ಈಗ ಬಂದಿರುವ ತುರ್ತು ಸಂಧಿಗ್ದ ಪರಿಸ್ಥಿತಿಯೆಂದರೆ.

ಕರೋನಾ ವೈರಸ್. ಈ ವೈರಸ್ ನಾ ಮಹಾಮಾರಿಯನ್ನು ನಮ್ಮ ಹತ್ತಿರ ಬಾರದಂತೆ ಅತೀವ ಜಾಗರೂಕತೆಯಿಂದ ನಾವು ಸರ್ಕಾರದ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿದರೆ ಶೇಕಡಾ % 90 ರಷ್ಟು ಗ್ಯಾರಂಟಿಯಾಗಿ ನಾವು ಈ ಮಹಾಮಾರಿ ಯನ್ನು ಹೆದುರಿಸ ಬಹುದು. ಆದ್ದರಿಂದ ಎಲ್ಲಾ ನಮ್ಮ ನಾಗರೀಕರು ಬಂಧುಗಳು ತಂತಮ್ಮ ಸ್ವಯಂ ಪ್ರತಿಷ್ಟೆ ಹಾಗೂ ಹಮ್ಮು ಬಿಮ್ಮುಗಳನ್ನು ಪ್ರದರ್ಶಿಸದೇ/ ಬದಿಗಿಟ್ಟು ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸೋಣ. ಸಧ್ಯದ ಎಲ್ಲಾ ನಿಯಮಗಳು ಜನ ಹಿತಕ್ಕಾಗಿ ಜಾರಿಯಲ್ಲಿವೆ.

ಸರ್ಕಾರ ಅಥವಾ ಪೋಲೀಸ್ ಇಲಾಖೆಯನ್ನು ದೂಷಿಸದೇ ಅವರು ಕರ್ತವ್ಯವನ್ನು ನಿರ್ವಹಿಸಲು ಅನುವು ಮಾಡಿ ಕೊಡೋಣ. ಇದು ಸರ್ಕಾರ ಅಥವಾ ಪೋಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಕರ್ತವ್ಯ ಮಾತ್ರವಲ್ಲ. ಈ ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಇದು ನಮ್ಮ ಹಾಗೂ ನಮ್ಮ ಮುಂದಿನ ಪೀಳಿಗೆಯ ಮನುಕುಲದ ಭವಿಷ್ಯವನ್ನು ಯೋಚಿಸುತ್ತಾ ಪ್ರತಿಯೊಬ್ಬರೂ ಸರ್ಕಾರದ ನಿಯಮಗಳನ್ನು ಪಾಲಿಸಬೇಕಾಗಿದೆ. ನಾವೆಲ್ಲರೂ ಕ್ಷೇಮದಿಂದ ಇದ್ದರೆ ಇಂತಹ ಹತ್ತಾರು ಹಬ್ಬಗಳನ್ನು ಆಚರಿಸಬಹುದು ಬಂಧುಗಳೇ. ಆದ್ದರಿಂದ ಸರ್ಕಾರದ ಮುಂದಿನ ಆದೇಶದ ವರೆಗೂ ಮನೆಯಲ್ಲಿರಿ. ಎಂದು ತಮ್ಮಲ್ಲಿ ಕೈ ಮುಗಿದು ಬೇಡಿಕೊಳ್ಳುತ್ತೇನೆ.
ಓಂಕಾರಪ್ಪ. ಎಂ.
MRPS. ಜಿಲ್ಲಾಧ್ಯಕ್ಷರು. ಚಿಕ್ಕಮಗಳೂರು.
City Today News
(citytoday.media)
9341997936
