ನಾವುಗಳು ಪೊಲೀಸಿನವರ ಕಿರುಕುಳಕ್ಕೆ ಹೆದರಿ ನಮ್ಮ ಮಗನನ್ನು ಅವಮಾನ , ಹೆದರಿಕೆಗಳು ಮತ್ತು ಕಿರುಕುಳವನ್ನು ಸಹಿಸಲು ಹೇಳಿ ಮನೆ ಬಿಟ್ಟೆವು . ಈಗ ನಮಗೆ ನ್ಯಾಯ ಬೇಕು .

ಜುಲೈ 5ನೇ ತಾರೀಕು 2019 ರಂದು ನನ್ನ ಸೊಸೆ ಅವಾಚ್ಯವಾಗಿ ಮಾತನಾಡಿದ ಕಾರಣ ( ರೆಕಾರ್ಡಿಂಗ್ ಸಹ ಮಾಡಲಾಗಿದೆ ) , ಒಂದು ಫಿರ್ಯಾದು ದಾಖಲು ಮಾಡಿದೆ . ಅದರ ನಂಬರ್ wc 4827 . ನನ್ನ ಮಗನ ವಿವಾಹ ಏಪ್ರಿಲ್ 18 , 2019 ರಂದು ನಡೆಯಿತು . 2 . ಜುಲೈ 6ನೇ ತಾರೀಕು ನಮ್ಮನ್ನು JC ನಗರ ಪೊಲೀಸ್ ಠಾಣೆಗೆ ಬರ ಹೇಳಿದರು . ಅಲ್ಲಿ ಸರ್ಕಲ್ ಇನ್ಸೆಕ್ಟರ್ ಮಂಚಯ್ಯ ಜೋರಾದ ಧ್ವನಿಯಿಂದ ಕಿರುಚಾಡುತ ನನ್ನ ಮಗನೇ ಅವರ ಹೆಂಡತಿಯ ಕೈಯನ್ನು ಕತ್ತರಿಸಿದ ಎಂದು . ಮೆಡಿಕಲ್ ರೆಪೋರ್ಟ್ಸ್ ಕೇಳಿದಾಗ , ನಮ್ಮ ಮೇಲೆಯೇ ಅರಚಿದರು , ಅದೇ ಸಮಯಕ್ಕೆ ಅಲ್ಲಿ ಫಿರೋಜ್ ಅಹ್ಮದ್ ( CBI ಕಾರ್ಯಕರ್ತ ಎಂದು ಹೇಳಿಕೊಳ್ಳುತ ) ನನ್ನ ಮಗನನು ಒಂದು ಕೋಣೆಗೆ ಕರೆದುಕೊಂಡು ಹೋಗಿ , ಒಂದು ಪಕ್ಷ 25 ಲಕ್ಷ ರೂಪಾಯಿಗಳನ್ನು ಹುಡುಗಿಯ ಕುಟುಂಬದವರಿಗೆ ವಸಾಹತು ರೂಪದಲ್ಲಿ ಕೊಡದಿದ್ದರೆ , ನಮ್ಮೆಲ್ಲರನ್ನು ಹಲವಾರು ಮೊಕದ್ದಮೆಗಳಲ್ಲಿ ಜೈಲು ಪಾಲು ಮಾಡಲು ಸಾಧ್ಯ ಎಂದು ಹೆದರಿಸಿದರು . ( ಇದು ವರದಕ್ಷಿಣೆಗೆ ಸಂಬಂಧಿಸಿದ ಮೊಟ್ಟ ಮೊದಲನೇ CBI ಕೇಸ್ ) , ನನ್ನ ಮಗ ಇವರ ಮಾತುಗಳಿಂದ ಹೆದರಿ , ಖಿನ್ನತೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾದ . 3 . ಜುಲೈ 20ನೇ ತಾರೀಕು ನಾವು ವನಿತಾ ವಾಣಿ ಸಹಾಯ ಪಡೆದೆವು , ಅಲ್ಲಿ ಇಕ್ಕಾಲ್ ಅಹ್ಮದ್ ಎನ್ನುವವರು ಫಿರ್ಯಾದು ದಾಖಲು ಮಾಡಿಕೊಳ್ಳಲು ನಿರಾಕರಿಸಿ ನನ್ನ ಹೆಂಡತಿಯ ಮೇಲೆಯೇ ಅರಚಾಡಿದರು . 25ನೇ ತಾರೀಕು . ನಮ್ಮನ್ನು ಸಮಾಲೋಚನೆಗಾಗಿ ಕರೆದರು , ಅಲ್ಲಿಯೂ ಕೂಡ ಸಮಾಲೋಚನೆಯ ವಿಷಯ ಪ್ರಾಮುಖ್ಯ ತೋರಿತು . 2ನೇ ಸಮಾಲೋಚನೆ ಆಗಸ್ಟ್ 5ನೇ ತಾರೀಕಿನಂದು ಇತ್ತು . ಅವರು ನನ್ನ ಮಗ ಸಹಕರಿಸಲಿಲ್ಲ ಎಂದು ಮತ್ತು ಸಮಾಲೋಚನೆಗೆ ಬರಲಿಲ್ಲವೆಂದು ಸುಳ್ಳು ವರದಿಯನ್ನು ಕಳಿಸಿದ್ದರು . ಇದರ ಆಧಾರದ ಮೇಲೆ ಸರ್ಕಲ್ ಇನ್ಸೆಕ್ಟರ್ ಹುಡುಗಿಯ FIRನ್ನು 13ನೇ ಅಥವಾ 15ನೇ ತಾರೀಕಿನಂದು ದಾಖಲಿಸಿದರು . ಆಗಸ್ಟ್ 17ರಿಂದ ನಮಗೆ ದುಸ್ವಪ್ನ ಶುರುವಾಯಿತು , ನಾವುಗಳು ಪೊಲೀಸಿನವರ ಕಿರುಕುಳಕ್ಕೆ ಹೆದರಿ ನಮ್ಮ ಮಗನನ್ನು ಅವಮಾನ , ಹೆದರಿಕೆಗಳು ಮತ್ತು ಕಿರುಕುಳವನ್ನು ಸಹಿಸಲು ಹೇಳಿ ಮನೆ ಬಿಟ್ಟೆವು . ಈಗ ನಮಗೆ ನ್ಯಾಯ ಬೇಕು .

– ಅಬ್ದುಲ್ ವಾಜಿದ್ ಜೀಲಾನಿ

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.