ಕರ್ನಾಟಕ ಗಾರ್ಮೆಂಟ್ಸ್ ಮತ್ತು ಫ್ಯಾಕ್ಟರಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ” CLOTH MAFIA ” ವಿರುದ್ದ ಹೋರಾಟ

ಕಾನೂನು ಬಾಹಿರವಾಗಿ ಟೆಕ್ಸ್ಟೈಲ್ ಉದ್ದಿಮೆ ನಡೆಸುತ್ತಿರುವ ಚಿಕ್ಕಪೇಟೆ ಮತ್ತು ಇತರೆ ನಗರದಲ್ಲಿನ ಸುಮಾರು 1500 ರಿಂದ 2000 ಸಾವಿರ ಸೇಟು ಅಥವಾ ಮಾರ್ವಾಡಿಗಳನ್ನು ಕರ್ನಾಟಕದಿಂದ ಗಡಿಪಾರು ಮಾಡುವಂತೆ ಆಗ್ರಹಿಸಿ ರಾಜ್ಯಸರ್ಕಾರದ ವಿರುದ್ದ ಹೋರಾಟ

ನಮ್ಮ ಗಾರ್ಮೆಂಟ್ಸ್ ಸಂಘಟನೆಯ ಯವುದೇ ಸಮುದಾಯದ ಅಥವಾ ಜನಾಂಗದ ಮೇಲೆ ಆರೋಪ ಮಾಡುತ್ತಿಲ್ಲ ಯಾವುದೇ ಕಾರಣಕ್ಕೂ ಜಾತಿನಿಂದನೆ , ಕೋಮುಗಲಭೆ ಸೃಷ್ಟಿಸುತ್ತಿಲ್ಲ , ಕಾನೂನುಬದ್ಧವಾಗಿ ಪರವಾನಗಿ ಪಡೆದ , ಜಿ . ಎಸ್ . ಟಿ ಮತ್ತು ಐಟಿ ತೆರಿಗೆ ಪಾವತಿ ಮಾಡುತ್ತಿರುವ ಸೇಟು ಅಥವಾ ಮಾರ್ವಾಡಿಗಳಿಗೆ ಈ ಹೋರಾಟ ಅನ್ವಯಿಸುವುದಿಲ್ಲ , ಮಾರುಕಟ್ಟೆಯಲ್ಲಿ ಕ್ಲಾತ್ ಮಾಫಿಯಾ ನಡೆಸುತ್ತಿರುವ ಕೆಲವು ವ್ಯಕ್ತಿಗಳ ಮೇಲೆ ನಮ್ಮ ಹೋರಾಟ , ಅದು ರಾಜ್ಯ ಸರ್ಕಾರದ ವಿರುದ್ದ .

ಸಾರ್ವಜನಿಕರಿಗೆ ವಿಶೇಷ ಮನವಿ ಕರ್ನಾಟಕದ ಯಾವುದೇ ಬಟ್ಟೆ ಅಂಗಡಿಗಳಲ್ಲಿ ಬಟ್ಟೆಗಳ ಮೇಲೆ ಕಂಪನಿಯ ಲೇಬಲ್ ಇಲ್ಲದಿದ್ದರೆ ಮತ್ತು ಖರೀದಿಸಿದ ಬಟ್ಟೆಗೆ ಜಿ . ಎಸ್ . ಟಿ ಬಿಲ್ ನೀಡದಿದ್ದರೆ ದಯಮಾಡಿ ಖರೀದಿಸಬೇಡಿ , ಕರ್ನಾಟಕದ ಗಾರ್ಮೆಂಟ್ಗಳು ಉಳಿಯಬೇಕು ಮತ್ತು ಕರ್ನಾಟಕದ ಸ್ಥಳೀಯ ಜನಗಳಿಗೆ ಕೆಲಸ ಸಿಗಬೇಕು ಎಂಬುದೇ ನಮ್ಮ ಹೋರಾಟದ ಮೂಲ ಉದ್ದೇಶ , ಕಾನೂನುಬಾಹಿರವಾಗಿ ಟೆಕ್ಸ್ಟೈಲ್ ನಡೆಸುತ್ತಿರುವ ಯಾವುದೇ ಬಟ್ಟೆ ಅಂಗಡಿಗಳಲ್ಲಿ ಬಟ್ಟೆ ಖರೀದಿಸಬೇಡಿ , ಸ್ಥಳೀಯ ಗಾರ್ಮೆಂಟ್ಸ್ಗಳು ಉತ್ಪಾದಿಸಿದ ಕಂಪನಿಯ ಬಟ್ಟೆಗಳಿಗೆ ಮೊದಲ ಪ್ರಾಮುಖ್ಯತೆ ನೀಡಿ.

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.