
ಬೆಂಗಳೂರು: ಇಂದಿನ ಸಮಾಜದ ಸಂಸ್ಕೃತಿ ಹಾಗೂ ಪರಂಪರೆಯನ್ನು ರಕಿಸ್ಷಿಕೊಂಡು ಹೋಗುವುದು ಪ್ರತಿಯೊಬ್ಬಬ್ರ್ರಾಹ್ಮಣರ ಜವಬ್ದಾರಿಯಾಗಿದೆ ಎಂದು ಹೈಕೋರ್ಟ್ ನಿವೃತ್ತನ್ಯಾಯಮೂರ್ತಿ ಎನ್. ಕುಮಾರ್ ಅಭಿಪ್ರಾಯ ಪಟ್ಟರು .
ಶ್ರೀ ಸಿರಿನಾಡು ಮಹಾ ಸಭಾ ವತಿಯಿಂದ ಬೆಂಗಳೂರಿನಲ್ಲಿನಡೆದ ಧನ್ವಂತರಿ ಮಹಾ ಯಜ್ಞ ಮತ್ತು ಸಿರಿನಾಡು ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಚಾಲನೆನೀಡಿ ಮಾತನಾಡಿದ ಅವರು ಬ್ರಾಹ್ಮಣನಾಗಿ ಹುಟ್ಟಿದ ಮೇಲೆ ಬ್ರಾಹ್ಮಣ್ಯತ್ವವನ್ನು ಉಳಿಸಿಕೊಂಡು ಹೋಗುವುದು ನಮ್ಮ ಜವಾಬ್ದಾರಿಯಾಗಿದೆ. ಸಂಸ್ಕೃತಿ ಮತ್ತು ಪರಂಪರೆಯನ್ನು ಪಾಲಿಸಿಕೊಂಡು ಬ್ರಾಹ್ಮಣ ಧರ್ಮವನ್ನು ಎತ್ತಿ ಹಿಡಿಯಬೇಕು ಎಂದು ಪ್ರತಿಪಾದಿಸಿದರು.

ರಾಜ್ಯದಲ್ಲಿ ಬ್ರಾಹ್ಮಣರ ಸಂಖ್ಯೆ ಸರಿಸುಮಾರು 15 ಲಕ್ಷವಿದೆ.ಮುಂಚಿನ ಕಾಲದಲ್ಲಿ ಪ್ರತಿ ಕುಟುಂಬದಲ್ಲಿ ಕನಿಷ್ಟ ಹತ್ತರಿಂದ ಹದಿನೈದು ಜನರಿರುತ್ತಿದ್ದರು. ಈಗ ಈ ಸಂಖ್ಯೆ ನಾಲ್ಕರಿಂದ ಆರಕ್ಕಿಳಿದಿದೆ. ಇದು ಇನ್ನೂ ಕುಗುತ್ತ ಹೋಗಿ ಕೆಲವೇ ವರ್ಷಗಳಲ್ಲಿ ಬ್ರಾಹ್ಮಣ ಸಂತತಿಯೇ ಸಂಪೂರ್ಣ ನಶಿಸಿ ಹೋಗುತ್ತದೆ. ಈ ವಿಷಯವನ್ನು ಯುವ ಜನಾಂಗ ಅತ್ಯಂತ ಗಂಭೀರವಾಗಿ ಪರಿಗಣಿಸ ಬೇಕೆಂಬ ಹಿತವಚನ ನುಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಹಾಸಭಾ ನೀಡಿದ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಕರ್ನಾಟಕ ಬ್ರಾಹ್ಮಣ ಮಂಡಳಿ ಅಧ್ಯಕ್ಷತೋ.ಚ.ಅನಂತಸುಬ್ಬರಾವ್ ಮಂಡಳಿಯಿಂದ ಬ್ರಾಹ್ಮಣ ಸಮುದಾಯಕ್ಕೆ ದೊರೆಯಬಹುದಾದ ಸೌಲಭ್ಯಗಳನ್ನು ವಿವರಿಸಿದರು. ಮಹಾ ಸಭಾ ಅಧ್ಯಕ್ಷ ಡಾ. ಹೆಚ್.ಎಸ್. ಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿದ್ದರು.

ಬ್ರಾಹ್ಮಣ ಸಮುದಾಯದಿಂದ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ತೊ.ಚ. ಅನಂತಸುಬ್ಬರಾಯ , ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷ ಕೆ.ಎನ್.ವೆಂಕಟನಾರಾಯಣ, ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಹೆಚ್.ವಿ. ಮಂಜುನಾಥ್, ಆಂಧ್ರ ಪ್ರದೇಶದ ಬ್ರಾಹ್ಮಣಸೇವಾ ಸಂಘ ಸಮಾಖ್ಯ ಜ್ವಾಲಾಪುರಂ ಶ್ರೀಕಾಂತ್, ಹಿರಿಯ ಪತ್ರಕರ್ತ ವೆಂಕಟನಾರಾಯಣ ಮತ್ತಿತರರು ಉಪಸ್ಥಿತರಿದ್ದರು.
ಮಹಾ ಸಭಾ ಕಾರ್ಯಧ್ಯಕ್ಷ ಸಿರಿ ಸುದರ್ಶನಮ್ ಸ್ವಾಗತಿಸಿದರು. ಕಾರ್ಯದರ್ಶಿ ವಿ. ಶಂಕರ್ ವಂದಿಸಿದರು. ಕುಮಾರಿ ರೂಪ ಕಾರ್ಯಕ್ರಮ ನಿರೂಪಿಸಿದರು.
City Today News
(citytoday.media)
9341997936
