
ಪ್ರತೀ ವರ್ಷದಂತೆ ದಸರಾ ಹಬ್ಬದ ಶುಭ ಸಂದರ್ಭದಲ್ಲಿ, ಮೈಸೂರು ಅರಮನೆಗೆ ಭೇಟಿ ಕೊಟ್ಟ ಸಂಸದೆ, ಮಾಜಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವೆ ಕು.ಶೋಭಾ ಕರಂದ್ಲಾಜೆ ಅವರು ಮಾವುತರಿಗೆ ಬೆಳಗಿನ ಉಪಹಾರ ವ್ಯವಸ್ಥೆ ಮಾಡಿದ್ದರು.

ಈ ಸಂದರ್ಭದಲ್ಲಿ ಮಾವುತರಿಗೆ ಮತ್ತು ಅವರ ಕುಟುಂಬದವರಿಗೆ ಬಟ್ಟೆ ಬರೆಗಳನ್ನು ಹಂಚಿ ಹಬ್ಬದ ಶುಭಾಶಯಗಳನ್ನು ಕೋರಿದರು.

ಮೈಸೂರು ದಸರಾ ಹಬ್ಬಕ್ಕೆ ಮೆರಗು ನೀಡುವ ಜಂಬೂ ಸವಾರಿಯಲ್ಲಿ ತಾಯಿ ಚಾಮುಂಡೇಶ್ವರಿಯನ್ನು ಚಿನ್ನದ ಅಂಬಾರಿಯಲ್ಲಿ ಹೊತ್ತು ನಗರ ಪ್ರದಕ್ಷಿಣೆ ನಡೆಸುವ ಗಜ ಪಡೆಗಳಿಗೆ ಪೂಜೆಯನ್ನು ಸಲ್ಲಿಸಿದ ಶೋಭಾ ಕರಂದ್ಲಾಜೆ, ಜಂಬೂ ಸವಾರಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
City Today News
(citytoday.media)
9341997936
