ಕೊರೊನಾ ಕ್ಕೆ ಭಯಪಡಬೇಡಿ – ಸಿದ್ಧಾರೂಢ ಮಿಷನ್ ಅಧ್ಯಕ್ಷ ಡಾ ಆರೂಢಭಾರತೀ ಸ್ವಾಮೀಜಿ

ಕೊರೊನಾ ಕ್ಕೆ ಭಯಪಡಬೇಡಿ ಕೊರಾನಾದಿಂದ ಯಾರೂ ಪಡಬೇಕಾಗಿಲ್ಲ ಎಂದು ಸಿದ್ಧಾರೂಢ ಮಿಷನ್ ಅಧ್ಯಕ್ಷ ಡಾ. ಆರೂಢಭಾರತೀ ಸ್ವಾಮೀಜಿ ಹೇಳಿದರು. ಇಂದು ಬೆಳಿಗ್ಗೆ ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಮಿಷನ್ ಆಶ್ರಮದಲ್ಲಿ ಕೆಂಗೇರಿಯ ವಂಡರಿಂಗ್ ಟು ಲೈಟ್ ಫೌಂಡೇಶನ್ ವತಿಯಿಂದ ವಲಸೆಕಾರ್ಮಿಕರಿಗೆ ದಿನಸಿಕಿಟ್ ವಿತರಿಸಿ ಆಶೀರ್ವಚನ ನೀಡಿದ ಅವರು ಕಾಯಿಲೆಗಳು ಈ ಜಗತ್ತಿಗೇನೂ ಹೊಸದಲ್ಲ. ಕಾಲರಾ ಪ್ಲೇಗ್ ಕ್ಯಾನ್ಸರ್ ಗಳನ್ನು ಕಂಡಿದ್ದೇವೆ. ಅವುಗಳ ಪೈಕಿ ಇದೂ ಒಂದು. ಸಾವು ಅನಿವಾರ್ಯ. ಅಪಘಾತ ವಿವಿಧ ಕಾಯಿಲೆಗಳಿಂದ ದೇಶದಲ್ಲಿ ಪ್ರತಿನಿತ್ಯ ಸಾವಿರಾರು ಜನ ಸಾಯುತ್ತಾರೆ. ಆದರೂ ಧೈರ್ಯದಿಂದ ಬದುಕುತ್ತಿದ್ದೇವೆ. ಹಾಗೆಯೇ ಕೊರಾನಾವನ್ನು ಧೈರ್ಯದಿಂದ ಎದುರಿಸಬೇಕು. ಸ್ವಚ್ಛತೆ ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಶಾಖಾಹಾರಿಗಳಾಗಿರೋಣ. ಹಸಿಶುಂಠಿ ಲವಂಗ ಮೆಣಸು ದಾಲ್ಚಿನ್ನಿ ಅರಿಷಿಣ ಬೆಲ್ಲಗಳಿಂದ ಕಷಾಯ ಮಾಡಿ ದಿನಕ್ಕೆರಡು ಬಾರಿ ಕುಡಿಯೋಣ.ಇದರಿಂದ ನಾವು ಕೊರಾನಾವನ್ನು ದೂರಿಡಬಹುದು. ಸಂಕಟದಲ್ಲಿರುವವರಿಗಾಗಿ ನಾಡು ರಾಷ್ಟ್ರದ ಅಭಿವೃದ್ಧಿಗಾಗಿ ಸರ್ಕಾರ ಅನೇಕ ಆರ್ಥಿಕ ಯೋಜನೆಗಳನ್ನು ರೂಪಿಸಿದ್ದು ಹಣವುಳ್ಳವರು ಉದಾರವಾಗಿ ಸರ್ಕಾರಕ್ಕೆ ನೆರವಾಗಬೇಕು ಎಂದು ನುಡಿದರು. ಶ್ರೀ ರಾಮಸ್ವಾಮೀಜಿ ಫೌಂಡೇಶನ್ ನ ಪ್ರಶಾಂತ ತರಫ್ದಾರ, ರಂಜಿತ್, ಉಮೇಶ್ ಮೊದಲಾದವರು ಉಪಸ್ಥಿತರಿದ್ದರು.

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.