• 5 ಸುಲಭ ಹಂತಗಳಲ್ಲಿ ತಡೆರಹಿತ ಮತ್ತು ಸುರಕ್ಷಿತ ಆನ್‍ಲೈನ್ ಕಾರ್ ಬುಕಿಂಗ್ ಅನುಭವ
• ಬಹು ಪಾವತಿ ಆಯ್ಕೆಗಳೊಂದಿಗೆ ಸಮಗ್ರ ಮತ್ತು ಸುಲಭ ಪ್ರವೇಶದಲ್ಲಿ ಉತ್ಪನ್ನ ಮತ್ತು ಮಾರಾಟಗಾರರ ಮಾಹಿತಿ
• ಗ್ರಾಹಕರು ತಮ್ಮ ಮನೆಯಲ್ಲಿ ಕುಳಿತುಕೊಂಡೇ ತಮ್ಮ ಹೋಂಡಾ ಕಾರನ್ನು ಅನುಕೂಲಕರವಾಗಿ ಬುಕ್ ಮಾಡಬಹುದು

ನವದೆಹಲಿ, ಏಪ್ರಿಲ್ 27, 2020: ತನ್ನ ಗ್ರಾಹಕರಿಗೆ ಅನುಕೂಲಕರ ಖರೀದಿ ಅನುಭವವನ್ನು ನೀಡುವ
ಉದ್ದೇಶವಾಗಿ, ಭಾರತದ ಪ್ರಮುಖ ಪ್ರೀಮಿಯಂ ಕಾರುಗಳ ತಯಾರಕರಾದ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (HCIL) ಇಂದು ಅದರ ಕಾರ್ಪೊರೇಟ್ ವೆಬ್‍ಸೈಟ್ Honda-from-Home ಮೂಲಕ ತನ್ನ ‘ಹೋಂಡಾ ಫ್ರಂ ಹೋಂ’ ಆನ್‍ಲೈನ್ ಬುಕಿಂಗ್ ಪ್ಲಾಟ್‍ಫಾರ್ಮ್ ಅನ್ನು ಪ್ರಕಟಿಸಿದೆ. ವ್ಯಾಪಕವಾಗಿ
ಹಬ್ಬಿರುವ ಡೀಲರ್‍ಶಿಪ್ ಮೂಲಕ ಮಾರಾಟ ಪ್ರಕ್ರಿಯೆ ಬೆಂಬಲ ಜೊತೆಗೆ ಈ ಡಿಜಿಟಲ್ ಪರಿಹಾರದ ಮೂಲಕ ಗ್ರಾಹಕರು ಡೀಲರ್‍ಶಿಪ್ ಶಾಪ್‍ಗೆ ಬೇಟಿ ನೀಡದೆಯೇ ತಮ್ಮ ಮನೆಯಲ್ಲಿ ಕುಳಿತುಕೊಂಡು ತಮ್ಮ ಕಾರು ಖರೀದಿ ಮಾಢಬಹುದಾಗಿದೆ.
ಈ ವೇದಿಕೆ ಗ್ರಾಹಕರಿಗೆ ಉತ್ಪನ್ನ ಆಯ್ಕೆಗಳ ಮೂಲಕ ಬ್ರೌಸ್ ಮಾಡಲು, ಅವರ ಆದ್ಯತೆಯ ಮಾರಾಟಗಾರರನ್ನು ಆಯ್ಕೆ ಮಾಡಲು ಮತ್ತು ಮುಂದುವರೆದು, ಆನ್‍ಲೈನ್‍ನಲ್ಲಿ ತಮ್ಮ ಕಾರನ್ನು ಕಾಯ್ದಿರಿಸಲು ಅವಕಾಶ ಮಾಡಿಕೊಡುತ್ತದೆ. ಯಾವುದೇ ಸ್ಥಳದಿಂದ ದಿನದ ಎಲ್ಲಾ ಸಮಯಗಳಲ್ಲೂ ಪ್ರವೇಶ ಒದಗಿಸುತ್ತಾ ಸರಳವಾದ ಬುಕ್ಕಿಂಗ್ ಪ್ರಕ್ರಿಯೆ ಜೊತೆಗೆ ಬಂದಿರುವ ಈ ಡಿಜಿಟಲ್ ಬುಕ್ಕಿಂಗ್ ಪ್ಲಾಟ್‍ಫಾರ್ಮ್, ಊಅIಐ ನ ಭಾರತದಾದ್ಯಂತ ಹಬ್ಬಿರುವ ಡೀಲರ್‍ಶಿಪ್‍ಗೆ ಸಂಪರ್ಕ ಒದಗಿಸಲಿದೆ.
ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್‍ನ ಹಿರಿಯ ಉಪಾಧ್ಯಕ್ಷ ಶ್ರೀ ರಾಜೇಶ್ ಗೋಯಲ್, “ಹೋಂಡಾದಲ್ಲಿ ನಮ್ಮ ಗ್ರಾಹಕರಿಗೆ ‘ಖರೀದಿಯ ಸಂತೋಷ’ ನೀಡುವುದು ನಮ್ಮ ಸಾಂಸ್ಥಿಕ ತತ್ವಶಾಸ್ತ್ರದ ತಿರುಳು. ನಮ್ಮ
ಹೊಸದಾಗಿ ಪರಿಚಯಿಸಲಾಗಿರುವ ‘ಹೋಂಡಾ ಫ್ರಂ ಹೋಂ’ ಸೌಲಭ್ಯವು ಆನ್‍ಲೈನ್‍ನಲ್ಲಿ ತನ್ನ ಖರೀದಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಗ್ರಾಹಕರಿಗೆ ಸರಳೀಕೃತ ಮತ್ತು ಸುರಕ್ಷಿತ ಅನುಭವವನ್ನು ನೀಡುತ್ತದೆ. ಗ್ರಾಹಕರು ಈಗ ತಮ್ಮ ಮನೆಗಳ ಆರಾಮದಿಂದ ತಮ್ಮ ಹೋಂಡಾ ಕಾರನ್ನು ಅನುಕೂಲಕರವಾಗಿ ಕಾಯ್ದಿರಿಸಬಹುದು. ಈ ಪ್ಲಾಟ್‍ಫಾರ್ಮ್ ಕಾರು ರಿಟೇಲ್ ಹೋಂಡಾದ ಡಿಜಿಟಲೀಕರಣದ ಒಂದು ಭಾಗವಾಗಿದ್ದು ಅದು ಅನುಕೂಲಕ್ಕಾಗಿ ಮಾತ್ರವಲ್ಲದೆ ದಕ್ಷತೆಯನ್ನೂ ನೀಡುತ್ತದೆ” ಎಂದರು
City Today News
(citytoday.media)
9341997936
