
• ಫೇಸ್‍ಬುಕ್ ಯುನೆಸ್ಕೊದೊಂದಿಗೆ ಸಹಯೋಗದಲ್ಲಿ ಕಲಿಯುವವರು, ಶಿಕ್ಷಣ ಸಂಸ್ಥೆಗಳು ಮತ್ತ ಶಿಕ್ಷಕರಿಗೆ ತಲುಪಲು ಮತ್ತು ಸಂಬಂಧಿಸಿದ ಕಲಿಕೆಯ ಸಂಪನ್ಮೂಲಗಳ ಅಪ್‍ಡೇಷನ್ ಮತ್ತು ಕ್ಯುರೇಷನ್‍ಬೆ ಬೆಂಬಲ
• ಕೋವಿಡ್-19ರ ಕುರಿತು ಅಧಿಕೃತ ಮಾಹಿತಿಗೆ ಮಾರ್ಗದರ್ಶಿ

ಗುರ್‍ಗಾಂವ್, ಏಪ್ರಿಲ್ 14, 2020: ಕೋವಿಡ್-19ರ ಹಿನ್ನೆಲೆಯಲ್ಲಿ ಕಲಿಕೆಯ ಪ್ರಕ್ರಿಯೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಫೇಸ್‍ಬುಕ್ ಆನ್‍ಲೈನ್ ಮಾರ್ಗದರ್ಶಿ ಬಿಡುಗಡೆ ಮಾಡಿದ್ದು, ಅದು, ‘ಸಪೋರ್ಟಿಂಗ್ ಎಜುಕೇಷನ್ ಕಮ್ಯುನಿಟೀಸ್: ಆ್ಯನ್ ಆನ್‍ಲೈನ್ ಲರ್ನಿಂಗ್ ರಿಸೋರ್ಸಸ್ ಗೈಡ್’ ಶೀರ್ಷಿಕೆಯಲ್ಲಿದೆ. ಈ ಆನ್‍ಲೈನ್ ಸಂಪನ್ಮೂಲವು ಶೈಕ್ಷಣಿಕ ಸಮುದಾಯಗಳಿಗೆ ಹೇಗೆ ಫೇಸ್‍ಬುಕ್ ಉತ್ಪನ್ನಗಳು, ಸಾಧನಗಳು ಮತ್ತು ಪ್ರೋಗ್ರಾಮ್‍ಗಳ ಮೂಲಕ ಕಲಿಕಾ ಪ್ರಕ್ರಿಯೆಯ ಸಹಯೋಗ ಹೊಂದಬಹುದು ಮತ್ತು ಮುಂದುವರಿಸಬಹುದು ಎನ್ನುವುದಕ್ಕೆ ಮಾರ್ಗದರ್ಶನ ನೀಡುತ್ತವೆ ಅಲ್ಲದೆ ಕೋವಿಡ್-19ರ ಕುರಿತು ಅಧಿಕೃತ ಮೂಲಗಳಿಂದ ಮಾಹಿತಿ ನೀಡುತ್ತದೆ. ಪ್ರಸ್ತುತ, ಈ ಮಾರ್ಗದರ್ಶನ ಇಂಗ್ಲಿಷ್, ಹಿಂದಿ, ಮರಾಠಿ, ಗುಜರಾತಿ ಮತ್ತು ಕನ್ನಡ ಭಾಷೆಗಳಲ್ಲಿ ಲಭ್ಯವಿದೆ.
ತನ್ನ ಮೊದಲ ಹಂತದಲ್ಲಿ ಫೇಸ್‍ಬುಕ್ ಯುನೆಸ್ಕೊ(UಓಇSಅಔ)ದೊಂದಿಗೆ ಸಹಯೋಗ ಹೊಂದಿದ್ದು ಈ ಮಾರ್ಗದರ್ಶಿ ಭಾರತದಾದ್ಯಂತ ಕಲಿಯುವವರು, ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರಿಗೆ ದೊರೆಯುವುದನ್ನು ದೃಢಪಡಿಸುತ್ತದೆ ಅಲ್ಲದೆ ಸಂಬಂಧಿಸಿದ ಸಂಪನ್ಮೂಲಗಳ ಮೂಲಕ ಅಪ್‍ಡೇಷನ್ ಮತ್ತು ಕ್ಯುರೇಷನ್ ಕೂಡಾ ಬೆಂಬಲಿಸುತ್ತದೆ.
ಆನ್‍ಲೈನ್ ರಿಸೋರ್ಸ್ ಶೈಕ್ಷಣಿಕ ಸಮುದಾಯಗಳಿಗೆ ಫೇಸ್‍ಬುಕ್ ಉತ್ಪನ್ನಗಳು ಮತ್ತು ಸಾಧನಗಳಾದ ಫೇಸ್‍ಬುಕ್ ಪೇಜಸ್, ಫೇಸ್‍ಬುಕ್ ಗ್ರೂಪ್ಸ್, ಫೇಸ್‍ಬುಕ್ ಲೈವ್, ಮೆಸೆಂಜರ್, ವ್ಹಾಟ್ಸಾಪ್ ಮತ್ತು ಇನ್ಸ್‍ಟಾಗ್ರಾಂ ಬಳಸುವ ಮೂಲಕ ಸಹಯೋಗ ಹೊಂದುವುದರ ಕುರಿತು ನೆರವಾಗುತ್ತದೆ. ಇದರೊಂದಿಗೆ, ಇದರಲ್ಲಿ ಫೇಸ್‍ಬುಕ್‍ನ ಡಿಜಿಟಲ್ ಸಾಕ್ಷರತೆಯ ಕಾರ್ಯಕ್ರಮ- “ವಿ ಥಿಂಕ್ ಡಿಜಿಟಲ್ ಮಾಡ್ಯೂಲ್‍ಗಳಿದ್ದು ಜನರಿಗೆ ವಿಮರ್ಶಾತ್ಮಕವಾಗಿ ಚಿಂತಿಸಲು ಮತ್ತು ಆನ್‍ಲೈನ್‍ನಲ್ಲಿ ಚಿಂತಿಸಿ ಹಂಚಿಕೊಳ್ಳಲು ನೆರವಾಗುತ್ತದೆ. ಈ ಮಾರ್ಗದರ್ಶಿ ಕೋವಿಡ್-19ರ ಕುರಿತು ಮಹತ್ತರ ಮಾಹಿತಿಯನ್ನು ಅಧಿಕೃತ ಹಾಗೂ ವಿಶ್ವಾಸಾರ್ಹ ಮೂಲಗಳಾದ ಭಾರತ ಸರ್ಕಾರದ ಅಡ್ವೈಸರಿ, ಡಬ್ಲ್ಯೂಎಚ್‍ಒ ಇಂಡಿಯಾ ಸಿಚುಯೇಷನ್ ರಿಪೋರ್ಟ್ ಪೇಜ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಕೊರೊನಾವೈರಸ್ ಹಬ್ ಆನ್ ಫೇಸ್‍ಬುಕ್ ಮತ್ತು ಗೈಡೆನ್ಸ್ ಫ್ರಮ್ ಯೂನಿಸೆಫ್ ಆನ್ ಕೋವಿಡ್-19 ಪ್ರಿವೆನ್ಷನ್ ಅಂಡ್ ಕಂಟ್ರೋಲ್ ಇನ್ ಸ್ಕೂಲ್ಸ್ ಮತ್ತು ಅವರಿಗೆ ಆತಂಕ ನಿಭಾಯಿಸಲು ಮತ್ತು ಈ ಸೋಂಕಿನ ಕುರಿತು ತಪ್ಪು ಮಾಹಿತಿಯನ್ನು ಹೊಡೆದೂಡಲು ನೆರವಾಗುತ್ತದೆ.
ಈ ಪ್ರಾರಂಭ ಕುರಿತು ಫೇಸ್‍ಬುಕ್ ಇಂಡಿಯಾದ ಡೈರೆಕ್ಟರ್ ಅಂಡ್ ಹೆಡ್ ಆಫ್ ಪಾರ್ಟ್‍ನರ್‍ಶಿಪ್ಸ್ ಮನಿಶ್ ಛೋಪ್ರಾ, “ಈ ಕಠಿಣ ಸಮಯದಲ್ಲಿ ಜನರಿಗೆ ಸಂಪರ್ಕದಲ್ಲಿರುವುದು ಹಾಗೂ ಕೋವಿಡ್-19 ಕುರಿತು ವಿಶ್ವಾಸಾರ್ಹ ಮಾಹಿತಿಯ ಲಭ್ಯತೆ ಹೆಚ್ಚು ಮುಖ್ಯವಾಗಿದೆ. ನಮ್ಮ ಆನ್‍ಲೈನ್ ಕಲಿಕಾ ಮಾರ್ಗದರ್ಶಿಯ ಮೂಲಕ, ನಾವು ಶಿಕ್ಷಕರು, ಪೋಷಕರು ಮತ್ತು ಸಂಬಂಧಿಸಿದ ಸರ್ಕಾರಿ ಅಧಿಕಾರಿಗಳಿಗೆ ಅಪಾರ ಸಂಪನ್ಮೂಲಗಳು ಮತ್ತು ಸಾಧನಗಳನ್ನು ಒದಗಿಸುವ ಮೂಲಕ ಅವರಿಗೆ ಸಂಪರ್ಕದಲ್ಲಿರಲು ಮತ್ತು ದೂರದ ಕಲಿಕೆಗೆ ಡಿಜಿಟಲ್ ರೂಪದಲ್ಲಿ ಸಹಯೋಗ ಹೊಂದಲು ನೆರವಾಗಲು ಬಯಸಿದೇವೆ. ಅವರು ಈ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಶಕ್ತರಾಗುತ್ತಾರೆ ಮತ್ತು ಕಲಿಕೆಯ ಪ್ರಕ್ರಿಯೆಯನ್ನು ಮುಂದುವರಿಸುತ್ತಾರೆ ಎಂಬ ಭರವಸೆ ನಮ್ಮದು” ಎಂದರು.
ಬಾಂಗ್ಲಾದೇಶ, ಭೂತಾನ, ಭಾರತ, ನೇಪಾಳ, ಮಾಲ್ಡೀವ್ಸ್ ಮತ್ತು ಶ್ರೀಲಂಕಾಗಳ ಯುನೆಸ್ಕೊ ನವದೆಹಲಿ ಕ್ಲಸ್ಟರ್ ಕಛೇರಿಯ ನಿರ್ದೇಶಕ ಮತ್ತು ಯುನೆಸ್ಕೊ ಪ್ರತಿನಿಧಿ ಎರಿಕ್ ಫಾಲ್ಟ್, “ಕೋವಿಡ್-19 ಸಾಂಕ್ರಾಮಿಕ ಆರೋಗ್ಯದ ಬಿಕ್ಕಟ್ಟು ಮಾತ್ರವಲ್ಲದೆ ಕಲಿಕೆಯ ಬಿಕ್ಕಟ್ಟನ್ನೂ ಸೃಷ್ಟಿಸಿದೆ. ವಿಶ್ವದ ಶೇ.90ಕ್ಕೂ ಹೆಚ್ಚು ಕಲಿಯುವವರು ಶಾಲೆ ಮತ್ತು ವಿಶ್ವವಿದ್ಯಾಲಯ ಮುಚ್ಚುವಿಕೆಯಿಂದ ಬಾಧಿತರಾಗಿದ್ದಾರೆ. ಜಾಗತಿಕ ಪ್ರಯತ್ನಗಳೊಂದಿಗೆ ಯುನೆಸ್ಕೊ ನವದೆಹಲಿ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಕಾರ್ಯಕರ್ತರು ಮತ್ತು ಸಂಪನ್ಮೂಲಗಳನ್ನು ಒಗ್ಗೂಡಿಸುತ್ತಿದ್ದು ಗರಿಷ್ಠ ಪರಿಣಾಮ ಉಂಟು ಮಾಡಲು ಪರಿಣಾಮಕಾರಿ ಮತ್ತು ಒಗ್ಗೂಡಿಸಿದ ಪ್ರತಿಕ್ರಿಯೆ ಅಭಿವೃದ್ಧಿಪಡಿಸುತ್ತಿದೆ. ಅಲ್ಲದೆ, ಶಿಕ್ಷಣವನ್ನು ದೂರದಿಂದಲೇ ನೀಡಲು ಸನ್ನಿವೇಶ ಆಧರಿತ ಪರಿಹಾರಗಳನ್ನು ನೀಡಬೇಕಾಗಿದ್ದು ಅತ್ಯುನ್ನತ ಹೈ-ಟೆಕ್, ಲೋ-ಟೆಕ್ ಮತ್ತು ನೋ-ಟೆಕ್ ವಿಧಾನಗಳ ಮೂಲಕ ಮಹಿಳಾ ಕಲಿಕೆದಾರರಿಗೆ ವಿಶೇಷ ಲಭ್ಯತೆಗೆ ಗಮನ ನೀಡಲಾಗಿದೆ. ತಂತ್ರಜ್ಞಾನವು ಈ ಎಲ್ಲ ಪ್ರಯತ್ನಗಳನ್ನೂ ಸಕ್ರಿಯಗೊಳಿಸುವುದಾಗಿದೆ. ಯುನೆಸ್ಕೊ ನವದೆಹಲಿ ಮತ್ತು ಫೇಸ್‍ಬುಕ್ ಸಹಯೋಗವು ಆದ್ದರಿಂದ ಎಲ್ಲ ಪಾಲುದಾರರಿಗೂ ಒಟ್ಟಾಗಿ ಬರಲು ಆನ್‍ಲೈನ್ ಪ್ಲಾಟ್‍ಫಾರಂ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಮತ್ತು ಕಲಿಕೆಯ ಸಂಚಲನೆಯಲ್ಲಿ ಸಾಲಿನ ಮೊದಲಿನಿಂದ ಕೊನೆಯವರೆಗೂ ಕಾರ್ಯ ನಿರ್ವಹಿಸಲಿದೆ” ಎಂದರು.
ಹೆಚ್ಚು ಹೆಚ್ಚು ಶಾಲೆಗಳು ವರ್ಚುಯಲ್ ಮಾದರಿಗೆ ಪರಿವರ್ತನೆಯಾಗುತ್ತಿರುವುದರಿಂದ ಫೇಸ್‍ಬುಕ್ ವರ್ಚುಯಲ್ ಕಲಿಕೆ ಸುಲಭಗೊಳಿಸಲು ಸಮುದಾಯಗಳ ಬೆಂಬಲಕ್ಕೆ ಬದ್ಧವಾಗಿದೆ ಮತ್ತು ಬಳಕೆದಾರರಿಗೆ ಈ ವರ್ಚುಯಲ್ ಕಲಿಕೆಯ ಪ್ರಕ್ರಿಯೆ ಸರಳಗೊಳಿಸಲಿದೆ ಮತ್ತು ಶಿಕ್ಷಕರಿಗೆ ಕೋವಿಡ್-19ರ ಮಾಹಿತಿ ನೀಡಲಿದೆ.
ಅಲ್ಲದೆ ಫೇಸ್‍ಬುಕ್ ಕಳೆದ ವಾರ ಕೊರೊನಾವೈರಸ್ ಇನ್ಫರ್ಮೇಷನ್ ಸೆಂಟರ್ ಅನ್ನು ಪ್ರಾರಂಭಿಸಿದ್ದು ಅದು ಮೈಗೌ ಕೊರೊನಾ ಹಬ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ(ಎಂಒಎಚ್‍ಎಫ್‍ಡಬ್ಲ್ಯೂ) ಹಾಗೂ ಜಾಗತಿಕ ಆರೋಗ್ಯ ಸಂಸ್ಥೆಗಳಿಂದ ಹೊಚ್ಚಹೊಸ ಸುದ್ದಿ ಮತ್ತು ಅಪ್‍ಡೇಟ್‍ಗಳನ್ನು ನೀಡುತ್ತದೆ ಅಲ್ಲದೆ ಸಾಮಾಜಿಕ ಅಂತರ ಹಾಗೂ ಕೋವಿಡ್-19ರ ನಿಯಂತ್ರಣ ಕುರಿತು ಉಪಯುಕ್ತ ಮಾಹಿತಿ ನೀಡುತ್ತದೆ. ಇದು ನ್ಯೂಸ್ ಫೀಡ್‍ನಲ್ಲಿ ಮುಂಚೂಣಿಯಲ್ಲಿದ್ದು ಹೊಚ್ಚಹೊಸ ಸುದ್ದಿ ಮತ್ತು ಅತ್ಯಾಧುನಿಕ ಸುದ್ದಿ ಹಾಗೂ ಮಾಹಿತಿಗೆ ಸುಲಭ ಲಭ್ಯತೆ ಅಲ್ಲದೆ ಆರೋಗ್ಯಕರವಾಗಿರಿಸಲು ಸಂಪನ್ಮೂಲಗಳು ಸಲಹೆಗಳನ್ನು ಒದಗಿಸುತ್ತದೆ.
City Today News
(citytoday.media)
9341997936
