ರೂ.9,85,09,228/- ಗಳನ್ನು ಮಾನ್ಯ ಮುಖ್ಯಮಂತ್ರಿಗಳ ‘ಕೊವಿಡ್ ಪರಿಹಾರ ನಿಧಿ’ಗೆ ಚೆಕ್ ಮೂಲಕ ಸನ್ಮಾನ್ಯ ಮುಖ್ಯಮಂತ್ರಿಯವರಿಗೆ, ಮಾನ್ಯ ಉಪಮುಖ್ಯ ಮಂತ್ರಿಗಳು, ಸಾರಿಗೆ ಇಲಾಖೆ ಶ್ರೀ.ಲಕ್ಷ್ಮಣ ಸಂ.ಸವದಿ ರವರು ನೀಡಿರುತ್ತಾರೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕುಸಂಸ್ಥೆಗಳ ಸಮಸ್ತ ಅಧಿಕಾರಿ ಮತ್ತು ಸಿಬ್ಬಂದಿಗಳ ಒಂದು ದಿನದ ವೇತನದ ಮೊತ್ತ ರೂ.9,85,09,228/- ಗಳನ್ನು ಮಾನ್ಯ ಮುಖ್ಯಮಂತ್ರಿಗಳ ‘ಕೊವಿಡ್ ಪರಿಹಾರ ನಿಧಿ’ಗೆ ಚೆಕ್ ಮೂಲಕ ದಿನಾಂಕ:13/05/2020ರಂದು ಸನ್ಮಾನ್ಯ ಮುಖ್ಯಮಂತ್ರಿಯವರಿಗೆ, ಮಾನ್ಯ ಉಪಮುಖ್ಯಮಂತ್ರಿಗಳು, ಸಾರಿಗೆ ಇಲಾಖೆ ಶ್ರೀ.ಲಕ್ಷ್ಮಣ ಸಂ.ಸವದಿ ರವರು ನೀಡಿರುತ್ತಾರೆ.

ಈ ಸಂದರ್ಭದಲ್ಲಿ, ಶ್ರೀ.ನಂದೀಶ್ ರೆಡ್ಡಿ, ಅಧ್ಯಕ್ಷರು, ಬಿಎಂಟಿಸಿ,ಶ್ರೀ.ಗೌರವ ಗುಪ್ತ ಭಾಆಸೇ, ಪ್ರಧಾನ‌ ಕಾರ್ಯದರ್ಶಿಗಳು, ಸಾರಿಗೆ ಇಲಾಖೆ, ಶ್ರೀ.ಶಿವಯೋಗಿ ಸಿ.ಕಳಸದ, ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು,
ಕೆ ಎಸ್‌ ಆರ್ ಟಿ ಸಿ, ಡಾ.ರಾಮ್ ನಿವಾಸ್ ಸಪೆಟ್, ಭಾಪೊಸೇ, ನಿರ್ದೇಶಕರು ( ಭ&ಜಾ) , ಶ್ರೀಮತಿ ಕವಿತಾ ಎಸ್ ಮನ್ನಿಕೇರಿ,ಭಾ.ಆ.ಸೇ, ನಿರ್ದೇಶಕರು (ಸಿಬ್ಬಂದಿ &ಪರಿಸರ) ಕೆ ಎಸ್‌ ಆರ್ ಟಿ ಸಿ ರವರುಗಳು ಮತ್ತು ಶ್ರೀಮತಿ ಹೆಚ್.ಕೆ.ರಮಾಮಣಿ ಮುಖ್ಯ ಲೆಕ್ಕಾಧಿಕಾರಿ /ಆ.ಸ, ಕೆ ಎಸ್ ಆರ್ ಟಿ ಸಿ, ರವರುಗಳು ಉಪಸ್ಥಿತರಿದ್ದರು.

ಕಳೆದ ಎರಡು ತಿಂಗಳುಗಳಿಂದ ಸಾರಿಗೆ ನಿಗಮಗಳಲ್ಲಿ ಯಾವುದೇ ಬಸ್ ಕಾರ್ಯಚರಣೆ ಆಗದೆ , ನಿಗಮಗಳ ಆದಾಯ ಸಂಪೂರ್ಣ ನಿಂತಿರುತ್ತದೆ.
ವೇತನ ನೀಡಲೂ ಹಣವಿಲ್ಲದಂತಹ ಸ್ಥಿತಿಯಲ್ಲಿದ್ದ ಸಾರಿಗೆ ನಿಗಮಗಳಿಗೆ, ಇದೇ‌ ಮೊದಲ ಬಾರಿಗೆ ಸಾರಿಗೆ ನಿಗಮಗಳ ಇತಿಹಾಸದಲ್ಲಿ, ಸರ್ಕಾರವು ಸಾರಿಗೆ ನಿಗಮಗಳ ಸಿಬ್ಬಂದಿಗಳ ವೇತನಕ್ಕೆ ಹಣ ಬಿಡುಗಡೆ ಮಾಡಿ ಸಾರಿಗೆ ಸಂಸ್ಥೆಗಳ ಬೆನ್ನಿಗೆ ನಿಂತು, ಸಿಬ್ಬಂದಿಗಳಲ್ಲಿ ಆತ್ಮಸ್ಥೆರ್ಯ ತುಂಬಿದ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ,
ಮಾನ್ಯ ಉಪಮುಖ್ಯಮಂತ್ರಿಗಳು , ಸಾರಿಗೆ ಇಲಾಖೆ ರವರು ಧನ್ಯವಾದ ಪತ್ರದೊಂದಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.