
ಹಿಂದೊಮ್ಮೆ ದರಿದ್ರನೊಬ್ಬ ಹೇಗೋ ಅರಮನೆಯೊಳಗೆ ಪ್ರವೇಶ ಪಡೆದು ರಾಜನ ಬಳಿ ಏನಾದರೂ ನೀಡಬೇಕೆಂದು ಬೇಡಿದ.
ರಾಜನೂ ಹುಮ್ಮಸ್ಸಿನಲ್ಲಿ “ಏನು ಬೇಕು ಕೇಳು” ಅಂದ.
ಸಮಯ ಕಾಯುತ್ತಿದ್ದ ದರಿದ್ರ ವ್ಯಕ್ತಿ “ಇಂದು ನನಗೆ ಕೇವಲ ಒಂದು ಚಿನ್ನದ ನಾಣ್ಯ ಕೊಡು” ಅಂದ.
ರಾಜನಿಗೆ ಅವಮಾನವಾದಂತಾಯಿತು.
ಆದರೂ ಸಾವರಿಸಿಕೊಂಡು “ಅಷ್ಟೇನಾ?” ಎಂದು ಕೇಳಿದ.
ದರಿದ್ರ ವ್ಯಕ್ತಿ ಇದಕ್ಕೇ ಕಾಯುತ್ತಿದ್ದಂತೆ, “ರಾಜನೇ ಪ್ರತಿದಿನ ಇದರ ದುಪ್ಪಟ್ಟು ಚಿನ್ನದ ನಾಣ್ಯಗಳನ್ನು ಇಪ್ಪತ್ತೊಂದು ದಿನಗಳ ತನಕ ಕೊಡಲು ನಿನ್ನಿಂದ ಸಾಧ್ಯವೇ?” ಎಂದು ಅಣಕಿಸುವಂತೆ ಕೇಳಿದ.
ರಾಜ ಈ ವಿಷಯ ಎಲ್ಲಿಗೆ ಹೋಗಿ ನಿಲ್ಲಬಹುದೆಂದು ಆಲೋಚಿಸಬೇಕಿತ್ತು.
ತನ್ನ ಘನತೆ ಕಡಿಮೆಯಾದರೂ ಪರವಾಗಿಲ್ಲ ಎಂದು ಜಾಗೃತೆಯಿಂದ ಕಠಿಣ ನಿರ್ಧಾರ ತಾಳಬೇಕಿತ್ತು.
ದರಿದ್ರನನ್ನು ಹೊಡೆದೋಡಿಸಿ ಪ್ರಜೆಗಳ ಸಂಪತ್ತನ್ನು ಕಾಪಾಡಬೇಕಿತ್ತು.
ಪ್ರಜೆಗಳೂ ಚಿಂತನೆ ಮಾಡಬೇಕಿತ್ತು.
ಆದರೆ ಹಾಗಾಗಲಿಲ್ಲ.
ಮೈಮರೆತ ರಾಜ, ಹಾಗೇ ಆಗಲಿ ಎಂದು ಮಾತು ನೀಡಿದ.
ರಾಜನಿಗೆ ತನ್ನ ತಪ್ಪಿನ ಅರಿವಾದಾಗ 21 ದಿನ ಕಳೆದಿತ್ತು.
ಆತ ಕಳೆದುಕೊಂಡ ಚಿನ್ನದ ನಾಣ್ಯಗಳು:
1
2
4
8
16
32
64
128
256
512
1024
2048
4096
8192
16384
32768
65536
131072
262144
524288
1048576
ಒಟ್ಟು 2097151 ಚಿನ್ನದ ನಾಣ್ಯಗಳು!
ಇಪ್ಪತ್ತು ಲಕ್ಷದ ತೊಂಬತ್ತೇಳು ಸಾವಿರದ ಒಂದು ನೂರ ಐವತ್ತೊಂದು.

ಹಾಗಾಗದಿರಲಿ ನಮ್ಮ 21 ದಿನಗಳು.
ಕೊರೋನಾ ವೈರಸ್ ಹೊಂಚು ಹಾಕುತ್ತಿರುವುದು ಇದಕ್ಕಿಂತಲೂ ಹೆಚ್ಚು ಬಾರತೀಯರ ಪ್ರಾಣಗಳಿಗಾಗಿ.
ಅತ್ಯಂತ ಜಾಗೃತರಾಗಿರೋಣ. 🙏
City Today News
(citytoday.media)
9341997936
