ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2018ನೇ ಸಾಲಿನ ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಪ್ರದಾನ ಸಮಾರಂಭ

4-8-2019 ರಂದು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ತುಳು ಅಕಾಡೆಮಿ ಗೌರವ ಪ್ರಶಸ್ತಿ ಪ್ರಧಾನ ಸಮಾರಂಭ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2018ನೇ ಸಾಲಿನ ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಪ್ರದಾನ ಸಮಾರಂಭವು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಗೋಸ್ತು 04 ರ ಆದಿತ್ಯವಾರದಂದು ಪೂರ್ವಾಹ್ನ 9 . 00 ರಿಂದ 8 . 30 ಗಂಟೆಗೆ ನಡೆಯುತ್ತಿದೆ .

ಪೂರ್ವಾಹ್ನ 9 . 30 ಕೆ ಆರಂಭವಾಗುವ ವಿವಿಧ ಸಾಂಸ ತಿಕ ಕಾರ್ಯಕ್ರಮಗಳೊಂದಿಗೆ ಸಂಜೆ ಗಂಟೆ 4 . 00 ರಿಂದ ಜರಗುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಧಕರಾದ ತುಳು ಸಾಹಿತ್ಯ ಕ್ಷೇತ್ರದಲ್ಲಿ ಶ್ರೀಮತಿ ಲಲಿತಾ ರೈ ತುಳು ನಾಟಕ ಕ್ಷೇತ್ರದಲ್ಲಿ ಶ್ರೀ ರತ್ನಾಕರ್ ರಾವ್ ಕಾವೂರು , ತುಳು ಸಿನಿಮಾ ಕ್ಷೇತ್ರದಲ್ಲಿ ಶ್ರೀ ಎ . ಕೆ ವಿಜಯ್ ( ಕೋಕಿಲಾ ) ಹಾಗೂ 2018ರ ಸಾಅನ ಪುಸ್ತಕ ಬಹುಮಾನ ವಿಜೇತರಾದ ಶ್ರೀ ಶಾಂತಾರಾಮ್ ವಿ . ಶೆಟ್ಟಿ ( ಕವನ ವಿಭಾಗ – ‘ ಮಣ್ಣ ಬಾಜನೊ ) ಶ್ರೀಮತಿ ರಾಜಶ್ರೀ ಟಿ . ರೈ , ಪೆರ್ಲ ( ಕಾದಂಬರಿ ವಿಭಾಗ – “ ಕೊಂಬು ) ರವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಗುವುದು .

ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಚಿವರಾದ ಶ್ರೀ ಡಿ ಕೆ ಶಿವಕುಮಾರ್ ಇವರು ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಿರುವರು . ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎ . ಸಿ . ಭಂಡಾರಿ ಅಧ್ಯಕ್ಷತೆ ವಹಿಸಲಿದ್ದು ಮಾಜಿ ಮುಖ್ಯಮಂತ್ರಿಗಳು ಹಾಗೂ ಸಾಹಿತಿ ಶ್ರೀ ಎಂ . ವೀರಪ್ಪ ಮೊಲ , ನಗರಾಭಿವೃದ್ಧಿ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಯು . ಟಿ . ಖಾದರ್ , ಮಾನ್ಯ ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿಯವರಾದ ಶ್ರೀ ಎಂ . ಎ . ಗೋಪಾಲಸ್ವಾಮಿ , ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯರಾದ ಶ್ರೀ ತೇಜಸ್ವಿ ಸೂರ್ಯ , ಚಿಕ್ಕಪೇಟೆ ಶಾಸಕರಾದ ಡಾ | ಉದಯ್ ಅ , ಗರುಡಾಚಾರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀಮತಿ ಕೆ . ಎಂ . ಜಾನಕಿ , ಭಾ . ಆ . ಸೇ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು .

ಪೂರ್ವಾಹ್ನ 9 . 30 ರಿಂದ ಮಕ್ಕಳಿಗಾಗಿ ಹಾಗೂ ಯುವಕ – ಯುವತಿಯರಿಗಾಗಿ ತುಳು ಜಾನಪದ ಸ್ಪರ್ಧೆಗಳು , ಅಪರಾಹ್ನ 1 . 00 ರಿಂದ 400 ರವರೆಗೆ ಬಹುಭಾಷಾ ಕವಿ – ಕಾವ್ಯ – ಕುಂಚ – ಗಾಯನ ಗೋಷ್ಠಿಯಲ್ಲಿ ಖ್ಯಾತ ಕಲಾವಿದರಾದ ಶ್ರೀ ಮನೋಹರ್ , ಏ , ವೈ ಶ್ರೀ ವಿ ಗುಂಡೂರಾಯರು , ಶ್ರೀ ರಮೇಶ್ಚಂದ್ರ , ಶ್ರೀಮತಿ ಕಲಾವತಿ ದಯಾನಂದ್ , ಶ್ರೀ ರೇಣುಕಾ ಸ್ವಾಮಿ ಹೊನ್ನೆಭಾಗಿ ಹಾಗೂ ಅತಿಥಿಗಳಾಗಿ ಡಾ . ಸದಾನಂದ ಪೆರ್ಲ ಭಾಗವಹಿಸಅರುವರು .

ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ತೆಂಕು – ಬಡಗು ಯಕ್ಷಗಾನ ತಿಟ್ಟುಗಳ ತುಲನಾತ್ಮಕ ಪ್ರದರ್ಶನ ಮತ್ತು ಯಕ್ಷ ವೈವಿಧ್ಯ ಕಾರ್ಯಕ್ರಮವು ಬೆಂಗಳೂರಿನ ಸಂಸ್ಕೃತಿ ಯಕ್ಷಗಾನ ತರಬೇತಿ ಕೇಂದ್ರದ ಕಲಾವಿದರಿಂದ ನಡೆಯವುದು .

ಬೆಂಗಳೂರಿನ ತುಳುಸಂಘ ಸಂಸ್ಥೆಗಳ ಸಹಕಾರದೊಂದಿಗೆ ಆಯೋಜಿಸಲಾಗುತ್ತಿರುವ ತುಳು ಅಕಾಡೆಮಿಯ ಈ ಕಾರ್ಯಕ್ರಮದಲ್ಲಿ ತುಳುವರು ಮತ್ತು ತುಳುಭಾಷಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ವಿನಂತಿಸುತ್ತೇವೆ .

– ಎ . ಸಿ . ಭಂಡಾರಿ. ಅಧ್ಯಕ್ಷರು , ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.