ಕನ್ನಡ ಚಳುವಳಿ ನಾಗೇಶ್ ಸಾರಥ್ಯದ ಕರ್ನಾಟಕ ಸಂಘಟನೆಗಳ ಒಕ್ಕೂಟದ ವತಿಯಿಂದ ಕೃಷ್ಣನಲ್ಲಿ ಐಕ್ಯರಾದ “ಶ್ರೀ ಶ್ರೀ ಶ್ರೀ ಪೇಜಾವರ ಸ್ವಾಮಿಗಳ” ಆತ್ಮಕ್ಕೆ ಶಾಂತಿಕೋರಿ ಭಕ್ತಿ ಗೌರವಪೂರ್ವಕವಾಗಿ “ಶ್ರದ್ಧಾಂಜಲಿ” ಸಲ್ಲಿಸಲಾಯಿತು.

ಬೆಂಗಳೂರು. ಡಿಸೆಂಬರ್, (29): ಕನ್ನಡ ಚಳುವಳಿ ನಾಗೇಶ್ ಸಾರಥ್ಯದ ಕರ್ನಾಟಕ ಸಂಘಟನೆಗಳ ಒಕ್ಕೂಟದ ವತಿಯಿಂದ ಕೃಷ್ಣನಲ್ಲಿ ಐಕ್ಯರಾದ
“ಶ್ರೀ ಶ್ರೀ ಶ್ರೀ ಪೇಜಾವರ ಸ್ವಾಮಿಗಳ” ಆತ್ಮಕ್ಕೆ ಶಾಂತಿಕೋರಿ ಕನ್ನಡಿಗರ ಉದ್ಯೋಗಕ್ಕಾಗಿ 56 ದಿನಗಳಿಂದ ಧರಣಿ ನಡೆಸುತ್ತಿರುವ ವೇದಿಕೆಯಲ್ಲಿ ಭಕ್ತಿ ಗೌರವಪೂರ್ವಕವಾಗಿ “ಶ್ರದ್ಧಾಂಜಲಿ” ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಒಕ್ಕೂಟದ ರಾಜ್ಯಾಧ್ಯಕ್ಷರಾದ ಕನ್ನಡ ಚಳುವಳಿ ನಾಗೇಶ್, ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳಾದ ನಟರಾಜ್ ಬೊಮ್ಮಸಂದ್ರ. ಸಂಘಟನಾ ಕಾರ್ಯದರ್ಶಿಗಳಾದ ಗಿರಿಜಮ್ಮ, ಕರ್ನಾಟಕ ರಕ್ಷಣಾ ವೇದಿಕೆ ಜನ ಸೇನೆಯ ರಾಜ್ಯ ಅಧ್ಯಕ್ಷರಾದ ಶ್ರೀಯುತ ಗೋಪಾಲ್ ಗೌಡ, ಕರಾವಳಿ ಕನ್ನಡಿಗ
ಡಾ ರವಿ ಶೆಟ್ಟಿ ಬೈಂದೂರು, ಬಿಟಿ ಲಲಿತಾ ನಾಯಕ್. ಹಿರಿಯ ಹೋರಾಟಗಾರರು ಜಯಶ್ರೀ ರವರು ಮತ್ತು ವಿನುತಾ ಮೂಲ, ಶಶಿಕಲಾ ಅವರು ಹಾಗೂ ಪ್ರದೀಪ್ ನಾಯಕ್, ಚೇತನ್, ಬೊಮ್ಮಸಂದ್ರ ನಾಗರಾಜ್, ಕುಮಾರ್, ರಾಜು ಹಾಗೂ ಮತ್ತಿತರರು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ವಾಮೀಜಿಗಳು ವೇದಿಕೆಯನ್ನು ಹಂಚಿಕೊಂಡು ನಮಗೆ ಬೆಂಬಲ
ನೀಡಿದ್ದನ್ನು ಸ್ಮರಿಸಿದರು.

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.