
ಏಪ್ರಿಲ್,: COVID-19 ಸಾಂಕ್ರಾಮಿಕ ರೋಗ ಹರಡುವಿಕೆ ಮತ್ತು ರಾಷ್ಟ್ರವ್ಯಾಪಿ ಲಾಕ್‌ಡೌನ್ ಮೇ 3 ರವರೆಗೆ ವಿಸ್ತರಣೆಯಾದ ಹಿನ್ನೆಲೆಯಲ್ಲಿ, ಡಿ2ಸಿ ಸೆಲ್ಲರ್‌ಗಳಿಗಾಗಿನ ತಂತ್ರಜ್ಞಾನ ಆಧರಿತ ಲಾಜಿಸ್ಟಿಕ್ಸ್ ಅಗ್ರಗೇಟರ್ ಶಿಪ್‌ರಾಕೆಟ್ ಅಗತ್ಯ ಸಾಮಗ್ರಿಗಳ ಹೈಪರ್‌ಲೋಕಲ್ ಡೆಲಿವರಿ ಸೇವೆಗೆ ಕಾಲಿಟ್ಟಿದೆ. ಹೊಸದಾಗಿ ಪ್ರಾರಂಭಿಸಲಾದ ಈ ಸೇವೆಯ ಮೂಲಕ, ಆಹಾರ, ದಿನಸಿ ಮತ್ತು ಔಷಧಗಳಂತಹ ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಇ-ಕಾಮರ್ಸ್ ಕಂಪನಿಗಳು ಶ್ಯಾಡೋಫ್ಯಾಕ್ಸ್‌ನ ವಿತರಣಾ ಪಾಲುದಾರರ ಪರಿಣತಿಯನ್ನು ಪಡೆದುಕೊಂಡು 8 ಕಿ.ಮೀ ವ್ಯಾಪ್ತಿಯಲ್ಲಿ ತಮ್ಮ ಆರ್ಡರ್‌ಗಳನ್ನು ತಲುಪಿಸಲು ಬ್ರ್ಯಾಂಡ್ ಅನುವು ಮಾಡಿಕೊಡುತ್ತದೆ.
ಅಹಮದಾಬಾದ್, ದೆಹಲಿ, ಜೈಪುರ, ಮುಂಬೈ, ಪುಣೆ, ಫರಿದಾಬಾದ್, ನೋಯ್ಡಾ, ಗುರುಗ್ರಾಮ್ ಮತ್ತು ಇನ್ನೂ 14 ಪ್ರಮುಖ ನಗರಗಳಲ್ಲಿ ಹೊಸ ಸೇವೆಯನ್ನು ಪ್ರಾರಂಭಿಸಲಾಗಿದೆ.
ಪಾಲುದಾರಿಕೆಯ ಮೂಲಕ ಶಿಪ್‌ರಾಕೆಟ್ ತನ್ನ ಸ್ಥಳೀಯ ಅನುಭವಿ ವಿತರಣಾ ಪೂರೈಕೆದಾರರಿಂದ ಅಗತ್ಯ ಉತ್ಪನ್ನಗಳ ತಡೆರಹಿತ ವಿತರಣೆಗೆ ಅನುಕೂಲ ಮಾಡಿಕೊಡಲಿದೆ. ಈ ಸೇವೆಯನ್ನು ಸದುಪಯೋಗಪಡಿಸಿಕೊಳ್ಳುವುದರಿಂದ, ಬ್ರ್ಯಾಂಡ್‌ಗಳು ಗ್ರಾಹಕರನ್ನು ನೇರವಾಗಿ ತಲುಪಲು ಮತ್ತು ಒಂದೇ ದಿನ ಮತ್ತು ಮುಂದಿನ ದಿನದ ಡೆಲಿವರಿಗಳನ್ನು ತ್ವರಿತವಾಗಿ ಮಾಡಲು ಸಾಧ್ಯವಾಗುತ್ತದೆ. ತೂಕವನ್ನು ಆಧರಿಸಿ ನಿರ್ಬಂಧ ಹೇರುವುದು ಮತ್ತು ರಿಟರ್ನ್‌ಗಳಿಗೆ ಹೆಚ್ಚುವರಿ ಶುಲ್ಕವನ್ನು ಇದು ಹೊಂದಿರುವುದಿಲ್ಲ. 5 ಕಿ.ಮೀಗೆ 79 ರೂ. ಆರಂಭಿಕ ದರದಲ್ಲಿ ಎಲ್ಲ ಸಮೀಪದ ಆರ್ಡರ್‌ಗಳನ್ನು ಸಾಗಿಸಲು ಬ್ರಾಂಡ್‌ಗಳಿಗೆ ಶಿಪ್‌ರಾಕೆಟ್ ಅನುವು ಮಾಡಿಕೊಡಲಿದೆ.
ಹೊಸ ಸೇವೆಯ ಬಿಡುಗಡೆಯ ಸಮಯದಲ್ಲಿ ಮಾತನಾಡಿದ ಶಿಪ್‌ರಾಕೆಟ್‌ನ ಸಿಇಒ ಮತ್ತು ಸಹಸಂಸ್ಥಾಪಕ ಶ್ರೀ ಸಾಹಿಲ್ ಗೋಯೆಲ್, “ಡೆಲಿವರಿ ಏಜೆಂಟ್‌ಗಳು ಲಭ್ಯವಿಲ್ಲದ್ದರಿಂದಾಗಿ ಡೆಲಿವರಿ ವಿಳಂಬವಾಗುತ್ತಿದೆ. ಇದರಿಂದಾಗಿ ಇಕಾಮರ್ಸ್ ಕಂಪನಿಗಳು ತಮ್ಮ ಗ್ರಾಹಕರನ್ನು ಕಳೆದುಕೊಳ್ಳುತ್ತಿವೆ. ಇದಲ್ಲದೆ, ಪ್ರಸ್ತುತ ಸನ್ನಿವೇಶದಲ್ಲಿ, ಗ್ರಾಹಕರು ತಮ್ಮ ಆರ್ಡರ್ ನೀಡಿದ ನಂತರ ಒಂದು ದಿನಕ್ಕಿಂತ ಹೆಚ್ಚು ಕಾಲ ಕಾಯಲು ಬಯಸುವುದಿಲ್ಲ.
ಪಾಲುದಾರಿಕೆ ಕುರಿತು ಮಾತನಾಡಿದ, ಭಾರತದ ಅತಿದೊಡ್ಡ ಕ್ರೌಡ್‌ಸೋರ್ಸ್ಡ್ ಲಾಜಿಸ್ಟಿಕ್ಸ್ ಪ್ಲಾಟ್‌ಫಾರ್ಮ್ ಶ್ಯಾಡೋಫ್ಯಾಕ್ಸ್ ಸಿಇಒ ಅಭಿಷೇಕ್ ಬನ್ಸಾಲ್, , “ಜನರಿಗೆ ಅಗತ್ಯವಾದಾಗ ಅಗತ್ಯ ವಸ್ತುಗಳನ್ನು ಲಭ್ಯವಾಗುವಂತೆ ಮಾಡುವುದರಲ್ಲಿ ಲಾಕ್‌ಡೌನ್‌ನ ಪ್ರಸ್ತುತ ಸ್ಥಿತಿಯ ಯಶಸ್ಸು ಅವಲಂಬಿಸಿರುತ್ತದೆ. ಶಿಪ್‌ರಾಕೆಟ್‌ನೊಂದಿಗಿನ ನಮ್ಮ ಸಹಭಾಗಿತ್ವವು ಗ್ರಾಹಕರಿಗೆ ತಮ್ಮ ವಿಶ್ವಾಸಾರ್ಹ ಮಳಿಗೆಗಳಿಂದ ಕೆಲವೇ ಗಂಟೆಗಳ ಅವಧಿಯಲ್ಲಿ ಅಗತ್ಯ ವಸ್ತುಗಳ ಹೈಪರ್‌ಲೋಕಲ್ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ನಮ್ಮ ನಿರಂತರ ಪ್ರಯತ್ನದ ಒಂದು ಪ್ರಮುಖ ಭಾಗವಾಗಿದೆ. ಈ ಸಹಭಾಗಿತ್ವವು ಓಮ್ನಿಚಾನಲ್ ಮೂಲಕ ತಂತ್ರಜ್ಞಾನ ಮತ್ತು ಲಾಜಿಸ್ಟಿಕ್ಸ್ ಸೇವೆಯ ಸಂಯೋಜಿತ ಕೊಡುಗೆಯಾಗಿದ್ದು, ಚಿಲ್ಲರೆ ವ್ಯಾಪಾರಿಗಳು, ಹೈಪರ್‌ಮಾರ್ಕೆಟ್‌ಗಳು, ಔಷಧಾಲಯಗಳು ಗ್ರಾಹಕರಿಗೆ ತ್ವರಿತವಾಗಿ ಸೇವೆ ಸಲ್ಲಿಸಲು ಅನುವು ಮಾಡಲಿದೆ. ”
2016 ರಲ್ಲಿ ಪ್ರಾರಂಭವಾದ, ಶಿಪ್‌ರಾಕೆಟ್ ಇ-ಕಾಮರ್ಸ್ ವಲಯದಲ್ಲಿ ಕಾರ್ಯನಿರ್ವಹಿಸುವ ಎಂಎಸ್‌ಎಂಇಗಳೊಂದಿಗೆ ಕೆಲಸ ಮಾಡುತ್ತದೆ. 26000 ಪಿನ್ ಕೋಡ್‌ಗಳಲ್ಲಿ ಸುಮಾರು 220 ದೇಶಗಳಿಗೆ ಸಾಗಣೆಯನ್ನು ಇದು ಒದಗಿಸುತ್ತದೆ. ಇಂದು, ಈ ಬ್ರಾಂಡ್ 1.5 ಲಕ್ಷ ಮಾರಾಟಗಾರರನ್ನು ಹೊಂದಿದೆ ಮತ್ತು 15 ಕೊರಿಯರ್ ಪಾಲುದಾರರೊಂದಿಗೆ ಕಾರ್ಯನಿರ್ವಹಿಸುತ್ತದೆ
City Today News
(citytoday.media)
9341997936
