿತಗೊಳಿಸಲು ಹೋದರೆ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಉಗ್ರವಾದ ಹೋರಾಟ

ದಿನಾಂಕ : 25 – 06 – 2019 ಮಂಗಳವಾರದಂದು ವಾಲ್ಮೀಕಿ ಮಠದ ಗುರು ತಿ೬ದ ಸ್ವಾಮಿಗಳಾದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮಿಜಿಯವರು ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ರಾಜನಹಳ್ಳಿಯಿಂದ ಒಂದು ಬೃಹತ್ ಪಾದಯಾತ್ರೆ ಹೊರಟು ನಾಯಕ ಸವರಾಜ ಅವರ ಜೊತೆಯಲ್ಲಿ ಎಲ್ಲಾ ಮುಖಂಡರುಗಳು ಪಕ್ಷಾತೀತವಾಗಿ ಜನ ಕಾಲ್ನಡಿಗೆಯಲ್ಲಿ ಬಂದು ಈಗ ಪರಿಶಿಷ್ಟ ಪಂಗಡಕ್ಕೆ ಇರುವ ಮೀಸಲಾತಿ ಶೇ 3 ರಿಂದ 7 . 5 ಕ್ಕೆ ಹೆಚ್ಚಿಸಬೇಕೆಂದು ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿರುತ್ತಾರೆ . ಈ ಒಂದು ಬೇಡಿಕೆಯು ನ್ಯಾಯಬದ್ದವಾಗಿದ್ದು ಅವರ ಆ ಜೀಲಾಕೆಗೆ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ( ರಿ ) ಗಾಂಧಿನಗರ , ಬೆಂಗಳೂರು ಇವರ ಸಹಮತ ವ್ಯಕ್ತ ಪಡಿಸುವ ಜೊತೆಗೆ ಇವರ ಹೋರಾಟಕ್ಕೆ ಬೆಂಬಲವನ್ನು ಕೊಡುತ್ತದೆ . * ನಮ್ಮದು ಒಂದು ಅಂತಕ ಯಾವುದೇ ಕಾರಣಕ್ಕೂ ಈಗ ಹಾಲಿ ಚಾಲ್ತಿಯಲ್ಲಿರುವ ಮೀಸಲಾತಿ ಪ್ರವರ್ಗ – 1 ಮತ್ತು 2ಎ ನಲ್ಲಿ ಜಾರಿಯಲ್ಲಿ ಇರತಕ್ಕಂತ ಶೇ4 ರಷ್ಟು , ಪ್ರವರ್ಗ – 1 ಶೇ 15 ರಷ್ಟು ಪ್ರವರ್ಗ 2ಎ ಗಳಲ್ಲಿ ಯಾವುದೇ ಕಾರಣಕ್ಕೂ ಕಡಿತಗೊಳಿಸಬಾರದು ಈಗಾಗಲೇ ಪ್ರವರ್ಗ – 1 ರಲ್ಲಿ 98 ಜಾತಿಗಳದ್ದು , ಪ್ರವರ್ಗ – 2ಎ ನಲ್ಲಿ 102 ಜಾತಿಗಳಿರುತ್ತವೆ . ಮೀಸಲಾತಿ ಆದೇಶವಿದ್ದರೂ ಕೂಡಾ ಈಗಿರುವ ಮೀಸಲಾತಿ ಸಮರ್ಪಕವಾಗಿರುವುದಿಲ್ಲ ಹಾಗೂ ಜನಸಂಖ್ಯೆಗೆ ಅನುಗುಣವಾಗಿರುವುದಿಲ್ಲ . ಹಾಗಾಗಿ ನಮಗೆ ತುಂಬಾ ಅನ್ಯಾಯವಾಗಿದೆ ಹಾಗಾಗಿ ನಾವು ಸರ್ಕಾರವನ್ನು ಕೇಳಿಕೊಳ್ಳುವುದೇನೆಂದರೆ ಪ್ರವರ್ಗ – 1 ರಲ್ಲಿ ಆಗಲಿ , 2ಎ ನಲ್ಲಿ ಆಗಲಿ ಈಗ ಇರತಕ್ಕಂತ ಮೀಸಲಾತಿ ಪ್ರಮಾಣವನ್ನು ಯಾವುದೇ ಕಾರಣಕ್ಕೆ ಕಡಿತಗೊಳಿಸಬಾರದು ಮೊನ್ನೆ ತಾನೆ ಮಹಾರಾಷ್ಟ್ರ ಉಚ್ಚ ನ್ಯಾಯಾಲಯ ಮರಾಠರಿಗೆ ಕೊಟ್ಟಿದ್ದ ಮೀಸಲಾತಿಯನ್ನು ಎತ್ತಿ ಹಿಡಿದಿರುತ್ತದೆ . ಈ ಆದೇಶದಲ್ಲಿ ವಿಶೇಷ ಸಂದರ್ಭಗಳಲ್ಲಿ ರಾಜ್ಯ ಸರ್ಕಾರ ಸೂಕ್ತ ಕಾರಣಗಳು ಇದ್ದಲ್ಲಿ ಈಗ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ವಿದಿಶಿರುವ ಮೀಸಲಾತಿಯನ್ನು ಮೀರಬಹುದೆಂದು ಹೇಳಿರುತ್ತಾರೆ . ಈ ಎಲ್ಲಾ ದ್ವಂದ್ವಗಳಿಗೆ ಪರಿಹಾರ ಹಿಂದಿನ ಸರ್ಕಾರ ಹಿಂದುಳಿದ ಶಾಶ್ವತ ಆಯಜೋಗದ ಅಡಿಯಲ್ಲಿ ನಡೆಸಿರುವಂತಹ ಸಾಮಾಝಕ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಈ ಕೂಡಲೆ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸುತ್ತದೆ . ಆದಾಗಿ ಈಗ ಚಾಲ್ತಿಯಲ್ಲಿರುವ ಅಂಶವನ್ನು ಕಡಿತಗೊಳಿಸದೆ ರಾಜ್ಯ ಸರ್ಕಾರ ಈಗ ಇರುವಂತಹ ಶೇ 50 ರಷ್ಟು ಮೀಸಲಾತಿಯನ್ನು ಶೇ 70 ರಷ್ಟು ಏರಿಸಿ ಓ . ಬಿ . ಸಿಯಲ್ಲಿ ಇರುವಂತಹ ನ್ಯೂನ್ಯತೆಗಳನ್ನು ಸರಿಪಡಿಸಬೇಕು . ಹಾಗೂ ಸರ್ಕಾರವೂ ಈ ವಿಚಾರಗಳನ್ನು ಮನಗೊಂಡು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣ ಕಡಿತಗೊಳಿಸಲು ಹೋದರೆ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ .

– ಕೆ . ಎಂ ರಾಮಚಂದ್ರಪ್ಪ- ಅಧ್ಯಕ್ಷರು, ಸುರೇಶ್ ಎಂ . ಲಾತೂರ್ – ಕಾರ್ಯಾಧ್ಯಕ್ಷರು, ಆರ್ ರಂಗಪ್ಪ – ಜಂಟಿ ಕಾರ್ಯದರ್ಶಿ, ಎಸ್ ಮರಿಬಸವಾಚಾರ್ – ಉಪಾಧ್ಯಕ್ಷರು, ಪಿ . ರಾಜ್ ಕುಮಾರ್ – ಸಂಘಟನಾ ಕಾರ್ಯದರ್ಶಿ.

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.