
2009 ರಿಂದ ಖಾಸಗಿ ಕಂಪನಿಯೊಂದು ತನ್ನ ವ್ಯವಹಾರವನ್ನು ಅಲಹಾಬಾದ್ ಬ್ಯಾಂಕ್ ಎಚ್. ಎಸ್. ಆರ್. ಬಡಾವಣೆಯಲ್ಲಿ ನಡೆಸುತ್ತಿದ್ದು ಇತ್ತೀಚೆಗೆ ವ್ಯಾಪಾರದಲ್ಲಿ ಅನಿರೀಕ್ಷಿತ ಘಟನೆಯಿಂದ ತುಂಬಲಾರದ ನಷ್ಟವನ್ನು ಅನುಭವಿಸಿ ಎನ್. ಪಿ. ಎ ಪಟ್ಟ ಧರಿಸಿ ಅದರಿಂದ ಹೊರ ಬರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವದಕ್ಕೆ ಬ್ಯಾಂಕು ಸಹಕರಿಸದೆ ಕಾನೂನು ಬಾಹಿರವಾಗಿ ಇದೇ ಕಂಪನಿಯ ವ್ಯವಸ್ಥಾಪಕರ ಗೋಲ್ಡ್ ಲೋನಿಗೆ ಕಂಪನಿ ಖಾತೆಯಿಂದ ಹಣ ವರ್ಗಾಯಿಸಿ ತನ್ನಅಟ್ಟಹಾಸವನ್ನು ಮೆರೆದಿದೆ. ವಿಚಾರಿಸಲು ಹೋದ ಕಂಪನಿ ಮುಖ್ಯಸ್ಥ ರೊಂದಿಗೆ ಅಸಭ್ಯವಾಗಿ ವರ್ತಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಬ್ಯಾಂಕಿನ ಡಿ. ಜಿ. ಎಮ್. ಆರ್ಮುಗಮ್ ಹಾಗೂ ಬ್ರಾಂಚ್ ವ್ಯವಸ್ಥಾಪಕ ಕುಮಾರ್ ತಮ್ಮ ಕೀಳರಿಮೆಯನ್ನು ಮೆರೆದಿದ್ದಾರೆ. ಆದಾಯ ತೆರಿಗೆ ಖಾತೆಯಿಂದ ಟಿ. ಡಿ. ಎಸ್ ಹಣ ಸಂದಾಯವಾದ ಕ್ಷಣಾರ್ಧದಲ್ಲಿ ಹಣವನ್ನು ಗೋಲ್ಡ್ ಲೋನಿಗೆ ವರ್ಗಾಯಿಸಿದ್ದಾರೆ. ಖಾತೆದಾರರಿಗೆ ಯಾವುದೇ ವಿಷಯವನ್ನು ತಿಳಿಸಿಲ್ಲ. ವಿಚಾರಿಸಲು ಹೋದಾಗ ಹೀಗೆ ಮಾಡಲು ನಮಗೆ ಡಿ. ಜಿ. ಎಮ್ ನಿರ್ದೇಶಿಸಿದ್ದಾರೆ, ಈಗ ಎನೂ ಮಾಡಲು ಆಗುವುದಿಲ್ಲ, ನೀವು ಏನಾದರೂ ಮಾಡಿಕೊಳ್ಳಿ ಎಂದು ಅಸಡ್ಡೆ ಯಿಂದ ಉತ್ತರಿಸಿದ್ದಾರೆ. ನೊಂದ ಖಾತೆದಾರ ವಿಧಿ ಇಲ್ಲದೆ ಹಿಂದಿರುಗಿ ಸಾರ್ವಜನಿಕವಾಗಿ ಖಂಡಿಸುವ ಪ್ರಯತ್ನದಲ್ಲಿ ಮಾಧ್ಯಮದ ಮೊರೆ ಹೋಗಿದ್ದಾರೆ. ಸಂಬಂಧ ಪಟ್ಟ ಉಚ್ಚ ಸಂಸ್ಥೆ ಆರ್. ಬಿ. ಐ, ಕೇಂದ್ರೀಯ ವಿತ್ತ ಸಚಿವಾಲಯ ಇತ್ತ ಕಡೆ ಗಮನ ಹರಿಸಿ, ಕಾಲಾವಕಾಶವನ್ನು ನೀಡಿ ಸ್ವಸ್ಥ ಮನಸ್ಸಿನಿಂದ ವ್ಯವಹಾರ ಮುಂದುವರಿಸಲು, ಸಾಲ ಮರುಪಾವತಿಸಲು ಅನುವು ಮಾಡಿಕೊಡಬೇಕಾಗಿ ಹಾಗೂ ಈ ರೀತಿ ಪ್ರಸಂಗಗಳು ಮರುಕಳಿಸದಂತೆ ಬ್ಯಾಂಕಿಗೆ ಎಚ್ಚರಿಕೆ ನೀಡಲು ಕೋರಲಾಗಿದೆ.
City Today News
(citytoday.media)
9341997936
