
ದಿನಾಂಕ 03 / 07 / 2019 , ರಾಮನಗರ ಜಿಲ್ಲೆ , ಚನ್ನಪಟ್ಟಣ ಟೌನ್‌ನ ನಿವಾಸಿಯೊಬ್ಬರು ತಮ್ಮ ವಾಸದ ಮನೆಯ ಇ – ಖಾತಾ ಹಾಗೂ ಮ್ಯುಟೇಷನ್‌ಗಾಗಿ ಕೋರಿ ಚನ್ನಪಟ್ಟಣ ನಗರಸಭೆಗೆ ಅರ್ಜಿಯನ್ನು ಸಲ್ಲಿಸಿಕೊಂಡಿರುತ್ತಾರೆ . ಶ್ರೀ . ಪುಟ್ಟಸ್ವಾಮಿ , ಪೌರಾಯುಕ್ತರು , ನಗರಸಭೆ , ಚನ್ನಪಟ್ಟಣ ಹಾಗೂ ಶ್ರೀ . ಮೋಹನ್ , ದ್ವಿ . ದ . ಸ . ನಗರಸಭೆ , ಚನ್ನಪಟ್ಟಣ ರವರುಗಳು ಅರ್ಜಿದಾರರಿಂದ ವಾಸದ ಮನೆಯ ಇ – ಖಾತಾ ಹಾಗೂ ಮ್ಯುಟೇಷನ್ ಮಾಡಿಕೊಡಲು ರೂ . 20 , 000 / – ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ . ದಿನಾಂಕ : 03 / 07 / 2019 ರಂದು ಶ್ರೀ . ಪುಟ್ಟಸ್ವಾಮಿ , ಪೌರಾಯುಕ್ತರು , ನಗರಸಭೆ , ಚನ್ನಪಟ್ಟಣ ರವರ ನಿರ್ದೇಶನದ ಮೇರೆಗೆ ಅವರ ವಾಹನ ಚಾಲಕರಾದ ಶ್ರೀ . ಪ್ರಶಾಂತ್ ರವರು ದೂರುದಾರರಿಂದ ರೂ . 15 , 000 / – ಲಂಚದ ಹಣವನ್ನು ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ರಾಮನಗರ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುತ್ತಾರೆ . ಲಂಚದ ಹಣವನ್ನು ವಶಪಡಿಸಿಕೊಂಡು , ಪ್ರಕರಣದಲ್ಲಿ ಆರೋಪಿತರಾದ ಮೂವರನ್ನು ದಸ್ತಗಿರಿ ಮಾಡಲಾಗಿದೆ . ತನಿಖೆ ಮುಂದುವರೆದಿದೆ .
City Today News
(citytoday.media)
9341997936
