
ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಹಿರಿಯರು ಕನ್ನಡಿಗರು.
ಬೂಕನಕೆರೆ ಸಿದ್ದಲಿಂಗಯ್ಯ ಯಡಿಯೂರಪ್ಪ ರವರು.
ಮಹಾನಗರಪಾಲಿಕೆ ಮಹಾಪೌರರು.
ಗೌತಮಕುಮಾರ್ ಜೈನ್.
ಕನ್ನಡಿಗರ ಪರಿಸ್ಥಿತಿ ರಾಜಧಾನಿ ಬೆಂಗಳೂರಿಗೆ ಬಿಜೆಪಿ ಪಕ್ಷ ನೇಮಿಸಿದ ಮೇಯರ್ ಕನ್ನಡಿಗರಿಗೆ ಮಾಡಿದ ಅಪಮಾನ.
ದೇಶದ ಯಾವುದೇ ರಾಜ್ಯ ರಾಜಧಾನಿಗಳಲ್ಲಿ ಈ ಅನ್ಯಾಯ ಕಾಣಸಿಗದು.
ಬಹುಶಃ ನಮ್ಮ ಕರ್ನಾಟಕವನ್ನ ಕೇವಲ ಕುರ್ಚಿಯ ಬಲಕ್ಕಾಗಿ ಬಳಸಿಕೊಂಡು ೨೫ ಜನ ಸಂಸದರನ್ನ ಗೆಲ್ಲಿಸುವಲ್ಲಿ ತೋರಿದ ಕಾಳಜಿ ನಮ್ಮ ಉತ್ತರ , ದಕ್ಷಿಣ ಕರ್ನಾಟಕದ ನೆರೆ ಪರಿಹಾರಕ್ಕೆ ಬಡಜನರ ಬದುಕು ಕಟ್ಟಿಕೊಡಬೇಕಾದ ರಾಜ್ಯ ಕೇಂದ್ರ ಸರ್ಕಾರ ತೋರಿದ ನಿರ್ಲಕ್ಷ್ಯ ನಿಜಕ್ಕೂ ಮತದಾರ ಮರುಕ ಪಡುವದಲ್ಲದೆ ತಪ್ಪಿನ ಅರಿವು ಪಾಪಪ್ರಜ್ಞೆ ಇನ್ನಿಲ್ಲದಂತೆ ಕಾಡಿ.. ಪರಿಹಾರಕ್ಕಾಗಿ ಬೇಡಿ ಕೋಡಿ ಓಡೆದ ನಮ್ಮ ತಾಳ್ಮೆ ಸಹನೆ. ಸಂಸದರತ್ತ ನೋಡಿದರೆ ೨೫ರ ಪೈಕಿ ಓಬ್ಬರು ಚಕಾರವೆತ್ತದಿರುವುದು ವಿಳಂಬವನ್ನು ಸಮರ್ಥಿಸಿಕೊಳ್ಳುವದು ದೆಹಲಿ ನಾಯಕರ ಮೆಚ್ಚಿಸಲೋಗಿ ನಮ್ಮ ಜನರ ಬದುಕನ್ನ ಮೂರಾಬಟ್ಟೆ ಮಾಡಿ ಅಧಿಕಾರಕ್ಕಂಟಿಕೊಂಡ ನಮ್ಮ ಸಂಸದರನ್ನು ಆರಿಸಿ ಕಳುಹಿಸಿದ ನಮ್ಮ ಜನ ತಲೆತಗ್ಗಿಸುವ ಸ್ಥಿತಿ ಬಂದಿದೆ.
ದುಡಿಮೆಯ ಬಹುಪಾಲು ತರಿಗೆ ಪ್ರತಿ ಹೆಜ್ಜೆಗೆ..
ಈಗ ಆದಾಯ ಹೆಚ್ಚಿಸಿಕೊಳ್ಳಲು ಕೇಂದ್ರದ ಸಾರಿಗೆ ನಿಯಮ ಉಲ್ಲಂಘನೆ ದಂಡ ನೀತಿ, ದುಪ್ಪಟ್ಟು ದಂಡ ವಿಧಿಸಿ ರಸ್ತೆಯಲ್ಲಿ ಬಡ, ಮದ್ಯಮ, ವರ್ಗದವರಿಗೆ ನರಕ ದರ್ಶನ ಮಾಡಿಸುತ್ತಿರುವ ಸರ್ವಾಧಿಕಾರಿ ಕಾನೂನುಗಳು ಜಾರಿಗೆ ತಂದವರಿಗೆ ಪ್ರೀತಿ.
ಬಡವರಿಗೆ ಉತ್ತಮ ಜೀವನವಿಲ್ಲಾ ರೈತರಿಗೆ ಬೆಳೆದ ಬೆಳೆಗೆ ಬೆಲೆಯಿಲ್ಲಾ ವಿದ್ಯಾವಂತ ಯುವಕರಿಗೆ ಉದ್ಯೋಗವಿಲ್ಲಾ.. ದೇಶದ ಜಿಡಿಪಿ ದರ ಕುಸಿಯುತ್ತಿದೆ. ಬಡವರ ಬದುಕು ಕುಸಿಯುತ್ತಿದೆ. ಬಲಿಷ್ಠ ಭಾರತ ಸಮೃದ್ಧ ಭಾರತ.. ಓಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಭಾಷ ಸಾರ್ವಭೌಮತ್ವಕ್ಕೆ ಸಿಗಬೇಕಾದ ಮಾನ್ಯತೆ ಸಿಗದೆ ಹಿಂದಿ ಭಾಷೆಗಳಲ್ಲಿ ಬ್ಯಾಂಕಿಂಗ್ ಪರೀಕ್ಷೆ .. ಗುಜರಾತಿ ಮೇಯರ್ ಇಲ್ಲಿವರೆಗಿನ ಪರಿಸ್ಥಿತಿ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳಾಗಿ
ರಾಜಸ್ಥಾನದ ರಾಕೇಶ್ ಸಿಂಗ್
ಗುಜರಾತ್ನ ಗೌರವ್ ಜೈನ್
ಮದ್ಯಪ್ರದೇಶದ ಮಹೇಂದರ್ ಸೇಟ್ ಆದರೂ ಕನ್ನಡಿಗರೂ ಚಕಾರವೆತ್ತದ ಸ್ಥಿತಿ ನಮಗೊದಗಿದರು ಅಚ್ಚರಿಯಿಲ್ಲಾ..
ಈ ಲೇಖನ ಯಾವ ರಾಜ್ಯದವರಿಗು ನೋಯಿಸುವ ಉದ್ದೇಶದಿಂದ ಬರೆದದ್ದಲ್ಲಾ ನಮ್ಮ ಮೇಲಿನ, ವ್ಯವಸ್ಥೆ ಮೇಲಿನ ಹತಾಶೆ.. ಓಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದ ಸಾರ್ವಭೌಮತೆಗೆ ಧಕ್ಕೆಯುಂಟು ಮಾಡುವಂತ ನಿರ್ಧಾರದ ವಿರುದ್ದದ ನೋವಿನ ನುಡಿ..
ಕನ್ನಡಿಗರೆ ಏದ್ದೇಳಿ ರಾಜ್ಯದ ಸಾರ್ವಭೌಮತ್ವ ಏತ್ತಿ ಹಿಡಿಯಬೇಕಾದ ಸಮಯ ಉಪ ಚುನಾವಣೆಯಲ್ಲಿ ಪ್ರಾದೇಶಿಕ ನಾಯಕರ ಪ್ರಾದೇಶಿಕ ಪಕ್ಷದ ಅಭ್ಯರ್ಥಿಗಳನ್ನೆ ಗೆಲ್ಲಿಸಿ..
-ಬಾಲಾಜಿ ಕೃಷ್ಣಮೂರ್ತಿ..
ಕರುನಾಡಪರ ಚಿಂತಕರು.
City Today News
(citytoday.media)
9341997936
