
MGK ಸೋಲಾರ್ ಕೀಟನಾಶಕ ಯಂತ್ರವನ್ನು ರೈತರಿಗೆ ಸಹಾಯಧನದ ಮೂಲಕ ಕೂಡುವ ಬಗ್ಗೆ . M G ಕರಿಬಸಪ್ಪ , ಮಲೆಬೆನ್ನೂರ್ ದಾವಣಗೆರೆ ಜಿಲ್ಲೆಯವರಾದ ಇವರು ಕಳೆದ 2 ವರುಷಗಳ ಹಿಂದೆ ಸೋಲಾರ್ ಕೀಟನಾಶಕ ಯಂತ್ರವನ್ನು ಸಂಶೋಧನೆ ಮಾಡಿದ್ದಾರೆ . ಈಗ ಇದನ್ನು ಸಣ್ಣ ಉತ್ಪಾದನ ಮೂಲಕ ರೈತರಿಗೆ ಸುಮಾರು 6000 ಸೋಲಾರ್ ಕೀಟನಾಶಕ ಯಂತ್ರಗಳನ್ನು ಹಂಚಿದ್ದಾರೆ . ಇದರ ಮುಖ್ಯ ಉದ್ದೇಶ ತರಕಾರಿ ಮತ್ತು ಹಣ್ಣಿನ ಬೆಳೆಗಳಲ್ಲಿ ಕೀಟನಾಶಕ ( CHEMICALS ) ಗಳ ಬಳಕೆ ಇಲ್ಲದೆ ಬೆಳೆಯಲು ಸಾಧ್ಯವಾಗಿದೆ .

ಇದರಿಂದ ರೈತರಿಗೆ ಹಣ ಉಳಿತಾಯವಾಗಿದೆ . ಜೊತೆಗೆ ಹಣ್ಣು ತರಕಾರಿ ಬೆಳೆಗಳು ವಿಷಮುಕ್ತವಾಗಿ ಗ್ರಾಹಕರಿಗೆ ಸಿಗಲಿವೆ . ಇದರ ಪರಿಣಾಮ ಜನರಿಗೆ ಆರೋಗವು ದೊರೆಯಲಿವೆ . ಈಗಾಗಲೆ ೧೨ ಜಿಲ್ಲೆಗಳಲ್ಲಿ ಕೃಷಿ ಇಲಾಖೆ ಆತ್ಮ ಯೋಜನೆಯಲ್ಲಿ ಕೆಲವು ರೈತರಿಗೆ ಉಚಿತವಾಗಿ ನೀಡಿದ್ದಾರೆ . ಇವುಗಳ ಬಳಕೆಯಿಂದ ರೈತರಿಗೆ ಉತ್ತಮ ಫಲಿತಾಶ ಬಂದಿದೆ . ಈ ಪ್ರಯತ್ನಕ್ಕೆ ಕರ್ನಾಟಕ ಸರಕಾರ ಈ ಬಾರಿ ಹಸಿರು ಬಜೆಟ್ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ . ಆದುದರಿಂದ ಪ್ರತೀ ತಾಲೂಕಿನ ಹಣ್ಣು ಮತ್ತು ತರಕಾರಿ ಹೂ ಬೆಳೆಯುವ ರೈತರಿಗೆ ಇವುಗಳನ್ನು ಉಚಿತವಾಗಿ ಕೊಡಲು ರಾಜ್ಯ ಸರಕಾರವನ್ನು ವಿನಂತಿಸುತ್ತವೆ .
– ಅರುಣ್ ಕುಮಾರ್ ಕುರುಡಿ
ರಾಜ್ಯ ಉಪಾಧ್ಯಕ್ಷರು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನ
M.G. ಕರಿಬಸಪ್ಪ
ಸಂಶೋಧಕರು MGK ಸೋಲಾರ್ ಕೀಟನಾಶಕ ಯಂತ್ರ
City Today News
(citytoday.media)
9341997936
