
ಈಗಾಗಲೇ ಕರ್ನಾಟಕ ಸಂಘಟನೆಗಳ ಒಕ್ಕೂಟವು ಕನ್ನಡಿಗರ ಸಾರಥ್ಯದಲ್ಲಿ ನೂರಾರು ಸಂಘಟನೆಗಳ ನೇತೃತ್ವದಲ್ಲಿ ಸುಮಾರು 93 ದಿನಗಳಿಂದ ಕನ್ನಡಿಗರ ಉದ್ಯೋಗಕ್ಕಾಗಿ ಮಾಡುತ್ತಿರುವ ಹೋರಾಟಕ್ಕೆ ಇಲ್ಲಿಯವರೆಗೆ ಪೇಜಾವರ ಶ್ರೀಗಳು ಸೇರಿದಂತೆ ರಾಜ್ಯದ 40ಕ್ಕೂ ಹೆಚ್ಚು ಮಠಾಧೀಶರುಗಳು ಸದುಶರಣರು ಮತ್ತು ಪಕ್ಷಾತೀತವಾಗಿ ಎಲ್ಲಾ ರಾಜಕೀಯ ಮುಖಂಡರುಗಳು ಮತ್ತು ಸಂಘಟನೆಗಳ ಮುಖಂಡರು , ಸಾಹಿತಿಗಳು , ಚಿಂತಕರು , ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು , ಕರ್ನಾಟಕ ಸಾಹಿತ್ಯ ಪರಿಷತ್‌ನ ಸಾಕಷ್ಟು ಮುಖಂಡರುಗಳು ಅಲ್ಲದೆ ದಲಿತ ಸಂಘಟನೆಗಳು , ಕನ್ನಡಪರ ಸಂಘಟನೆಗಳು , ಮಹಿಳಾಪರ ಸಂಘಟನೆಗಳು , ಹಲವಾರು ಒಕ್ಕೂಟಗಳ ಕನ್ನಡ ಪರ ಹೋರಾಟಗಾರರು ಈ ಹೋರಾಟಕ್ಕೆ ಬಂದು ಬೆಂಬಲ ನೀಡಿರುವುದನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇನೆ . – ಈಗಾಗಲೇ ನಾವು ಮಾಡುತ್ತಿರುವ ಹೋರಾಟದ ಸ್ಥಳಕ್ಕೆ ಆಗಮಿಸಿದ ಕನ್ನಡ ಮತ್ತು ಸಂಸ್ಕೃತಿ ಸಚಿವರು , ಕಾರ್ಮಿಕ ಸಚಿವರು , ಮತ್ತು ಉಪ ಮುಖ್ಯಮಂತ್ರಿಗಳು , ನಮ್ಮ ಧರಣಿಯ ಸ್ಥಳಕ್ಕೆ ಬಂದು ನಮ್ಮ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆ ಕೊಟ್ಟರೂ ಸಹಾ ಯಾವುದೇ ಸಮಯವನ್ನು ನಿಗದಿ ಮಾಡಲಿಲ್ಲ ಆದ್ದರಿಂದ ಈ ರಾಜ್ಯದ ಮುಖ್ಯಮಂತ್ರಿಗಳು ನಮ್ಮನ್ನು ಕರೆದು ನಿಮ್ಮ ಬೇಡಿಕೆ ನ್ಯಾಯಬದ್ಧವಾಗಿದೆ ನಾನೂ ಕೂಡ ಕನ್ನಡಿಗ ಎಂಬ ಮಾತನ್ನು ಹೇಳಿ ನಾನು ಕೂಡ ಕನ್ನಡಿಗರಿಗೆ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇನೆಂದು ನಮಗೆ ಭರವಸೆ ನೀಡಿದರೂ ಅವರು ಕೂಡ ಯಾವುದೇ ಸಮಯವನ್ನು ನಿಗದಿ ಮಾಡಲಿಲ್ಲ . ಇದನ್ನು ಗಮನಿಸಿದ ನಾವು ನಿಮ್ಮ ಒಕ್ಕೂಟವು ನೂರಾರು ಸಂಘಟನೆಗಳ ಸೇರಿ ಧರಣಿಯನ್ನು ಮುಂದುವರೆಸುತ್ತಾ ಬಂದಿದ್ದೇವೆ . ಆದರೆ ಸರ್ಕಾರವು ಯಾವುದೇ ಕ್ರಮ ಕೈಗೊಳ್ಳದ ಕಾರಣ ನಾವು ನಮ್ಮ ಹಕ್ಕನ್ನು ಧರಣಿ ಮಾಡುವುದರಿಂದ ತುಂಬಾ ನಿಧಾನವಾಗುತ್ತದೆ ಎಂದು ಗಮನಿಸಿ , ಈಗಾಗಲೇ ಸರೋಜಿನಿ ಮಹಿಷಿ ವರದಿಯ ಹೋರಾಟಕ್ಕೆ 36ವರ್ಷಗಳು ಕಳೆದಿರುವುದು ನಿಮ್ಮ ಗಮನಕ್ಕೆ ತರಲು ಬಯಸಿದ್ದೇವೆ . ಇದನ್ನೆಲ್ಲಾ ಗಮನಿಸಿ , “ ಕರ್ನಾಟಕ ಬಂದ್ ‘ ಗೆ ಕರೆ ಕೊಟ್ಟಿದ್ದು , ಇದು ಕನ್ನಡಿಗರ ಉದ್ಯೋಗಕ್ಕಾಗಿ ಬಂದ್ ಮಾಡಲೇ ಬೇಕಾದ ಪರಿಸ್ಥಿತಿ ಬಂದಿದೆ . ಇನ್ನೂ ಕೂಡ ನಾವು ಕನ್ನಡಿಗರು ಸುಮ್ಮನೆ ಇದ್ದರೆ ನಮ್ಮ ಕನ್ನಡದ ಮಕ್ಕಳು ಪರಭಾಷಿಕರ ಮುಂದೆ ಕೈಕಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿ ಬರುವುದು ಖಂಡಿತ . ಇದನ್ನೆಲ್ಲಾ ಗಮನಿಸಿ ನಾವು ಕನ್ನಡಿಗರ ಸಾರಥ್ಯದಲ್ಲಿ ಕರ್ನಾಟಕ ಎಲ್ಲಾ ರೀತಿಯ ಸುಮಾರು 400 ಸಂಘಟೆಗಳ ಸಾರಥ್ಯದಲ್ಲಿ ಪ್ರಮುಖ ಪಾತ್ರ ಮತ್ತು ನಿಮ್ಮೆಲ್ಲರ ಬೆಂಬಲದಿಂದ ಕರ್ನಾಟಕ ಮಕ್ಕಳಿಗೆ ಉದ್ಯೋಗ ಕೊಡಿಸುವಲ್ಲಿ ಪ್ರಮುಖ ಪಾತ್ರವಹಿಸಿ ನಿರುದ್ಯೋಗಿ ಮಕ್ಕಳ ಭವಿಷ್ಯಕ್ಕೆ ಅನುಕೂಲ ಆಗುವ ನಿಟ್ಟಿನಲ್ಲಿ ನಮ್ಮೊಂದಿಗೆ ನೀವು ಇರುವಿರಿ ಎಂದು ನಂಬಿ ಫೆಬ್ರವರಿ – 13 ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿರುತ್ತೇವೆ . ಮತ್ತೊಂದು ಗಂಭೀರ ವಿಷಯ ಏನೆಂದರೆ ಶೀಘ್ರದಲ್ಲೇ ಮಹಾದಾಯಿ ಯೋಜನೆ ಜಾರಿ ಮಾಡಬೇಕೆಂದು ಅದೇ ರೀತಿ ಮೇಕೆದಾಟು ಯೋಜನೆ ಶೀಘ್ರದಲ್ಲೇ ಪ್ರಾರಂಭ ಮಾಡಬೇಕೆಂದು ಆಗ್ರಹವನ್ನು ಮಾಡುತ್ತಾ ಅಖಂಡ ಕರ್ನಾಟಕ ಬಂದ್‌ಗೆ ಸಹಕರೆ ನೀಡಿ ಸರ್ಕಾರದ ಗಮನ ಸೆಳೆಯುವುದರಲ್ಲಿ ಪ್ರಮುಖ ಪಾತ್ರ ನೀಡಬೇಕಾಗಿ ವಿನಮ್ರ ಮನವಿ .
– ಕನ್ನಡ ಚಳುವಳಿ ನಾಗೇಶ್
ಅಧ್ಯಕ್ಷರು – ಕರ್ನಾಟಕ ಸಂಘಟನೆಗಳ ಒಕ್ಕೂಟ
City Today News
(citytoday.media)
9341997936
