ಪಂಚಮಸಾಲಿ ಶಾಸಕರ ಸಭೆಯ ಬೆನ್ನಲ್ಲೇ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಕೂಡಲ ಸಂಗಮ ಪಂಚಮಸಾಲಿ ಜಗದ್ಗುರುಗಳು

ಬೆಂಗಳೂರು, 20 ಫೆಬ್ರವರಿ, 2020..

1) ಕೃಷಿ ಆಧಾರಿತ ಹಾಗೂ ಆರ್ಥಿಕವಾಗಿ ಹಿಂದುಳಿದ ಪಂಚಮಸಾಲಿ ಸಮಾಜವನ್ನು ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ಸೇರ್ಪಡಿಸುವಂತೆ ,
2) ಪಂಚಮಸಾಲಿ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ
3)ಕಿತ್ತೂರು ರಾಣಿ ಚೆನ್ನಮ್ಮ ಅಭಿವೃದ್ಧಿ ಪ್ರಾಧಿಕಾರಕ್ಕೆ ಮುಂಗಡ ಪತ್ರದಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಒತ್ತಾಯಿಸಿ
4) ಮುಖ್ಯಮಂತ್ರಿ ಕಾನೂನು ಸಲಹೆಗಾರರಾದ ಮೋಹನ್ ಲಿಂಬಿಕಾಯಿಯವರಿಗೆ ಧಾರವಾಡ ಹುಬ್ಬಳ್ಳಿ ಪದವೀಧರ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ..

ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಪ್ರಥಮ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರ ನೇತ್ರುತ್ವದ ನಿಯೋಗ ಗುರುವಾರ ದಿನಾಂಕ 20 ಫೆಬ್ರವರಿ 2020 ರಂದು, ಬೆಂಗಳೂರಿನ ಢವಳಗಿರಿ ನಿವಾಸದಲ್ಲಿ ಮಾನ್ಯ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರಿಗೆ ಸಮಾಜದ ವತಿಯಿಂದ ಮನವಿ ಪತ್ರ ಸಲ್ಲಿಸಿದರು. ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಉದ್ಯಮಿ ಹಾಗೂ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಮತ್ತು ದೇವರ-ಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಧುರೀಣರಾದ ಮಲ್ಲನಗೌಡ ಎಸ್ ಬಿರಾದಾರ ಕೋರವಾರ , ವಿಜಯಪುರ ಜಿಲ್ಲೆಯ ಬಿಜೆಪಿ ಮುಖಂಡರುಗಳಾದ ಡಾ. ಬಿ. ಎಸ್. ಪಾಟೀಲ ನಾಗರಾಳ ಹುಲಿ, ಎಮ್. ಎಸ್. ರುದ್ರಗೌಡರು ಬಬಲೇಶ್ವರ,, ಸಂಜಯಗೌಡ ಬಿ ಪಾಟೀಲ ಕನಮಡಿ , ಡಾ. ಸಿ. ಎಸ್. ಸೋಲಾಪೂರ ಕಗ್ಗೋಡ ಹಾಗೂ ಶಿಕ್ಷಕರ ಸಂಘಟನೆಯ ನಿರಂಜನಕುಮಾರ್ ಉಪಸ್ಥಿತರಿದ್ದರು.

City Today News

(citytoday.media)

9341997946

Leave a comment

This site uses Akismet to reduce spam. Learn how your comment data is processed.