ನಕಲಿ ಫೇಸ್‌ಬುಕ್ ಖಾತೆ ತೆರೆದು ಮದುವೆಯಾಗುವುದಾಗಿ ನಂಬಿಸಿ ವಂಚಿಸುತ್ತಿದ್ದವನ ಬಂಧನ

ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆ :

ನಕಲಿ ಫೇಸ್‌ಬುಕ್ ಖಾತೆ ತೆರೆದು ಮದುವೆಯಾಗುವುದಾಗಿ ನಂಬಿಸಿ ವಂಚಿಸುತ್ತಿದ್ದವನ ಬಂಧನ ಬೆಂಗಳೂರು ನಗರದ ಸಿ . ಸಿ . ಬಿ ಘಟಕದ ಸೈಬರ್ ಕ್ರೈಂ ಪೊಲೀಸರು ವಿನಾಂಕ : 29 . 07 . 2018 ರಂದು ವೈಟ್‌ಫೀಲ್ಡ್ ಪೊಲೀಸ್ ಠಾಣಾ ಸರಹದ್ದಿನ ನಲ್ಲೂರಕ್ಕೆ ರಸ್ತೆಯ ದಿವ್ಯ ಶ್ರೀ ಪ್ಲಾಜಾ ಬಳಿ ನಡೆಸಿದ ಕಾರ್ಯಚರಣೆಯಲ್ಲಿ ಆಕಾಶ್ ಭಟ್ ಎಂಬ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ಹೆಂಗಸರನ್ನು ಪರಿಚಯಿಸಿಕೊಂಡು ಸತ್ತಿಗೆ ಬೆಳೆಸಿ ತದನಂತರದಲ್ಲಿ ಮದುವೆಯಾಗುವುದಾಗಿ ನಂಬಿಸಿ ಭಾವನಾತ್ಮಕವಾಗಿ ತನ್ನ ಸಂಕಷ್ಟಗಳನ್ನು ಹೇಳಿಕೊಂಡು ಹಂತ ಹಂತವಾಗಿ ಸುಮಾರು 1 , 23 , 295 / ರೂ ಹಣವನ್ನು ವಿವಿಧ ಖಾತೆಗಳಿಗೆ ಮತ್ತು ವ್ಯಾಲೆಟ್‌ಗಳಿಗೆ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ ಆರೋಪದಡಿ ವ್ಯಕ್ತಿಯೋರ್ವನನ್ನು ಬಂಧಿಸಿ 7 ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆದು ಆತನ ವಶದಿಂದ ಕೃತ್ಯಕ್ಕೆ ಸಂಬಂಸಿದಂತೆ ಒಂದು ಕಾರು , ಒಂದು ಲ್ಯಾಪ್‌ಟಾಪ್ , ಒಂದು ಮೊಬೈಲ್ ಹಾಗೂ ಸುಮಾರು 40 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ . ವಶಪಡಿಸಿದ ಮಾಅನ ಮೌಲ್ಯ ಸುಮಾರು 6 . 2 ಲಕ್ಷ ರೂಗಳೆಂದು ಅಂದಾಜಿಸಲಾಗಿದೆ .

ದಸ್ತಗಿರಿಯಾದವರ ವಿವರ ಕೆಳಕಂಡಂತಿದೆ :

ಪ್ರಮೋದ್ ಮಂಜುನಾಥ್ ಹೆಗಡೆ @ ಆಕಾಶ್ ಭಟ್ ಬಿನ್ ಮಂಜುನಾಥ್ ಹೆಗಡೆ , 28 ವರ್ಷ , ನಂ : 001 , ಪೈಲೇಕ್ ರೆಸಿಡೆನ್ಸಿ , ಈದ್ಧಾ ರಸ್ತೆ , ವರ್ತೂರು , ಬೆಂಗಳೂರು . ಸ್ವಂತ ವಿಳಾಸ – ಕಾಂಚಕ್ಕೆ ( ಗ್ರಾಮ ) , ಇಟೌನಿ ( ಪೋಸ್ಟ್ , ಸಿದ್ದಾಪುರ ( ತಾ ) , ಉತ್ತರಕನ್ನಡ ( ಜಲ್ಲಿ ) . ಆರೋಪಿಯ ಪ್ರಾಥಮಿಕ ವಿಚಾರಣೆಯಿಂದ ಈ ಕೆಳಕಂಡ ಅಂಶಗಳು ಕಂಡು ಬಂದಿರುತ್ತದೆ . 1 ) ಅರೋಪಿ ಅಕಾಶ್ ಭಟ್ ಎಂಬ ಕಪೋಲಕಲ್ಪಿತ ಹೆಸರನ್ನು ಬಳಸಿಕೊಂಡು ನಕಲಿ ಫೇಸ್‌ಬುಕ್ ಖಾತೆ ತೆರೆದು ಹೆಂಗಸರಿಗೆ ಫ್ರೆಂಡ್ ಅಕ್ಸೆಸ್ ಕಳುಹಿಸುತ್ತಿದ್ದು , ಅಕ್ಸೆಸ್ ಅಕ್ಸೆಪ್ಟ್ ಮಾಡಿದ ಹೆಂಗಸರೊಂದಿಗೆ ಮೆಸೆಂಜರ್ ಮೂಲಕ ಚಾಟಿಂಗ್ ಮಾಡಲು ಪ್ರಾರಂಭಿಸುತ್ತಿದ್ದ ವಿಚಾರ ತಿಳಿದುಬಂದಿರುತ್ತದೆ . 2 ) ಚಾಟಿಂಗ್ ಮಾಡುತ್ತಿದ್ದ ಮಹಿಳೆಯರಿಗೆ ಅತ್ಯಂತ ನಿಕಟ ಸ್ನೇಹಿತನಂತೆ ವರ್ತಿಸುತ್ತಾ ಸಲಿಗೆ ಬೆಳೆಸುತ್ತಿದ್ದ ವಿಚಾರ ತಿಳಿದುಬಂದಿರುತ್ತದೆ , 3 ) ಸಲಿಗೆಯಿಂದ ಚಾಟಿಂಗ್ ಮಾಡುತ್ತಿದ್ದ ಹೆಂಗಸರನ್ನು ಮದುವೆಯಾಗುವುದಾಗಿ ವಂಚಿಸುತ್ತ ಭಾವನಾತ್ಮಕವಾಗಿ ಹಲವಾರು ಕಾರಣಗಳನ್ನು ಕಷ್ಟಕಾರ್ಪಣ್ಯಗಳನ್ನು ವರ್ಣಿಸಿ ಹಂತ ಹಂತವಾಗಿ ನಿರಂತರವಾಗಿ ಕಳೆದ ಒಂದು ವರ್ಷದಿಂದ ಸುಮಾರು 11 , 23 , 285 / – ರೂಗಳನ್ನು ವಿವಿಧ ಖಾತೆಗಳಿಗೆ ಜಮಾ ಮಾಡಿಸಿಕೊಂಡು ವಂಚಿಸಿದ ನಂತರ ಸಂಪರ್ಕ ಕಡಿತಗೊಳಿಸಿಕೊಂಡು ತಲೆಮರೆಸಿಕೊಂಡಿದ್ದರಿಂದ ಅನುಮಾನಗೊಂಡು ನೊಂದ ಮಹಿಳೆ ದಿನಾಂಕ : 25 . 02 . 2019 ರಂದು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಲಾಗಿತ್ತು . 4 ) ಆರೋಪಿ ನೊಂದ ಮಹಿಳೆಯೊಂದಿಗೆ ತಾನು ಬೆಂಗಳೂರಿನ ವೈಟ್‌ಫೀಲ್ಡ್‌ನ ಖಾಸಗಿ ಕಂಪನಿಯಲ್ಲಿ ಬ್ರಾಂಚ್ ಮ್ಯಾನೇಜರ್ ಹಾಗೂ ಸೂಪರ್ ಮಾರ್ಕೆಟ್ ಏಸಿನೆಸ್ ಕೆಲಸ ಮಾಡುತ್ತಿರುವುದಾಗಿ ಬಿಂಬಿಸಿಕೊಂಡು ನಂಬಿಸಿದ್ದ . ಆರೋಪಿ ಇದೇ ಅತಿ ಇತರೆ ಮಹಿಳೆಯಲಗೂ ಫೇಸ್‌ಬುಕ್ ಮೂಲಕ ಸಂಪರ್ಕಿಸಿಕೊಂಡು ಮದುವೆಯಾಗುವುದಾಣ ನಂಚಿಸಿ ವಂಚಿಸಿರುವ ಬಗ್ಗೆ ಮಾಹಿತಿ ಇದ್ದು , ನೊಂದ ಮಹಿಳೆಯರು ಬೆಂಗಳೂರು ನಗರದ ಪೊಲೀಸ್ ಆಯುಕ್ತರ ಕಛೇರಿ ಆವರಣದಲ್ಲಿರುವ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಭೇಟಿ ನೀಡಿ ಅಂತ ದೂರು ದಾಖಲಿಸಬಹುದಾಗಿದೆ . ಸಾಮಾಜಿಕ ಜಾಲತಾಣದ ಖಾತೆಗಳ ಮೂಲಕ ಪರಿಚಯಿಸಿಕೊಳ್ಳುವ ವ್ಯಕ್ತಿಗಳ ನೈಜತೆ ತಿಳಿಯದೆ ತಮ್ಮ ಖಾಸಗಿ ಮಾಹಿತಿಗಳನ್ನು , ಕ್ಷಣಗಳನ್ನು ಹಂಚಿಕೊಂಡಲ್ಲಿ ಅಥವಾ ಬಣ್ಣ ಬಣ್ಣದ ಮಾತುಗಳಿಗೆ ಮರುಳಾ ಹಣ ವರ್ಗಾವಣೆ ಮಾಡಿ ವಂಚನೆಗೊಳಗಾಗದಂತೆ ಎಚ್ಚರವಹಿಸಲು ಕೋಲದೆ . . ಈ ಪತ್ತೆ ಕಾರ್ಯವನ್ನು ಜಂಟಿ ಪೊಲೀಸ್ ಆಯುಕ್ತರು , ಅಪರಾಧರವರಾದ ಶ್ರೀ . ಸಂದೀಪ್ ಪಾಟೀಲ್ , ಐ . ಪಿಎಸ್ , ಜಲ9 ಪೊಲೀಸ್ ಆಯುಕ್ತರು , ಅಪರಾದ – 2 ರವರಾದ ಕೆ . ಪಿ . ರವಿಕುಮಾರ್ ರವರುಗಳ ಮಾರ್ಗದರ್ಶನದಲ್ಲಿ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪಿ . ಐ . ಶ್ರೀ ಕೆ . ಎನ್ . ಯಶವಂತಕುಮಾರ್ , ಪಿಎಸ್‌ಐ ಶ್ರೀ ಸಂತೋಷ್‌ರಾಮ್ , ಎಎಸ್‌ಐ ಶ್ರೀ ಕುಮಾರಸ್ವಾಮಿ , ಹೆಚ್‌ಸಿ ಶ್ರೀ . ಸತೀಶ್ , ಆರ್ , ಪಿಸಿ ಶ್ರೀ ಸದಾಶಿವರವರುಗಳು ಪಾಲ್ಗೊಂಡಿರುತ್ತಾರೆ .

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.