
27 ಡಿಸೆಂಬರ್, 2019, ಬೆಂಗಳೂರು: ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಈಶಾ ಫೌಂಡೇಶನ್ ಸಂಸ್ಥಾಪಕರಾದ ಸದ್ಗುರುಗಳೊಂದಿಗೆ ಕಾವೇರಿ ಕೂಗು ಯೋಜನೆಯ ಅನುಷ್ಠಾನವನ್ನು ವಿವರವಾಗಿ ಪರಿಶೀಲಿಸಿದರು ಮತ್ತು ಚರ್ಚಿಸಿದರು. ಅವರ ಜೊತೆ ಹಿರಿಯ ಸರ್ಕಾರಿ ಅಧಿಕಾರಿಗಳೂ ಉಪಸ್ಥಿತರಿದ್ದರು.
10 ಜಿಲ್ಲೆಗಳ 35,000 ಚದರ ಕಿಲೋಮೀಟರ್ ಮತ್ತು ರಾಜ್ಯದ ಕಾವೇರಿ ಜಲಾನಯನ ಪ್ರದೇಶದ 54 ಗ್ರಾಮೀಣ ತಾಲ್ಲೂಕುಗಳಲ್ಲಿ, ಅರಣ್ಯ ಕೃಷಿ ಉಪಕ್ರಮಗಳ ಮೂಲಕ ಕಾವೇರಿ ನದಿ ಪುನರುಜ್ಜೀವನಗೊಳಿಸುವ ಯೋಜನೆಯನ್ನು ಧೃಡೀಕರಿಸುವ ಅಂತಿಮ ಹಂತದಲ್ಲಿ ರಾಜ್ಯದ ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ಕಾವೇರಿ ಕೂಗು ತಂಡಗಳು ತೊಡಗಿವೆ. ಇದು 24 ಲಕ್ಷಕ್ಕೂ ಹೆಚ್ಚು ರೈತರ ಜೀವನದ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ.
ರಾಜ್ಯದಲ್ಲಿ ಅರಣ್ಯ ಕೃಷಿ ಪ್ರಯೋಜನಗಳ ಅರಿವಿನ ಜೊತೆಗೆ, ಕರ್ನಾಟಕ ಸರ್ಕಾರ ಮತ್ತು ಕಾವೇರಿ ಕೂಗು ತಂಡಗಳ ನಡುವೆ ವಿವರವಾದ ಸಸಿ ಉತ್ಪಾದನೆ ಮತ್ತು ವಿತರಣಾ ಕಾರ್ಯಕ್ರಮವನ್ನು ರೂಪಿಸಲಾಗಿದೆ.
ಮುಖ್ಯಮಂತ್ರಿಗಳು ಮತ್ತು ಸದ್ಗುರುಗಳು ರಾಜ್ಯದಲ್ಲಿ, ವಿಶೇಷವಾಗಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಅರಣ್ಯ ಕೃಷಿ ಪದ್ಧತಿಯನ್ನು ಕೃಷಿ ಅಭ್ಯಾಸದ ಅವಿಭಾಜ್ಯ ಅಂಗವನ್ನಾಗಿ ಮಾಡುವ ಮಾರ್ಗಗಳ ಬಗ್ಗೆ ಚರ್ಚಿಸಿದರು.
City Today News
(citytoday.media)
9341997936
