
ಬೆಂಗಳೂರು: ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟುವಲ್ಲಿ ಶ್ರಮಿಸುತ್ತಿರುವ ‘ಕೊರೊನಾ ವಾರಿಯರ್ಸ್’ಗಳ ಬಳಕೆಗಾಗಿ ಎಂಜಿ ಮೋಟಾರ್ ಇಂಡಿಯಾ ಸಂಸ್ಥೆಯು 100 ಎಂಜಿ ಹೆಕ್ಟರ್ ಕಾರನ್ನು ಒದಗಿಸಿದೆ. ಈ ಕಾರುಗಳಿಗೆ ಸಂಸ್ಥೆಯು ಇಂಧನ ಹಾಗು ಚಾಲಕರನ್ನು ಸಹ ಒದಗಿಸಿದೆ.
ಡಾಕ್ಟರ್ಸ್, ಪೊಲೀಸ್, ಆರೋಗ್ಯ ಸಿಬ್ಬಂದಿ ಹಾಗು ಸ್ಥಳೀಯ ಸರ್ಕಾರಿ ಅಧಿಕಾರಿಗಳು ಈ ಕಾರಿನ ಬಳಕೆ ಮಾಡಬಹುದಾಗಿದೆ. ದೇಶದಾದ್ಯಂತ ಇರುವ ತನ್ನ ಡಿಲರ್ಸ್ ನೆಟ್ ವರ್ಕ್ ಸಹಾಯದಿಂದ ಸಂಸ್ಥೆಯು ಈ ವಾಹನಗಳನ್ನು ನೀಡಲು ಮುಂದಾಗಿದೆ. ಈ ವಾಹನಗಳು ‘ಎಂಜಿ ಡಿಸ್ಇನ್ಫೆಕ್ಟ್ ಅಂಡ್ ಡೆಲಿವರ್’ ಪ್ರೋಸೆಸ್ ಅನ್ನು ಒಳಗೊಂಡಿರುತ್ತದೆ. ಇದರಿಂದ ವಾಹನದಲ್ಲಿ ವೈರಸ್ ಗಳು ಇಲ್ಲದಂತೆ ನೋಡಿಕೊಳ್ಳಬಹುದು.
ಈ ಸಾಂಕ್ರಾಮಿಕ ರೋಗದ ಪರಿಸ್ಥಿತಿಯಲ್ಲಿ ಎಂಜಿ ಮೋಟಾರ್ ಸಂಸ್ಥೆಯು ಸಮುದಾಯಗಳಿಗೆ ಬೆಂಬಲ ನೀಡುತ್ತಿದೆ. ಕೊರೊನಾ ವೈರಸ್ ಬೆದರಿಕೆಯನ್ನು ಎದುರಿಸಲು ಕಾರು ತಯಾರಕರು ವೆಂಟಿಲೇಟರ್‌ಗಳನ್ನು ದಾನ ಮಾಡಿದ್ದಾರೆ ಮತ್ತು ಆರೋಗ್ಯ ಮತ್ತು ನೈರ್ಮಲ್ಯ ಕಿಟ್, ಪಿಪಿಇ ಕಿಟ್‌ಗ, ಸರ್ಜಿಕಲ್ ಮಾಸ್ಕ್‌ಗಳು, ಸ್ಯಾನಿಟೈಜರ್‌ಗಳು, ಸ್ಯಾನಿಟೈಜರ್ ಸ್ಪ್ರೇಯರ್‌ಗಳು, ಆಹಾರ ಮತ್ತು ರೇಷನ್ ಕಿಟ್‌ಗಳನ್ನು ಸಹ ಸಂಸ್ಥೆಯು ವಿತರಿಸಿದೆ.
City Today News
(citytoday.media)
9341997936
