
ಬಂಧುಗಳೇ ನಮಸ್ಕಾರಗಳು. ಇಡೀ ಮನುಕುಲಕ್ಕೆ ಸವಾಲಾಗಿರುವ ಮಹಾಮಾರಿ ಕೊರೋನಾ ವೈರಸನ್ನು ನಮ್ಮ ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜೀ ಮತ್ತು ನಮ್ಮ ನಾಡಿನ ದೊರೆ ಸನ್ಮಾನ್ಯ ಶ್ರೀ ಬಿ. ಎಸ್. ಯಡಿಯೂರಪ್ಪಾ ಜೀ ಆದೇಶ ಹಾಗೂ ಮಾಗ೯ದಶ೯ನದಂತೆ, ಯಾವುದಕ್ಕೂ ಎದೆಗುಂದದೆ ಧೈರ್ಯದಿಂದ ಎದುರಿಸಿತ್ತಿರುವ, ನಿಯಂತ್ರಣ ಮಾಡುತ್ತಿರುವ ನಮ್ಮ ವೈದ್ಯರು, ಆರೋಗ್ಯ ಇಲಾಖೆಯ ಸವ೯ ಸಿಬ್ಬಂದಿ ವರ್ಗ, ಪೋಲಿಸ್ ಸಿಬ್ಬಂದಿ ವರ್ಗ, ಸೈನಿಕ ವಗ೯, ಮಾಧ್ಯಮ ಮಿತ್ರರು, ಸಂಘಸಂಸ್ಥೆಗಳು, ಬುದ್ದಿ ಜೀವಿಗಳು, ಸ್ವಾಮೀಜಿಗಳು, ಜನಪ್ರತಿನಿಧಿಗಳು, ಕಾಮಿ೯ಕ ವಗ೯, ಅಧಿಕಾರಿಗಳು ಹಾಗೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಾಯ ಮತ್ತು ಸಹಕಾರವನ್ನು ತೋರಿಸುತ್ತಿರುವ ಸವ೯ರ ಕಾಯ೯ ವೈಖರಿ ಪ್ರಶಂಸನೀಯ ಮತ್ತು ಶ್ಲಾಘನೀಯ. ಈ ಎಲ್ಲಾ ಮಹನೀಯರಿಗೂ ವಿಶೇಷವಾದ ಹ್ರೃದಯಪೂವ೯ಕವಾದ ಧನ್ಯವಾದಗಳು.
ಈಗ ಬಂದಿರುವ ತುರ್ತು ಸಂಧಿಗ್ದ ಪರಿಸ್ಥಿತಿಯೆಂದರೆ. ಕರೋನಾ ವೈರಸ್. ಈ ವೈರಸ್ ನಾ ಮಹಾಮಾರಿಯನ್ನು ನಮ್ಮ ಹತ್ತಿರ ಬಾರದಂತೆ ಅತೀವ ಜಾಗರೂಕತೆಯಿಂದ ನಾವು ಸರ್ಕಾರದ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿದರೆ ಶೇಕಡಾ % 90 ರಷ್ಟು ಗ್ಯಾರಂಟಿಯಾಗಿ ನಾವು ಈ ಮಹಾಮಾರಿಯನ್ನು ಹೆದುರಿಸ ಬಹುದು. ಆದ್ದರಿಂದ ಎಲ್ಲಾ ನಮ್ಮ ನಾಗರಕರ ಬಂಧುಗಳು ತಂತಮ್ಮ ಸ್ವಯಂ ಪ್ರತಿಷ್ಟೆ ಹಾಗೂ ಹಮ್ಮು ಬಿಮ್ಮುಗಳನ್ನು ಪ್ರದರ್ಶಿಸದೇ/ ಬದಿಗಿಟ್ಟು ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸೋಣ. ಸಧ್ಯದ ಎಲ್ಲಾ ನಿಯಮಗಳು ಜನ ಹಿತಕ್ಕಾಗಿ ಜಾರಿಯಲ್ಲಿವೆ. ಸರ್ಕಾರ ಅಥವಾ ಪೋಲೀಸ್ ಇಲಾಖೆಯನ್ನು ದೂಷಿಸದೇ ಅವರು ಕರ್ತವ್ಯವನ್ನು ನಿರ್ವಹಿಸಲು ಅನುವು ಮಾಡಿಕೊಡೋಣ. ಇದು ಸರ್ಕಾರ ಅಥವಾ ಪೋಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಕರ್ತವ್ಯ ಮಾತ್ರವಲ್ಲ. ಈ ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ. ಇದು ನಮ್ಮ ಹಾಗೂ ನಮ್ಮ ಮುಂದಿನ ಪೀಳಿಗೆಯ ಮನುಕುಲದ ಭವಿಷ್ಯವನ್ನು ಯೋಚಿಸುತ್ತಾ ಪ್ರತಿಯೊಬ್ಬರೂ ಸರ್ಕಾರದ ನಿಯಮಗಳನ್ನು ಪಾಲಿಸಲೇಬೇಕಾಗಿದೆ. ನಾವೆಲ್ಲರೂ ಕ್ಷೇಮದಿಂದ ಇದ್ದರೆ ಇಂತಹ ಹತ್ತಾರು ಹಬ್ಬಗಳನ್ನು ಆಚರಿಸಬಹುದು ಬಂಧುಗಳೇ. ಆದ್ದರಿಂದ ಸರ್ಕಾರದ ಮುಂದಿನ ಆದೇಶದವರೆಗೂ ಮನೆಯಲ್ಲಿರಿ ಎಂದು ತಮ್ಮಲ್ಲಿ ಕೈ ಮುಗಿದು ಬೇಡಿಕೊಳ್ಳುತ್ತೇನೆ. ದಯವಿಟ್ಟು ಎಲ್ಲರೂ “Social distancing” ಕಾಪಾಡಿಕೊಳ್ಳಿರಿ. ಪ್ರತಿಯೊಂದು ಘಂಟೆಗೊಮ್ಮೆ ಕೈಯನ್ನು ತೊಳೆದು ಕೊಳ್ಳಬೇಕು, ಸ್ಯಾನಿಟೈಜರ್ ಉಪಯೋಗಿಸಬೇಕು. ಯೋಗಭ್ಯಾಸವನ್ನು ಮಾಡುತ್ತ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಅಧಿಕ್ರುತ ಆದೇಶ ಮತ್ತು ನಿದೇ೯ಶನದ ಆಧಾರದ ಮೇಲೆ ಮಾತ್ರ ಔಷಧಿಗಳನ್ನು ಉಪಯೋಗಿಸಬೇಕು. ಅನಾವಶ್ಯಕ ಆತಂಕ ಬೇಡ. ವಿಶೇಷವಾಗಿ ಚಿಕ್ಕ ಮಕ್ಕಳು ಹಾಗೂ ವಯೋವ್ರಧ್ಧರ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಅಕಸ್ಮಾತ್ತಾಗಿ ಸೀನು ಬಂದಾಗ, ಕೆಮ್ಮಿದಾಗ, ಅತೀ ಹತ್ತಿರದಿಂದ ಮಾತನಾಡಿದಾಗ ದಯವಿಟ್ಟು ಕರವಸ್ತರ ಅಥವಾ ಟಾವೆಲ್ ಉಪಯೋಗಿಸಿ. ನಂತರ ಸುತ್ತಮುತ್ತಲಿನ 2 ಮೀಟರ್ ವರೆಗಿನ ಪ್ರದೇಶವನ್ನು ಸ್ವಚ್ಛಗೊಳಿಸಿ. ಆಗಾಗ್ಗೆ ನೀರನ್ನು ಕುಡಿಯಿರಿ. ಗ್ರಾಮೀಣ ಪ್ರದೇಶಗಳಲ್ಲಿ ವಾಸವಾಗಿರುವ ನಾಗರಿಕರು ತೋಟಗಳಲ್ಲಿ ಇರುವುದು ತುಂಬಾ ಒಳ್ಳೆಯದು.

ಇಂತಹ ಸಂದಿಗ್ಧ ಸಮಯದಲ್ಲಿ ಸಹಾಯ ಕೇಳಿದ ಅಸಹಾಯಕರಿಗೆ ಮತ್ತು ಬಡವರಿಗೆ ತಮ್ಮ ಕೈಯಿಂದಾದ ಸಹಾಯ ಸಹಕಾರ ಮಾಡಿ. ನಾವೆಲ್ಲರೂ ಒಗ್ಗಟ್ಟಾಗಿ ಈ ಮಹಾಮಾರಿಯನ್ನು ಹೊಡಿದೋಡಿಸಿ ಮನುಕುಲವನ್ನು ಉಳಿಸೋಣ. ದಯವಿಟ್ಟು ಧನಾತ್ಮಕ ಚಿಂತನೆ ಇರಲಿ.
ಮಾಹಿತಿ ತಂತ್ರಜ್ಞಾನ ಉದ್ಯಮಿ, ಮುದ್ದೇಬಿಹಾಳ ಮತ್ತು ದೇವರ-ಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಧುರೀಣರಾದ ಮಲ್ಲನಗೌಡ ಎಸ್ ಬಿರಾದಾರ ಕೋರವಾರ.
City Today News
(citytoday.media)
9341997936
