ಸೋಂಕಿನ ಸರಪಳಿ ಮುರಿಯುವುದಕ್ಕಾಗಿ ಸಹಾಯ ಮಾಡಲು ಮೇಲ್ಮೈಯನ್ನು ಸ್ವಚ್ಚವಾಗಿ ಮತ್ತು ಸೋಂಕುರಹಿತವಾಗಿ ಇರಿಸಿಕೊಳ್ಳುವ ಅಗತ್ಯವನ್ನು ಈ ಅಭಿಯಾನ ಬಿಂಬಿಸುತ್ತದೆ
ನ್ಯಾಷನಲ್, ಏಪ್ರಿಲ್ 20, 2020 – ರೋಗಾಣುಗಳ ವಿರುದ್ಧ ಹೋರಾಡಲು ಸೋಂಕು ನಿವಾರಕತೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ, RB ಯ ಮುಂಚೂಣಿಯ ಸೋಂಕು ನಿವಾರಕ ಬ್ರಾಂಡ್ ಲೈಜೋಲ್, ರಾಷ್ಟ್ರವ್ಯಾಪಿ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಿದೆ. #DisinfectToProtect ಅಭಿಯಾನ ಸೋಂಕಿನ ಸರಪಳಿಯನ್ನು ಮುರಿಯಲು ಸಹಾಯ ಮಾಡಲು ಮೇಲ್ಮೈಗಳನ್ನು ಸ್ವಚ್ಚವಾಗಿ ಮತ್ತು ಸೋಂಕು ರಹಿತವಾಗಿಡುವ ಅಗತ್ಯತೆಯ ಬಗ್ಗೆ ಜನರಿಗೆ ಶಿಕ್ಷಣ ನೀಡುವುದರ ಮೇಲೆ ಮುಖ್ಯ ಗಮನ ಹರಿಸುತ್ತದೆ.
ಜಾಗೃತಿ ಅಭಿಯಾನದ ಪ್ರಾರಂಭದ ಕುರಿತು ಮಾತನಾಡುತ್ತಾ, ದಕ್ಷಿಣ ಏಷ್ಯಾದ RB ಹೈಜೀನ್‍ನ ಹಿರಿಯ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ನರಸಿಂಹನ್ ಈಶ್ವರ್ ಅವರು ಹೀಗೆ ಹೇಳಿದ್ದಾರೆ, “ಭಾರತೀಯ ರಾಜ್ಯಗಳಲ್ಲಿನ ಮುಂಚೂಣಿಯ ಕಾರ್ಮಿಕರು ಮತ್ತು ಆರೋಗ್ಯ ಸಂಸ್ಥೆಗಳನ್ನು ಬೆಂಬಲಿಸಲು 1 ಮಿಲಿಯನ್ ಲೀಟರ್ ಲೈಜೋಲ್ ಮತ್ತು ಹಾರ್ಪಿಕ್ ದಾನ ಮಾಡುವ ನಮ್ಮ ಪ್ರತಿಜ್ಞೆಯ ನಂತರ, ನಾವು ಈಗ ನಮ್ಮ ಗ್ರಾಹಕರಿಗೆ ಸರಿಯಾದ ಮಾಹಿತಿಯೊಂದಿಗೆ ಶಿಕ್ಷಣ ನೀಡಲು ಹೊರಟಿದ್ದೇವೆ. ಅದು ಅವರಿಗೆ ಸೋಂಕಿನ ಸರಪಳಿಯನ್ನು ಮುರಿಯಲು ಸಹಾಯ ಮಾಡುತ್ತದೆ”.

ಈ ಅಭಿಯಾನದಲ್ಲಿ ಕರೀನಾ ಕಪೂರ್ ಖಾನ್, ಸೈಫ್ ಅಲಿ ಖಾನ್, ಗಣೇಶ್ ವೆಂಕಟರಾಂ, ಟ್ವಿಂಕಲ್ ಖನ್ನಾ, ರಿತೇಶ್ ದೇಶ್‍ಮುಖ್ ಮತ್ತು ಜೆನೆಲಿಯಾ ಡಿಸೋಜಾ ಸೇರಿದಂತೆ ಚಲನಚಿತ್ರೋದ್ಯಮದ ಪ್ರಮುಖ ನಟರು ಸೇರಿಕೊಂಡಿದ್ದಾರೆ. ಮನೆಯಲ್ಲಿ ಚಿತ್ರೀಕರಿಸಲಾದ ಹಲವಾರು ಕಿರು-ಶೈಕ್ಷಣಿಕ ಚಲನಚಿತ್ರಗಳನ್ನು ತಯಾರಿಸಲಾಗುತ್ತದೆ. ಮನೆಯಲ್ಲಿಯೇ ಇರಿ ಮತ್ತು ಆಗಾಗ್ಗೆ ಬಳಸುವ ಮೇಲ್ಮೈಗಳನ್ನು ಸೋಂಕು ರಹಿತಗೊಳಿಸಿ ಎಂದು ಈ ಚಲನ ಚಿತ್ರಗಳೂ ಸಂದೇಶ ಸಾರುತ್ತವೆ.
ದಕ್ಷಿಣ ಏಷ್ಯಾದ RB ಹೈಜೀನ್‍ನ CMO ಮತ್ತು ಮಾರ್ಕೆಟಿಂಗ್ ನಿರ್ದೇಶಕ ಸುಖ್ಲೀನ್ ಅನೇಜಾರವರು, ಹೀಗೆ ಹೇಳಿದ್ದಾರೆ, “ಈ ಸಮಯದಲ್ಲಿ, ವೈರಸ್‍ಗಳ ವಿರುದ್ಧ ರಕ್ಷಣೆ ಮತ್ತು ಮುನ್ನೆಚ್ಚರಿಕೆಗಳು ಪ್ರಮುಖವಾಗಿವೆ. ನಿಯಮಿತವಾಗಿ ಕೈ ತೊಳೆಯುವುದು, ಮೇಲ್ಮೈಗಳನ್ನು ಸೋಂಕು ರಹಿತಗೊಳಿಸುವುದು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಇತ್ಯಾದಿಗಳಿಂದ ಮನೆಯಲ್ಲಿ ಉತ್ತಮ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಅತ್ಯಂತ ನಿರ್ಣಾಯಕವಾಗಿದೆ. ಈ ಮಾರಕ ಸೋಂಕಿನ ಸರಪಳಿಯನ್ನು ಮುರಿಯಲು ಸಹಾಯ ಮಾಡುವ ಏಕೈಕ ಮಾರ್ಗವಾಗಿದೆ. ಲೈಜೋಲ್‍ನ #DisinfectToProtect ಅಭಿಯಾನದೊಂದಿಗೆ ನಾವು ನೆಲವನ್ನು ಮಾತ್ರವಲ್ಲದೆ ಟ್ಯಾಬ್ಲೆಟ್‍ಗಳು, ಕಿಚನ್ ಕೌಂಟರ್‍ಗಳು, ಡೋರ್ ಹ್ಯಾಂಡಲ್‍ಗಳು ಮುಂತಾದ ಬಹು ಮೇಲ್ಮೈಗಳನ್ನು ಸೋಂಕುರಹಿತಗೊಳಿಸುವ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಬಯಸುತ್ತೇವೆ. ಈ ಅಭಿಯಾನದ ಮೂಲಕ ನಾವು ಜಾಗೃತಿ ಮೂಡಿಸುವಲ್ಲಿ ಮತ್ತು ಜಗತ್ತನ್ನು ಸ್ವಚ್ಚ ಮತ್ತು ಆರೋಗ್ಯಕರವಾಗಿ ರೂಪಿಸುವಲ್ಲಿ ನಮ್ಮ ಕೈಲಾದಷ್ಟು ಮಾಡಬಹುದು ಎಂದು ನಾವು ಭಾವಿಸುತ್ತೇವೆ.”
ಸಾರ್ವಜನಿಕ ಸೇವಾ ಸಂದೇಶವನ್ನು ಮೆಕ್‍ಕ್ಯಾನ್ ಒಟ್ಟಿಗೆ ಸೇರಿಸಿದ್ದಾರೆ ಮತ್ತು ಸಾಮಾಜಿಕ ದೂರವಾಣಿ, ಕೈ ತೊಳೆಯುವುದು ಮತ್ತು ಮನೆ ಸೋಂಕುಗಳಂತಹ ವಿವಿಧ ವೇದಿಕೆಗಳಲ್ಲಿ ಡಬ್ಲ್ಯೂ.ಎಚ್.ಒ(WHO) ಸೂಚಿಸಿರುವ ಅಗತ್ಯ ಕ್ರಮಗಳನ್ನು ಪ್ರೋತ್ಸಾಹಿಸುತ್ತಾರೆ.
ಹೆಚ್ಚಿನ ಮಾಹಿತಿಗಳಿಗಾಗಿ ದಯವಿಟ್ಟು ಇಲ್ಲಿ ಸಂಪರ್ಕಿಸಿ https://www.rb.com
City Today News
(citytoday.media)
9341997936
