
ಪರಸ್ಪರ ಕಚ್ಚಾಡಿ ಕಟ್ಟಿದ ದೇವಸ್ಥಾನ
ಮಸೀದಿ ಚರ್ಚಿನ ಒಳಗೆ ಮನುಷ್ಯನ
ಪ್ರವೇಶ ನಿಷೇಧಿಸಿದ ದೇವರು
ನಗುತ್ತಿದ್ದಾನೆ
ಭಕ್ತರು ಮುಟ್ಟಿದ ಬೈಬಲ್ ಕುರಾನ್,
ಭಗವದ್ಗೀತೆ ಮುಟ್ಟಲು ದೈರ್ಯ ಇಲ್ಲದೆ
ಸ್ವಾಮೀಜಿ ಗುರುಗಳು ಫಾದರ್
ಪದೇ ಪದೇ ಕೈ ತೊಳೆಯುತಿದ್ದಾರೆ
ದೊಡ್ಡಣ್ಣ ಎಂದವರು ಅಣುಬಾಂಬ್ ಇದ್ದವರು ಮಂಗಳಕ್ಕೆ ಹೊರಟವರು
ಅಂಗಳಕ್ಕೂ ಬರಲಾಗದೆ
ಕಂಗಾಲಾಗಿದ್ದಾರೆ
ಬಡವನಿಗೆ ಒದ್ದವರು, ಜಾತಿ ಕೀಳೆಂದು ದೂರ ಇಟ್ಟವರು, ಸಂಬಂಧ ಮರೆತವರು,
ಕಿರುಚಾಡಿದವರು, ಎಲ್ಲರೂ ಜೆಸಿಬಿ
ತೋಡಿದ ಗುಂಡಿಯ ಒಳಗೆ
ಒಟ್ಟಿಗೆ ಮಲಗಿದ್ದಾರೆ.

ನಮ್ಮೊಳಗೆ ಇರುವ ವೈರಸ್ ಕೊನೆ ಆಗದ
ಹೊರತು ಕೆಲವು ರೋಗಗಳಿಗೆ ಮದ್ದು
ಫಲಿಸುವುದಿಲ್ಲ 🙏🙏🙏
ದಯವಿಟ್ಟು ಉಳಿದದ್ದೆಲ್ಲಾ ಬಿಸಾಕು,ಮಾನವೀಯತೆ ಒಂದೇ ಸಾಕು.
City Today News
(citytoday.media)
9341997936
