ಬೆಂಗಳೂರು: ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡುವ ನಿಟ್ಟಿನಲ್ಲಿ ಪರಿಹಾರ ಒದಗಿಸುವ ಬೆಂಗಳೂರು ಮೂಲದ ಕ್ಲಿಯರ್ ಟ್ಯಾಕ್ಸ್ ಸಂಸ್ಥೆಯು ಆಗಸ್ಟ್ 21 ಮತ್ತು 22 ರಂದು ‘ಬಿಗ್ ಫೈಲಿಂಗ್ ಡೇಸ್’ಗೆ ಚಾಲನೆ ನೀಡಿದೆ.
ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡುವ ಕೊನೆಯ ದಿವಸ ವೇಗವಾಗಿ ಸಮೀಪಿಸುತ್ತಿದೆ. ಕೊನೆಯ ಘಳಿಗೆಯಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಲು ತೆರಿಗೆದಾರರು ಒತ್ತಡಕ್ಕೆ ಒಳಗಾಗುತ್ತಾರೆ. ಸುಲಭವಾಗಿ ಮತ್ತು ವೇಗವಾಗಿ ಈ ಕಾರ್ಯವನ್ನು ಮಾಡುವ ಮಾರ್ಗಕ್ಕಾಗಿ ತೆರಿಗೆದಾರರು ಅಪೇಕ್ಷಿಸುತ್ತಾರೆ. ತೆರಿಗೆದಾರರ ಈ ಭಾರವನ್ನು ಇಳಿಸಿ ಸುಲಭವಾಗಿ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡುವ ಮಾರ್ಗವನ್ನು ಕ್ಲಿಯರ್ ಟ್ಯಾಕ್ಸ್ ಸಂಸ್ಥೆ ಒದಗಿಸಿ ಕೊಡುತ್ತದೆ. ಈ ಉದ್ದೇಶದಿಂದ ಕ್ಲಿಯರ್ ಟ್ಯಾಕ್ಸ್ ಸಂಸ್ಥೆಯು ‘ಬಿಗ್ ಫೈಲಿಂಗ್ ಡೇಸ್’ಗೆ ಇದೇ ಆಗಸ್ಟ್ 21 ಮತ್ತು 22 ಕ್ಕೆ ಚಾಲನೆ ನೀಡಿದೆ.
ಈ ಸಮಯದಲ್ಲಿ ಟ್ಯಾಕ್ಸ್ ಫೈಲಿಂಗ್ ಮಾಡುವ ಗ್ರಾಹಕರಿಗೆ ರಿವಾರ್ಡ್ ಕೂಡ ಸಂಸ್ಥೆ ಒದಗಿಸಲಿದೆ. ನಿಮಿಷಕ್ಕೊಮ್ಮೆ ನೆಟ್ ಫ್ಲಿಕ್ಸ್ ಸಬ್ಸ್ ಕ್ರಿಪ್ಶನ್, ಗಂಟೆಗೊಮ್ಮೆ ಗೂಗಲ್ ಹೋಮ್ ಸ್ಮಾರ್ಟ್ ಸ್ಪೀಕರ್ ಮತ್ತು ಪ್ರತಿ ದಿನ ಥೈಲ್ಯಾಂಡ್ ಗೆ ಉಚಿತ ಪ್ರವಾಸವನ್ನು ರಿವಾರ್ಡ್ ರೂಪದಲ್ಲಿ ನೀಡಲಾಗುವುದು. ಇದರ ಜತೆಗೆ ರೂಪಾಯಿ 10,000 ವರೆಗೆ ರಿವಾರ್ಡ್ ಕೂಡ ನೀಡಲಾಗುವುದು.
ಕ್ಲಿಯರ್ ಟ್ಯಾಕ್ಸ್ ವೆಬ್ ಸೈಟ್ ಅಥವಾ ಆ್ಯಪ್ ಮೂಲಕ ಉಚಿತವಾಗಿ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಬಹುದು. ಆಗಸ್ಟ್21 ಮತ್ತು 22 ಕ್ಕೆ ರಿಟರ್ನ್ಸ್ ಫೈಲ್ ಮಾಡಿದರೆ ರಿವಾರ್ಡ್ ಪಡೆಯಲು ಆರ್ಹರಾಗಿರುತ್ತಾರೆ. ವಿಜೇತರಿಗೆ ಇಮೇಲ್ ಮೂಲಕ ಮಾಹಿತಿ ನೀಡಲಾಗುವುದು.
“ಕ್ಲಿಯರ್ ಟ್ಯಾಕ್ಸ್ ಸಂಸ್ಥೆ ಇಂದ ಇದೊಂದು ವಿಶೇಷ ಸವಲತ್ತು ಒದಗಿಸಲಾಗುತ್ತಿದೆ. ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಿದ್ದಕ್ಕೆ ಪ್ರತಿ ತೆರಿಗೆದಾರನಿಗೆ ರಿವಾರ್ಡ್ ದೊರಕಬೇಕು. ತೆರಿಗೆದಾರರು ದೇಶಕ್ಕಾಗಿ ಕೊಡುಗೆ ನೀಡುತ್ತಾರೆ. ಅವರ ಶ್ರಮಕ್ಕೆ ನಮ್ಮ ಮೆಚ್ಚುಗೆ ಸದ ಇರುತ್ತದೆ” ಎಂದು ಕ್ಲಿಯರ್ ಟ್ಯಾಕ್ಸ್ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ಅರ್ಚಿತ್ ಗುಪ್ತಾ ಹೇಳಿದರು.
City Today News
(citytoday.media)
9341997936
