ಮಾನ್ಯ ಜಲಸಂಪನ್ಮೂಲ ಸಚಿವರ ಕಚೇರಿಯಲ್ಲಿ ಭಾರತೀಯ ಜನತಾ ಪಾರ್ಟಿ ಯ ಹಿರಿಯ ನಾಯಕರ‌ ಸಭೆ- ಗೋಕಾಕ್ ತಾಲೂಕಿನಲ್ಲಿನ ಲಾಕ್ ಡೌನ್ ಪರಿಸ್ಥಿತಿಯನ್ನು ಸಭೆಯಲ್ಲಿ ಪರಾಮರ್ಶಿಸಲಾಯಿತು

ಗೋಕಾಕ್ ನಗರದಲ್ಲಿರುವ ಮಾನ್ಯ ಜಲಸಂಪನ್ಮೂಲ ಸಚಿವರ ಕಚೇರಿಯಲ್ಲಿ ಇಂದು ಭಾರತೀಯ ಜನತಾ ಪಾರ್ಟಿ ಯ ಹಿರಿಯ ನಾಯಕರ‌ ಸಭೆ ಬೆಳಗ್ಗೆ ನಡೆಯಿತು. ಗೋಕಾಕ್ ತಾಲೂಕಿನಲ್ಲಿನ ಲಾಕ್ ಡೌನ್ ಪರಿಸ್ಥಿತಿಯನ್ನು ಸಭೆಯಲ್ಲಿ ಪರಾಮರ್ಶಿಸಲಾಯಿತು. ಲಾಕ್ ಡೌನ್ ಮುಗಿಯುವವರೆಗೂ ಕೂಲಿ ಕಾರ್ಮಿಕರಿಗೆ, ದಿನಗೂಲಿ ಕೆಲಸಗಾರರಿಗೆ ಮೂರು ಹೊತ್ತು ಊಟ ಒದಗಿಸಬೇಕು. ಭಾಜಪ ಕಾರ್ಯಕರ್ತರು ಕೋವಿಡ್19 ಸೋಂಕು ನಿರ್ಮೂಲನೆ ಮಾಡುವಲ್ಲಿ ತೀವ್ರ ಶ್ರಮ ವಹಿಸಿದ್ದಾರೆ. ಇಡೀ ಗೋಕಾಕ್ ನಗರದ ಜನತೆ, ಸರ್ಕಾರದ ಮನವಿಗೆ ಓಗೊಟ್ಟು ಮನೆಯಲ್ಲಿಯೇ ಇದ್ದಾರೆ. ಕೊರೋನಾ ಸೋಂಕಿನ ಯಾವುದೇ ಪ್ರಕರಣಗಳು ನಮ್ಮ ನಗರದಲ್ಲಿ ಇರದಿದ್ದರೂ ಮುಂದಿನ‌ ಭವಿಷ್ಯದ ದೃಷ್ಟಿಯಿಂದ ಎಚ್ಚರಿಕೆಯಿಂದ ಇರಬೇಕು ಎಂದು ಸಚಿವ ರಮೇಶ್ ಜಾರಕಿಹೊಳಿ ಯವರು ಪಕ್ಷದ‌‌ ನಾಯಕರಿಗೆ ಸೂಚಿಸಿದರು.

ಸಾಮಾಜಿಕ ಅಂತರ ಕಾಪಾಡಿಕೊಂಡು ನಡೆದ ಈ‌ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ್, ಮಾಜಿ ಜಿಲ್ಲಾಧ್ಯಕ್ಷ ಈರಪ್ಪ ಕಡಾಡಿ, ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ್ ಬಿಜೆಪಿ ಗೋಕಾಕ್ ಮಾಜಿ ನಗರಾಧ್ಯಕ್ಷ ಶಶಿಧರ ದೇಮಶೆಟ್ಟಿ, ಗ್ರಾಮೀಣ ಅಧ್ಯಕ್ಷ ಯಲಿಗಾರ್, ಬಿಜೆಪಿ ಮುಖಂಡ ಸುಭಾಷ್ ಪಾಟೀಲ್, ಸೇರಿದಂತೆ ಅನೇಕ ನಾಯಕರು ಉಪಸ್ಥಿತರಿದ್ದರು.

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.