
ಮಾನ್ಯ ಮುಖ್ಯಮಂತ್ರಿಗಳೇ, ಯಾವ ಶಾಸಕರಿಗೂ ಇಲ್ಲದ ಮಾನದಂಡ ಮಾನ್ಯ ಶ್ರೀ . ಮಹೇಶ್ ಕುಮಟಳ್ಳಿ ರವರಿಗೆ ಏಕೆ , ತಾವು ಅಧಿಕಾರಕ್ಕೆ ಬರಲು ಕ್ಷೇತ್ರದ ಜನತೆ ಹಾಗೂ ರಾಜ್ಯದ ಜನತೆ ತಮ್ಮ ಮಾತೃ ಪಕ್ಷದ ಆರೋಪಗಳನ್ನು ಸಹಿಸಿಕೊಂಡು ತಮ್ಮನ್ನು ತೊಡಗಿಸಿಕೊಂಡಿರುವಂತಹ ಒಬ್ಬ ನಿಷ್ಠಾವಂತ ದೀಮಂತ ನಾಯಕರನ್ನು ತಮ್ಮ ಸಚಿವ ಸಂಪುಟದಿಂದ ಹೊರಗಿಟ್ಟ ಮರ್ಮವೇನೂ ಗೆದ್ದ 11 ಶಾಸಕರಿಗೆ ಸಚಿವ ಸ್ಥಾನ ಪೊಡುವುದಾಗಿ ತಾವೇ ಈ ಹಿಂದೆ ಪತ್ರಿಕಾ ಮಾಧ್ಯಮ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಬಹಿರಂಗ ಪಡಿಸಿದ್ದು ಆದರೆ ತಾವು ತಮ್ಮ ನಿರ್ಧಾರವನ್ನು ಬದಲಾಯಿಸಿದ ಹಿಂದಿನ ಶಕ್ತಿಯಾವುದು . ಮುಖ್ಯಮಂತ್ರಿಗಳೇ ನಮ್ಮ ಸಮಾಜವನ್ನು ಇಷ್ಟೊಂದು ನಿಕೃಷ್ಟತೆಯಿಂದ ಕಾಣಬೇಡಿ . ನಮ್ಮ ಪಂಚಸಾಲಿ ಸಮಾಜದಲ್ಲಿಯು ಸಹ ಮುಖ್ಯಮಂತ್ರಿ ಸ್ಥಾನಕ್ಕೆ ಏರುವಂತಹ ಅರ್ಹ ನಾಯಕರಿದ್ದಾರೆ . ಆದರೆ ಲಿಂಗಾಯಿತ ಸಮಾಜದಲ್ಲಿ ಬೃಹತ್ ಆಕಾರವಾಗಿ ಬೆಳೆದ ತಮ್ಮನ್ನು ಹಿಂದಿಕ್ಕಬಾರದೆಂಬ ಉದ್ದೇಶದಿಂದ ನಾವುಗಳು ತಮ್ಮ ಕೈಬಲ ಪಡಿಸಲು ಸಹಕರಿಸಿದ್ದು , ಆದರೆ ತಾವುಗಳು ನಮ್ಮ ನಾಯಕರು ಬೆಳಕಿಗೆ ಬರದಂತೆ ವ್ಯವಸ್ಥಿತವಾಗಿ ನೋಡಿಕೊಳ್ಳುತ್ತಿದ್ದೀರಿ ಇದೇ ಪ್ರವೃತ್ತಿ ಮುಂದುವರೆದಲ್ಲಿ ಹಿಂದಿನ ಎಲ್ಲಾ ಕಟ್ಟುಪಾಡುಗಳನ್ನು ಮುರಿದು ನಮ್ಮ ಸಮಾಜದ ಶಕ್ತಿಯನ್ನು ತಮಗೆ ತೋರಿಸಲು ಸಹ ಯೋಚಿಸುವುದಿಲ್ಲ . ಮಾನ್ಯ ಮುಖ್ಯಮಂತ್ರಿಗಳು ಕೊಟ್ಟ ಮಾತಿಗೆ ತಪ್ಪುವುದಿಲ್ಲವೆಂಬ ಮಾತು ಸುಳ್ಳಾಗದಂತೆ ತಾವು ನಡೆದುಕೊಳ್ಳಬೇಕು ಶ್ರೀ . ಮಹೇಶ್ ಕುಮಟಳ್ಳಿರವರಿಗೆ ಸಚಿವ ಸ್ಥಾನ ನೀಡುವುದರೊಂದಿಗೆ ಇನ್ನೆರಡು ಸಚಿವ ಸ್ಥಾನವನ್ನು ಸಮಾಜಕ್ಕೆ ನೀಡಿ ಪಂಚಮಸಾಲಿ ಸಮಾಜ ತಮ್ಮ ಮೇಲೆ ಇರಿಸಿದಂತಹ ನಂಬಿಕೆ ವಿಶ್ವಾಸವನ್ನು ಉಳಿಸಿಕೊಳ್ಳಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ .
–ಬಸವರಾಜ ದಿಂಡೂರ
–ಸಿದ್ದೇಶ ಹನಸಿ
-ಮಲ್ಲಣ್ಣ ಬೊಮ್ಮಸಾಗರ
City Today News
(citytoday.media)
9341997936
