
ಚಾಲಕರ ಒಕ್ಕೂಟಗಳ ಮನವಿಗೆ ಸ್ಪಂಧಿಸಿದ ಸರ್ಕಾರ
ಬೆಂಗಳೂರು: ಕೊರೋನ ಸೋಂಕಿನಿಂದ ದೇಶದಲ್ಲಿ ಲಾಕ್ ಡೌನ್ ನಿಂದಾಗಿ ತೀವ್ರ ಸಂಕಷ್ಟದಲ್ಲಿದ್ದ ಚಾಲಕರಿಗೆ 5000 ನೆರವು ಪಡೆಯಲು ಚಾಲನ ಪತ್ರ, ಆದಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರಗಳನ್ನು ನೀಡಿದರೆ ಸಾಕು ಎಂದು ಸಾರಿಗೆ ಸಚಿವರಾದ ಲಕ್ಷ್ಮಣಸವದಿ ಇಂದು ತಿಳಿಸಿದರು.
ಇಂದು ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಸಾರಿಗೆ ಆಯುಕ್ತ ಶಿವಕುಮಾರ್, ಕೆಪಿಸಿಸಿ ನಾಯಕರು, ಶಾಸಕರಾದ ದಿನೇಶ್‍ಗುಂಡೂರಾವ್ ಹಾಗೂ ಚಾಲಕರ ಒಕ್ಕೂಟಗಳು, 5000 ಹಣ ಪಡೆಯಲು ಚಾಲರಿಗೆ ಯಾವುದೇ ಹೆಚ್ಚು ಷರತ್ತು ಹಾಕದಂತೆ ಮನವಿ ಮಾಡಲಾಯಿತು.
ಚಾಲಕರು ಸಂಕಷ್ಟದಲ್ಲಿರುವುದನ್ನು ಕಂಡು ಮುಖ್ಯಮಂತ್ರಿಗಳು ಆಟೋ ಮತ್ತು ಕ್ಯಾಬ್ ಚಾಲಕರಿಗೆ 5000 ಸಾವಿರ ರೂ. ಹಣವನ್ನು ಪರಿಹಾರವಾಗಿ ನೀಡಲು ಉದ್ದೇಶಿಸಿ ಚಾಲಕರಿಂದ ಸೇವಾ ಸಿಂಧು ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಇದಕ್ಕೆ ಪ್ಯಾನ್‍ಕಾರ್ಡ್ ಮತ್ತು ಪಿಟ್‍ನೆಸ್ ಸರ್ಟಿಫಿಕೇಟ್ ಕಡ್ಡಾಯಗೊಳಿಸಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಕಾರಣ ಹೊಸ ನಿಯಮ ತೆಗೆದು ಹಾಕುವ ಮೂಲಕ ಚಾಲಕರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ.
ರಾಷ್ಟೀಯ ಚಾಲಕರ ಒಕ್ಕೂಟದ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ
City Today News
(citytoday.media)
9341997936
