ಶಿವಾಜಿನಗರದ ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ದೇಶದ ರಾಷ್ಟ್ರಪಿತ ” ಶ್ರೀಮಾನ್ ಗಾಂಧಿ ಜೀ ರವರ ” 150ನೇ ಜನ್ಮ ದಿನಾಚರಣೆ

ದಿನಾಂಕ 02 – 10 – 2019 ರಂದು ಗಾಂಧಿ ಜಯಂತಿಯನ್ನು ” ಶಿವಾಜಿನಗರದ ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿರುವ ನಮ್ಮ ದೇಶದ ರಾಷ್ಟ್ರಪಿತ ಆದಂತಹ ” ಶ್ರೀಮಾನ್ ಗಾಂಧಿ ಜೀ ರವರ ” 150ನೇ ಜನ್ಮ ದಿನಾಚರಣೆಯನ್ನು ಬೆಳಿಗ್ಗೆ 09 : 30ಗೆ ಆಚರಿಸುತ್ತೇವೆ . ಈ ಕಾರ್ಯಕ್ರಮಕ್ಕೆ ಶಾಸಕರು ಲೋಕಸಭಾ ಸದಸ್ಯರು , ಬೆಂಗಳೂರು ನಗರದ ಜಿಲ್ಲಾಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು , ಕೆ . ಪಿ . ಸಿ . ಸಿ ಕಾರ್ಮಿಕ ವಿಭಾಗದ ಪದಾಧಿಕಾರಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಆಗಮಿಸುತ್ತಾರೆ . ಅನಂತರ ಕೆ . ಪಿ . ಸಿ . ಸಿಯಿಂದ ನಡೆಯುವ ಪಾದಯಾತ್ರೆ ಮತ್ತು ಗಾಂಧಿಜಯಂತಿಗೆ ಕಾರ್ಮಿಕ ವಿಭಾಗದವರು ಭಾಗವಹಿಸುತ್ತಾರೆ . ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಡಾ | ಎಸ್‌ . ಎಸ್‌ . ಪ್ರಕಾಶಂ ರನ್ನು ಅಭ್ಯರ್ಥಿಯನ್ನಾಗಿಸಬೇಕೆಂದು ಕೆ . ಪಿ . ಸಿ . ಸಿ ಕಾರ್ಮಿಕ ವಿಭಾಗದಿಂದ ರಾಷ್ಟ್ರ ಹಾಗೂ ರಾಜ್ಯದ ಕಾಂಗ್ರೆಸ್ ಮುಖಂಡರಲ್ಲಿ ಹಲವಾರು ಬಾರಿ ಮನವಿ ಮಾಡಿದ್ದೇವೆ . ಕಳೆದ 40 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರಾಗಿ , ಸಂಘಟನೆ ಮಾಡುವ ಮೂಲಕ ಪಕ್ಷದ ಸೇವೆಯಲ್ಲಿರುವಂತಹ ಕಾರ್ಮಿಕ ನಾಯಕರಾಗಿ ಗುರುತಿಸಿಕೊಂಡಿರುವಂತಹ ಇವರನ್ನು ಕಾರ್ಮಿಕರ ಪರವಾಗಿ ರಾಜಕೀಯ ಸ್ಥಾನಮಾನ ಕಲ್ಪಿಸಿ ವಿಧಾನ ಸಭಾ ಸದಸ್ಯರನ್ನಾಗಿ ಆಯ್ಕೆ ಸಮಿತಿಯನ್ನು ಕಾರ್ಮಿಕ ಪರವಾಗಿ ನ್ಯಾಯ ಕಲ್ಪಿಸಿಕೊಡಲು ಅನೂಕೂಲವಾಗುತ್ತದೆ : ಕರ್ನಾಟಕ ಕಾರ್ಮಿಕ ಇಲಾಖೆಯ ಕಟ್ಟಡ ಕಾರ್ಮಿಕರ ಮಂಡಳಿಯಲ್ಲಿ 8000 ಕೋಟಿ ಹಣವಿದ್ದು , ಅದಕ್ಕೆ 500 ಕೋಟಿ ಬಡ್ಡಿ ಸಹ ಬರುತ್ತಿದೆ . ಈ ಹಣದಿಂದ ಕರ್ನಾಟಕದಲ್ಲಿ ಅಸಂಘಟಿತ ಕಾರ್ಮಿಕರಿಗೆ ಯಾವುದೇ ರೀತಿಯ ಸೌಲಭ್ಯಗಳು ದೊರೆತಿಲ್ಲ . ಸರ್ಕಾರದಿಂದ ನೀಡುತ್ತಿರುವ ಸೌಲಭ್ಯಗಳಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ , ಮದುವೆ ಸಹಾಯಧನ , ಕಾರ್ಮಿಕ ಅನಿಲ ಭಾಗ್ಯ , ವೈದ್ಯಕೀಯ ವೆಚ್ಚ ಸಹಾಯಧನ ಸಲಿಯಾದ ಸಮಯದಲ್ಲಿ ದೊರೆಯುತ್ತಿಲ್ಲ . ಕೆ . ಪಿ . ಸಿ . ಸಿ ಕಾರ್ಮಿಕ ವಿಭಾಗದಲ್ಲಿ 12 ಲಕ್ಷ ಸದಸ್ಯರಿದ್ದಾರೆ . ಕಾರ್ಮಿಕರ ಹಿತ ಕಾಪಾಡಲು , ಕಾರ್ಮಿಕ ಪರವಾಗಿ ನ್ಯಾಯ ಕಲ್ಪಿಸಿಕೊಡಲು ಅನೂಕೂಲವಾಗುತ್ತದೆ . ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪರವರು ಕಟ್ಟಡ ಕಾರ್ಮಿಕರಿಗೆ ಬಿ . ಎಂ . ಟಿ . ಸಿ ಪಾಸ್‌ಗಳನ್ನು 5 , 42 , 000 ಕ್ಕೆ ಏರಿಸಿದ್ದಾರೆ . ಆದರೆ ಕಟ್ಟಡ ಕಾರ್ಮಿಕ ಮಂಡಳಿಯಲ್ಲಿ ಸದಸ್ಯರಾಗಿರುವ ಪ್ರತಿಯೊಬ್ಬರಿಗೂ ಬಿ . ಎಂ . ಟಿ . ಸಿ ಹಾಗೂ ಕೆ . ಎಸ್ . ಆರ್ . ಟಿ . ಸಿ ಪಾಸ್‌ಗಳನ್ನು ವಿತರಿಸಬೇಕೆಂದು ಒತ್ತಡ ಮಾಡುತ್ತಿದ್ದೇವೆ . ಡಾ | | ಎಸ್‌ . ಎಸ್‌ . ಪ್ರಕಾಶಂರವರು 224ಕ್ಷೇತ್ರಗಳಲ್ಲಿ ಮತ್ತು 198 ವಾರ್ಡ್‌ಗಳಲ್ಲಿ ಕಾರ್ಮಿಕ ಸೇವಾ ಕೇಂದ್ರವನ್ನು ಆರಂಭಿಸಲು ಪ್ರಯತ್ನ ಮಾಡುತ್ತಿದ್ದಾರೆ . ಆದಷ್ಟು ಬೇಗನೇ ಎಲ್ಲಾ ಕಟ್ಟಡ ಕಾರ್ಮಿಕರಿಗೂ ಹಾಗೂ ಅಸಂಘಟಿತ ಕಾರ್ಮಿಕರಿಗೂ ಸೌಲಭ್ಯಗಳನ್ನು ದೊರಕಿಸಿ ಕೊಡಲು ಪ್ರಯತ್ನ ಮಾಡುತ್ತಿದ್ದಾರೆ . ಈ ಹಿಂದೆ 2018ರವರೆಗು ಕಾಂಗ್ರೆಸ್ ಸರ್ಕಾರದಡಿಯಲ್ಲಿ ಮಾನ್ಯ ಸಿದ್ದರಾಮಯ್ಯರವರು ಮುಖ್ಯಮಂತ್ರಿಯಾಗಿದ್ದಂತ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರ ಯೋಜನೆಯಡಿ ಸರ್ಕಾರದ ಸಹಬಾತ್ವದೊಂದಿಗೆ ಖಾಸಗಿ ಸಂಸ್ಥೆಯೊಂದಕ್ಕೆ ಕಟ್ಟಡ ಕಾರ್ಮಿಕರು ಮತ್ತು ಅಸಂಗಟಿತ ಕಾರ್ಮಿಕರನ್ನು ಗುರುತಿಸಿ ಸ್ಮಾರ್ಟ್ ಕಾರ್ಡ್ ವಿತರಿಸಲು ಯೋಜನೆಯೊಂದಕ್ಕೆ ಗುತ್ತಿಗೆ ನೀಡಲಾಗಿತ್ತು ಅದರಂತೆ ಖಾಸಗಿ ಸಂಸ್ಥೆಯು ಕೂಡ ಗ್ರಾಮವಾರು ಸರ್ಕಾರಿ ನೌಕರರನ್ನು ಒಳಗೊಂಡಂತೆ ಸುಮಾರು 7 , 50 , 000 ( ಏಳು ಲಕ್ಷದ ಐವತ್ತು ಸಾವಿರ ) ಕಟ್ಟಡ ಕಾರ್ಮಿಕರನ್ನು ರಾಜ್ಯಾದಂತ ಗುರುತಿಸಿ 3 , 00 , 000 ( ಮೂರು ಲಕ್ಷ ) ಸ್ಮಾರ್ಟ್ ಕಾರ್ಡ್ ಗಳನ್ನು ವಿತರಿಸಲಾಗಿತ್ತು . 4 , 50 , 000 ( ನಾಲ್ಕು ಲಕ್ಷದ ಐವತ್ತು ಸಾವಿರ ) ಸ್ಮಾರ್ಟ್ ಕಾರ್ಡ್ ಇನ್ನೂ ಸಹ ವಿತರಿಸಲು ಬಾಕಿ ಉಳಿದಿದ್ದು ಅವುಗಳನ್ನು ಕಾರ್ಮಿಕರಿಗೆ ವಿತರಿಸಲು ಸಾದ್ಯವಾಗಿಲ್ಲ . ಈ ಸೌಲಭ್ಯದ ಸಲುವಾಗಿ ಕಾರ್ಡ್ ಗಳನ್ನು ಪಡೆಯಲು ಕಾರ್ಮಿಕ ಅಧಿಕಾರಿಯವರೆ ಸಹಿ ಹಾಕಿ ವಿತರಿಸಿರುತ್ತಾರೆ . ಮುಂದುವರಿದಂತೆ ಈ ಯೋಜನೆಯು – ಕಾಂಗ್ರೆಸ್ ಸರ್ಕಾರದ ನಂತರ ಬಂದ ಸರ್ಕಾರಗಳು ಮತ್ತು ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸದೆ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳು ದೊರಕುವಲ್ಲಿ ಬಹಳ ವಂಚಿತರಾಗಿರುತ್ತಾರೆ , ಈ ಯೋಜನೆಯನ್ನು ಏಕಾಏಕಿ ರದ್ದು ಮಾಡಿರುವುದರಿಂದ ನಿಜವಾದ ಕಾರ್ಮಿಕರು ಕೂಡ ಸೌಲಭ್ಯ ವಂಚಿತರಾಗಿರುತ್ತಾರೆ ಮತ್ತು ವಿತರಿಸಿದ್ದ 3 , 00 , 000 ( ಮೂರು ಲಕ್ಷ ) ಕಟ್ಟಡ ಕಾರ್ಮಿಕರ ಸ್ಮಾರ್ಟ್ ಕಾರ್ಡ್ ಗಳನ್ನು ಸಹ ಯಾವುದೇ ಸೌಲಭ್ಯ ದೊರಕದಂತೆ ರದ್ದು ಮಾಡಿರುವುದು ಬಹಳ ವಿಷಾದನೀಯ . ಈ ಯೋಜನೆಯನ್ನು ಸರ್ಕಾರಿ ಅಧಿಕಾರಿಗಳನ್ನು ಒಳಗೊಂಡಂತೆ ಕಾರ್ಯನಿರ್ವಹಿಸಿದ್ದು ಸರ್ಕಾರಕ್ಕೆ ಕಾರ್ಮಿಕರಿಂದ ಸ್ಮಾರ್ಟ್ ಕಾರ್ಡ್ ಪಡೆಯಲು ಹಣ ಪಡೆದಿದ್ದು ಆ ಹಣವನ್ನು ಸರ್ಕಾರಕ್ಕೆ ಸಂದಾಯವನ್ನು ಕೂಡ ಮಾಡಿರುತ್ತದೆ . ಹೀಗಾಗಿ ಕಾರ್ಮಿಕರಿಗೆ ಬಹಳ ಅನ್ಯಾಯವಾಗಿರುತ್ತದೆ . ಅಸಂಘಟಿತ ಕಾರ್ಮಿಕರಿಗೆ ನೀಡಿರುವ ಸ್ಮಾರ್ಟ್ ಕಾರ್ಡ್ ಫಲಾನುಭವಿಗಳಿಗೆ ಪಿಂಚಣಿಯು ಯೋಜನೆ ಜಾರಿಗೆ ಬಂದಿಲ್ಲ . ಕಾರ್ಮಿಕ ಪರವಾಗಿ ಹೋರಾಡುವ ಕೆ . ಪಿ . ಸಿ . ಸಿ ಕಾರ್ಮಿಕ ವಿಭಾಗ ಹಾಗೂ ಡಾ | | ಎಸ್ . ಎಸ್ . ಪ್ರಕಾಶಂ , ಕೆ . ಪಿ . ಸಿ . ಸಿ ಕಾರ್ಮಿಕ ವಿಭಾಗ ರಾಜ್ಯಾಧ್ಯಕ್ಷರು , ಐ . ಎನ್ . ಟಿ . ಯು . ಸಿ ರಾಷ್ಟ್ರ ಕಾರ್ಯದರ್ಶಿ ಕೆ . ಪಿ . ಸಿ . ಸಿ , ಮಾಜಿ ಪ್ರಧಾನ ಕಾರ್ಯದರ್ಶಿ . ಶಿವಾಜಿನಗರದ ಕ್ಷೇತ್ರದಲ್ಲಿ 60 % ಅಸಂಘಟಿತ ಕಾರ್ಮಿಕರಿದ್ದಾರೆ . ಕರ್ನಾಟಕ ವಿಧಾನ ಸಭೆಯಲ್ಲಿ ಕಾರ್ಮಿಕರ ಬಗ್ಗೆ ಮಾತನಾಡುವ ಒಬ್ಬ ಪ್ರತಿನಿಧಿ ಇಲ್ಲ . ಕಾಂಗ್ರೆಸ್ ಪಕ್ಷದಲ್ಲಿ ಶಿವಾಜಿನಗರದ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಹಿಂದೂ ಸಮುದಾಯದವಲಗೆ ನೀಡಬೇಕೆಂದು ರಾಷ್ಟ್ರ ಹಾಗೂ ರಾಜ್ಯದ ಕಾಂಗ್ರೆಸ್ ಮುಖಂಡರಲ್ಲಿ ಈ ಬಾರಿ ಮನವಿ ಮಾಡಿದ್ದೇವೆ . ಈ ಬಾರಿಯಾದರು ಡಾ | | ಎಸ್‌ . ಎಸ್‌ . ಪ್ರಕಾಶಂರವರನ್ನು ಶಿವಾಜಿನಗರದ ಅಭ್ಯರ್ಥಿಯನ್ನಾಗಿ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇವೆ .

– ಜಿ . ಆರ್. ಧಿನೇಶ್
ಪ್ರಧಾನ ಕಾರ್ಯದರ್ಶಿ

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.