ಜಪಾನ್ ಫೌಂಡೇಷನ್ , ಪಿವಿಆರ್ ಸಿನಿಮಾಸ್ ಸಹಯೋಗದಲ್ಲಿ ಬೆಂಗಳೂರಿನಲ್ಲಿ ಜಪಾನೀ ಚಲನಚಿತ್ರೋತ್ಸವ ‘ 19 ಆಯೋಜನೆ

10 – ದಿನಗಳ ಈ ಉತ್ಸವವು ಅನಿಮಿ – ಫ್ಯಾಂಟಸಿ ಚಿತ್ರ – “ ಯುವರ್ ನೇಮ್ ” ಪ್ರದರ್ಶನದೊಂದಿಗೆ ಪ್ರಾರಂಭ

ಬೆಂಗಳೂರು , ಡಿಸೆಂಬರ್ 6 , 2019 : ನವದೆಹಲಿಯಲ್ಲಿರುವ ಜಪಾನ್ ಫೌಂಡೇಷನ್ ಜಪಾನೀ ಚಿತ್ರೋತ್ಸವ 2019ರ ಪ್ರಾರಂಭವನ್ನು ಪ್ರಕಟಿಸಿದ್ದು ಬೆಂಗಳೂರಿನ ಕೋರಮಂಗಲದ ಫಿರಂ ಮಾಲ್‌ನಲ್ಲಿರುವ ಪಿವಿಆರ್‌ನಲ್ಲಿ ನಡೆಯಲಿದೆ . ಈ ಬಹು – ನಗರಗಳ ಚಿತ್ರೋತ್ಸವವನ್ನು ಪಿವಿಆರ್ ಸಿನಿಮಾಸ್ ಸಹಯೋಗದಲ್ಲಿ ಆಯೋಜಿಸಲಾಗಿದ್ದು ಇನಿಯೊಸ್ ಬೆಂಬಲಿಸಿದೆ . ಜಪಾನ್‌ನ ವೈವಿಧ್ಯಮಯ ಸಂಸ್ಕೃತಿಯನ್ನು ಭಾರತದಾದ್ಯಂತ ಸಂಭ್ರಮಿಸುತ್ತಿರುವ ಫೌಂಡೇಷನ್ ಬೆಂಗಳೂರಿನಲ್ಲಿ ಮೊಟ್ಟಮೊದಲ ಬಾಲಗೆ ಪರಿಚಯಿಸಲಾಗುತ್ತಿರುವ ಈ ಉತ್ಸವಕ್ಕೆ ಅಂತಾರಾಷ್ಟ್ರೀಯವಾಗಿ ಶ್ಲಾಘನೆ ಪಡೆದ ಚಲನಚಿತ್ರಗಳ ಪಟ್ಟಿ ತಯಾರಿಸಿದೆ . 10 – ದಿನಗಳ ಈ ಚಿತ್ರೋತ್ಸವ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಇಪ್ಪತ್ತೈದು ಜಾಗತಿಕವಾಗಿ ಜನಪ್ರಿಯ ಜಪಾನೀ ಚಿತ್ರಗಳನ್ನು ಹೊಂದಿದ್ದು ವಿವಿಧ ಪ್ರಕಾರಗಳು ಮತ್ತು ಶೈಲಿಗಳಲ್ಲಿರುತ್ತವೆ . ಬೆಂಗಳೂರಿನಲ್ಲಿನ ಜಪಾನೀ ಚಿತ್ರೋತ್ಸವ ಗಮನಾರ್ಹವಾದ ಫ್ಯಾಂಟಸಿ ಬ್ಲಾಕ್‌ಬಸ್ಟರ್ ” ಯುವರ್ ನೇಮ್ ” ಮೂಲಕ ಚಾಲನೆಗೊಂಡಿತು .

ಶುಕ್ರವಾರ ಪ್ರಾರಂಭೋತ್ಸವದಲ್ಲಿ ಜಪಾನ್ ಫೌಂಡೇಷನ್‌ನ ಡೈರೆಕ್ಟರ್ – ಜನರಲ್ ಶ್ರೀ ಕಿರು ಮಿಯಾಮೊಟೊ , ಪ್ರೇಕ್ಷಕರನ್ನು ಕುರಿತು ಭಾರತದಲ್ಲಿ ಜಪಾನೀ ಚಿತ್ರೋತ್ಸವ ಆಯೋಜಿಸುವ ಉದ್ದೇಶ ಕುರಿತು ವಿವರಿಸಿದರು . ತನ್ನ ಮೂರನೇ ಆವೃತ್ತಿಯಲ್ಲಿ ಫೌಂಡೇಷನ್ ಎರಡೂ ರಾಷ್ಟ್ರಗಳ ನಡುವೆ ಬಾಂಧವ್ಯವನ್ನು ಸದೃಢಗೊಳಿಸುವ ಮತ್ತು ಜಪಾನಿನ ಕಲೆ ಮತ್ತು ಸಂಸ್ಕೃತಿಯನ್ನು ಭಾರತೀಯ ಪ್ರೇಕ್ಷಕರಿಗೆ ಅರ್ಥ ಮಾಡಿಸುವ ಗುರಿ ಹೊಂದಿದೆ . ಅತ್ಯಂತ ಪ್ರಶಂಸೆ ಪಡೆದ ಮತ್ತು ಜಾಗತಿಕವಾಗಿ ಜನಪ್ರಿಯವಾದ ಜಪಾನೀ ಚಿತ್ರಗಳ ಪಟ್ಟಿಯ ಮೂಲಕ ಭಾರತದ ಚಿತ್ರ ಪ್ರೇಕ್ಷಕರು ತಮ್ಮದೇ ನಗರದಲ್ಲಿ ಜಪಾನಿನ ಶ್ರೇಷ್ಠ ಸಿನಿಮಾಗಳನ್ನು ತಮ್ಮದೇ ನಗರದಲ್ಲಿ ಆನಂದಿಸಬಹುದು .

ಈ ಉತ್ಸವದ ಪ್ರಾರಂಭ ಕುರಿತು ನವದೆಹಲಿಯ ಜಪಾನ್ ಫೌಂಡೇಷನ್‌ನ ಡೈರೆಕ್ಟರ್ – ಜನರಲ್ ಶ್ರೀ ಕಿರು ಮಿಯಾಮೊಟೊ , ” ನಾವು ಬೆಂಗಳೂರಿನಲ್ಲಿ ಈ ಉತ್ಸವ ಪ್ರಾರಂಭಿಸಲು ಬಹಳ ಸಂತೋಷಗೊಂಡಿದ್ದೇವೆ . ಈ ನಗರವು ಸಂಪೂರ್ಣ ಜೀವ ಹಾಗೂ ಶಕ್ತಿ ಹೊಂದಿದ್ದು ಇಲ್ಲಿನ ಜನರು ನಾವು ಆಯ್ಕೆ ಮಾಡಿದ ಜಪಾನೀ ಚಿತ್ರಗಳನ್ನು ಇಷ್ಟಪಡುತ್ತಾರೆ ಎಂಬ ವಿಶ್ವಾಸ ಹೊಂದಿದ್ದೇವೆ . ಈ ನಗರ ಕಾಸ್ಮೋ ಪಾಲಿಟನ್ ಪ್ರೇಕ್ಷಕರಿಗೆ ಹೆಸರಾಗಿದ್ದು ಇದು ವಿಸ್ತಾರ ನಗರಗಳು ಮತ್ತು ಹಿನ್ನೆಲೆಗಳ ಜನರನ್ನು ಈ ಚಿತ್ರಗಳ ಮೂಲಕ ಸಂಪರ್ಕಿಸಲು ನೆರವಾಗುತ್ತದೆ . ಜೆಎಫ್‌ಎಫ್ ಇಂಡಿಯಾ 2019ರ ಉದ್ದೇಶ ಜಪಾನಿನ ಸಂಸ್ಕೃತಿಯನ್ನು ಹಾಗೂ ಜಪಾನಿನ ಚಿತ್ರೋದ್ಯಮವನ್ನು ಭಾರತದ ಪ್ರೇಕ್ಷಕರಿಗೆ ಪರಿಚಯಿಸುವುದು . ಕಾಸ್ಮೋಪಾಲಿಟನ್ ಪ್ರೇಕ್ಷಕರಿಗೆ ಹೆಸರಾಗಿದ್ದು ಇದು ವಿಸ್ತಾರ ಭಾರತದ ಉತ್ತರ , ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿ ಪಡೆದ ಪ್ರತಿಕ್ರಿಯೆಯಿಂದ ನಾವು ಬಹಳ ಸಂತೋಷ ಹೊಂದಿದ್ದೇವೆ ” ಎಂದರು .

ಅವರು , “ ನಾವು ನಮ್ಮ ಪಾಲುದಾರರಾದ ಪಿವಿಆರ್ ಸಿನಿಮಾಸ್ ಮತ್ತು ಇನಿಯೊಸ್‌ಗೆ ಪ್ರತಿ ನಗರದಲ್ಲೂ ಈ ಉತ್ಸವವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಬೆಂಬಲಿಸಿರುವುದಕ್ಕೆ ಕೃತಜ್ಞರಾಗಿದ್ದೇವೆ ಮತ್ತು ಪ್ರತಿ ನಗರದಲ್ಲೂ ವೇಗದ ವಿಸ್ತರಣೆ ಕಾಪಾಡಿಕೊಳ್ಳುವ ಭರವಸೆ ಹೊಂದಿದ್ದೇವೆ ” ಎಂದರು . ಜಪಾನ್‌ನ ಕಾಯ್ದುಲ್ ಜನರಲ್ ಶ್ರೀ ಕಿತಾಗವಾ , “ ಜಪಾನ್ ಫೌಂಡೇಷನ್ ಈ ಉತ್ಸವವನ್ನು ಹಿಂದೆ ದೆಹಲಿ ಮತ್ತು ಮುಂಬೈಗಳಲ್ಲಿ ನಡೆಸಿದೆ , ಈ ಬಾರಿ ಬೆಂಗಳೂರನ್ನು ಸೇರಿಸಲು ನಿರ್ಧರಿಸಲಾಯಿತು . ಈ ನಿರ್ಧಾರಕ್ಕೆ ಕಾರಣ ಬೆಂಗಳೂರಿನಲ್ಲಿ ಜಪಾನೀ ಸಂಸ್ಕೃತಿಯ ವಿಸ್ತರಣೆ ಇಲ್ಲಿ ಆಗುತ್ತಿರುವುದು . ಈ ಫೆಬ್ರವರಿಯಲ್ಲಿ ಜಪಾನ್ ಹಬ್ಬಕ್ಕೆ 6000 ಮಂದಿ ಸೇರಿದ್ದರು ಮತ್ತು ನವೆಂಬರ್‌ನಲ್ಲಿ ಜಪಾನ್ ಫುಡ್ ಫೆಸ್ಟಿವಲ್‌ಗೆ 3000 ಮಂದಿ ಸೇರಿದ್ದರು . ಬೆಂಗಳೂರಿಗರು ಜಪಾನೀ ಸಂಸ್ಕೃತಿಯಲ್ಲಿ ಅಪಾರ ಆಸಕ್ತಿ ತೋರುತ್ತಿರುವಾಗ ಜಪಾನೀ ಚಿತ್ರಗಳ ಮೇಲೆ ಏಕೆ ಆಸಕ್ತಿ ತೋರುವುದಿಲ್ಲ ಎಂಬ ನಂಚಿಕೆ ” ಎಂದರು . ಆರು ತಿಂಗಳ ಅವಧಿಯ ಈ ಉತ್ಸವ ವಿಸ್ತಾರವಾದ ಹಾಗೂ ಜನಪ್ರಿಯ ಜಪಾನೀ ಚಿತ್ರಗಳಾದ ಡ್ಯಾನ್ಸ್ ವಿಥ್ ಮಿ , ಶಾಪ್‌ಅಷ್ಟರ್ , ವೆದಲಿಂಗ್ ವಿಥ್ ಯೂ , ಪರ್ಫೆಕ್ಸ್ ವರ್ಲ್ಡ್ , ಚಿಲ್ಲನ್ ಆಫ್ ದಿ ಸೀ , ಕಿಂಗ್‌ಡಂ , ಮೈ ಡ್ಯಾಡ್ ಈಸ್ ಎ ಹೀಲ್ ರೆಸ್ಲರ್ ! , ಟೋಕ್ಕೋ ಫೌಲ್ , ದಿ ಫೇಬಲ್ ಇತ್ಯಾದಿ . ಈ ಚಲನಚಿತ್ರಗಳನ್ನು ಗ್ರಾಹಕರ ಅನುಕೂಲಕ್ಕೆ ಜಪಾನೀ ಭಾಷೆಯಲ್ಲಿ ಇಂಗ್ಲಿಷ್ ಉಪಶೀರ್ಷಿಕೆಗಳೊಂದಿಗೆ ಪಿವಿಆರ್ ಸಿನಿಮಾಗಳಲ್ಲಿ ಮಾತ್ರ ಪ್ರದರ್ಶಿಸಲಾಗುತ್ತದೆ .

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.